ನವ ದೆಹಲಿ – ಕೇಂದ್ರ ಸರಕಾರವು ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಪ್ರಮುಖ ಸದಾನಂದ ದಾತೆ ಇವರನ್ನು ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ.ಯ) ಮಹಾಸಂಚಾಲಕರ ಸ್ಥಾನಕ್ಕೆ ನೇಮಕಗೊಳಿಸಿದೆ. ದಾತೆ ಇವರು ಮುಂಬಯಿಯಲ್ಲಿ ಸಹ ಪೊಲೀಸ ಆಯುಕ್ತರ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ ಅವರು ಮೀರಾ-ಭಾಯಿಂದರದ ಪೊಲೀಸ ಆಯುಕ್ತರು ಕೂಡ ಆಗಿದ್ದರು. ನವಂಬರ್ ೨೯, ೨೦೦೮ ರಂದು ಮುಂಬಯಿಯಲ್ಲಿ ನಡೆದ ಉಗ್ರರ ದಾಳಿಯ ಸಮಯದಲ್ಲಿ ಕಾಮಾ ಆಸ್ಪತ್ರೆಯಲ್ಲಿ ಅವರು ಭಯೋತ್ಪಾದಕರ ವಿರುದ್ಧ ಹೋರಾಡಿದ್ದರು. ಕಳೆದ ೩೦ ವರ್ಷಗಳಿಂದ ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್ ಸೇವೆಯಲ್ಲಿ ಅವರಿಗೆ ಇರುವ ಸುಧೀರ್ಘ ಅನುಭವದ ಆಧಾರದಲ್ಲಿ ಅವರು ‘ವರ್ದಿತಿಲ ಮಾಣಸಾಂಚ್ಯಾ ನೊಂದಿ’ (ಸಮವಸ್ತ್ರದಲ್ಲಿನ ಮನುಷ್ಯನ ಹಸ್ತಕ್ಷೇಪ) ಈ ಪುಸ್ತಕ ಬರೆದಿದ್ದಾರೆ.