ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ 23.70 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಜಪ್ತಿ !

ಲಕ್ಷಾಂತರ ರೂಪಾಯಿಗಳ ಮದ್ಯ ಮತ್ತು ಮಾದಕ ಪದಾರ್ಥ ವಶ !

ಮುಂಬಯಿ – ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಜಾರಿಗೊಳಿಸಿದ ನೀತಿ ಸಂಹಿತೆಯ ನಂತರ ರಾಜ್ಯದಲ್ಲಿ 23.70 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ಮೊತ್ತವನ್ನು ಚುನಾವಣಾ ಆಯೋಗ ಜಪ್ತಿ ಪಡಿಸಿಕೊಂಡಿದೆ. ರಾಜ್ಯದಲ್ಲಿ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ, ಮಾದಕ ಪದಾರ್ಥ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

1. ಅತ್ಯಧಿಕ 3.59 ಕೋಟಿ ರೂಪಾಯಿಯಷ್ಟು ನಗದನ್ನು ಮುಂಬಯಿ ಉಪನಗರದಿಂದ, ಮುಂಬಯಿ ನಗರದಲ್ಲಿ 2.08 ಕೋಟಿ ರೂಪಾಯಿ ನಗದು ಮತ್ತು ನಾಗ್ಪುರದಲ್ಲಿ 1.61 ಕೋಟಿ ರೂಪಾಯಿ ಸಿಕ್ಕಿದೆ. ಈ ಎಲ್ಲ ಮೊತ್ತವನ್ನು ಸಧ್ಯಕ್ಕೆ ಆದಾಯ ತೆರಿಗೆ ಇಲಾಖೆಯಲ್ಲಿ ಸಂಗ್ರಹಿಸಲಾಗಿದ್ದು, ಈ ವಿಷಯದಲ್ಲಿ ಕಾನೂನು ರೀತಿಯಲ್ಲಿ ತನಿಖೆ ನಡೆಯುತ್ತಿದೆ.

2. ರಾಜ್ಯದಲ್ಲಿ 14.84 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಪುಣೆಯಲ್ಲಿ 1 ಕೋಟಿ ಮೌಲ್ಯದ ಗರಿಷ್ಠ 3.24 ಲಕ್ಷ ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ನಾಗ್ಪುರದಿಂದ 66 ಸಾವಿರದ 878 ಲೀಟರ್, ಮುಂಬಯಿ ನಗರದಿಂದ 349 ಲೀಟರ್ ಮತ್ತು ಉಪನಗರದಿಂದ 20 ಸಾವಿರದ 664 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

3. ರಾಜ್ಯಾದ್ಯಂತ ಚುನಾವಣಾ ಆಯೋಗ ಇದುವರೆಗೆ ಕೈಗೊಂಡಿರುವ ಕ್ರಮಗಳಲ್ಲಿ ಒಟ್ಟು 6 ಲಕ್ಷದ 99 ಸಾವಿರದ 979 ಗ್ರಾಂ ಮಾದಕ ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದೆ. ರಾಯಗಢದಲ್ಲಿ ಗರಿಷ್ಠ 1 ಲಕ್ಷದ 9 ಸಾವಿರದ 585 ಗ್ರಾಂ ಮಾದಕ ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದ್ದು, ನಂತರ ಮುಂಬಯಿ ನಗರ ಮತ್ತು ಉಪನಗರಗಳಲ್ಲಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ವಶಪಡಿಸಿಕೊಂಡಿರುವ ಹಣ ಇಷ್ಟು ಇದ್ದರೆ, ವಶಪಡಿಸಿಕೊಳ್ಳದಿರುವ ಹಣ, ಮದ್ಯ ಮತ್ತು ಮಾದಕ ಪದಾರ್ಥಗಳ ವಿತರಣೆ ಎಷ್ಟು ಪ್ರಮಾಣದಲ್ಲಿ ಆಗಿರಬಹುದು ಎನ್ನುವ ವಿಚಾರವನ್ನೂ ಮಾಡದೇ ಇರುವುದೇ ಒಳಿತು !