‘ರಾಮಕೃಷ್ಣ ಮಿಶನ್’ನ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜರ ನಿಧನ

ಸ್ವಾಮಿ ಸ್ಮರಣಾನಂದ ಮಹಾರಾಜ

ಕೋಲಕಾತಾ – ‘ರಾಮಕೃಷ್ಣ ಮಿಶನ್’ ಸಂಘಟನೆಯ ಅಧ್ಯಕ್ಷ ಸ್ವಾಮಿ ಸ್ಮರಣಾನಂದರು ಮಾರ್ಚ್ 26 ರಂದು ನಿಧನರಾದರು. ಅವರು ತಮ್ಮ 95 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಕಳೆದ ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಸ್ವಾಮಿ ಸ್ಮರಣಾನಂದರು 2017 ರಲ್ಲಿ ‘ರಾಮಕೃಷ್ಣ ಮಿಶನ್’ ಅಧ್ಯಕ್ಷರಾಗಿದ್ದರು.

ಜನವರಿ 29, 2024 ರಂದು, ಅವರು ಮೂತ್ರದ ಸೋಂಕಿನಿಂದಾಗಿ ‘ರಾಮಕೃಷ್ಣ ಮಿಶನ್ ಸೇವಾ ಪ್ರತಿಷ್ಠಾನ’ಕ್ಕೆ ದಾಖಲಾಗಿದ್ದರು. ತದನಂತರ, ಅವರಿಗೆ ಉಸಿರಾಟದ ತೊಂದರೆ ಪ್ರಾರಂಭವಾಗಿದ್ದರಿಂದ ಮಾರ್ಚ್ 3 ರಂದು ‘ವೆಂಟಿಲೇಟರ್’ನಲ್ಲಿ ಇರಿಸಲಾಗಿತ್ತು. ಮಾರ್ಚ್ 26 ರಂದು ಸ್ವಾಮೀಜಿ ಕೊನೆಯುಸಿರೆಳೆದರು. ‘ರಾಮಕೃಷ್ಣ ಮಿಶನ್’ನ ವತಿಯಿಂದ ಸ್ವಾಮೀಜಿಯವರ ನಿಧನದ ವಾರ್ತೆಯನ್ನು ಅಧಿಕೃತವಾಗಿ ತಿಳಿಸಿದೆ. ಮಹಾರಾಜರು ರಾತ್ರಿ 8 ಗಂಟೆ 14 ನಿಮಿಷಕ್ಕೆ ಮಹಾಸಮಾಧಿಯನ್ನು ಪಡೆದಿದ್ದಾರೆಂದು `ರಾಮಕೃಷ್ಣ ಮಿಶನ’ ನಿಂದ ತಿಳಿಸಲಾಗಿದೆ.

ಪ್ರಧಾನಮಂತ್ರಿಗಳಿಂದ ಸಂತಾಪ

ಅವರ ನಿಧನದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ದೇಶದ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಪ್ರಧಾನಮಂತ್ರಿ ಮೋದಿಯವರು, `ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಶನ’ ಅಧ್ಯಕ್ಷರಾದ ಸ್ವಾಮಿ ಸ್ಮರಣಾನಂದಜಿ ಮಹಾರಾಜ್ ಅವರು ತಮ್ಮ ಜೀವನವನ್ನು ಆಧ್ಯಾತ್ಮ ಮತ್ತು ಸೇವೆಗೆ ಸಮರ್ಪಿಸಿದ್ದರು. ಮಹಾರಾಜರು ಅಸಂಖ್ಯಾತ ಮನಸ್ಸುಗಳ ಮತ್ತು ಬುದ್ಧಿವಾದಿಗಳ ಮೇಲೆ ತಮ್ಮ ಪ್ರಭಾವವನ್ನು ನಿರ್ಮಾಣ ಮಾಡಿದ್ದರು. ಅವರ ಕರುಣೆ ಮತ್ತು ಬುದ್ಧಿವಂತಿಕೆ ಭವಿಷ್ಯದ ಪೀಳಿಗೆಗೆ ಯಾವಾಗಲೂ ಸ್ಫೂರ್ತಿಯಾಗಿರಲಿದೆ.” ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಸ್ವಾಮೀಜಿಯವರೊಂದಿಗೆ 2020 ರಲ್ಲಿ ಬೇಲೂರು ಮಠಕ್ಕೆ ನೀಡಿದ ಭೇಟಿಯನ್ನು ನೆನಪು ಮಾಡಿಕೊಂಡರು.