ISI Interference in Judiciary: ಗುಪ್ತಚರ ಸಂಸ್ಥೆ ಐ.ಎಸ್.ಐ.ನಿಂದ ನ್ಯಾಯಾಲಯದ ಕಲಾಪಗಳಲ್ಲಿ ಹಸ್ತಕ್ಷೇಪ

ಇಸ್ಲಾಮಾಬಾದ್ ಉಚ್ಛನ್ಯಾಯಾಲಯದ ೬ ನ್ಯಾಯಾಧೀಶರ ಆರೋಪ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ ನ್ಯಾಯಾಂಗ ಕಲಾಪಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಇಸ್ಲಾಮಾಬಾದ್ ಉಚ್ಛನ್ಯಾಯಾಲಯದ ೬ ನ್ಯಾಯಾಧೀಶರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಮಂಡಳಿಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಈ ಪತ್ರದಲ್ಲಿ, ‘ಐ.ಎಸ.‌ಐ’ನ ಕೆಲವು ಅಧಿಕಾರಿಗಳು ನ್ಯಾಯಾಲಯದ ಕಲಾಪಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ ? ಈ ಕುರಿತು ಮಾಹಿತಿ ನೀಡಿದ್ದಾರೆ.

ಅಂತಹ ಹಸ್ತಕ್ಷೇಪದಿಂದ ಹಾಗೂ ಅಪಪ್ರಚಾರದಿಂದಾಗಿ ಓರ್ವ ನ್ಯಾಯಾಧೀಶರು ರಾಜೀನಾಮೆ ನೀಡಬೇಕಾಯಿತು. ಇದಾದ ನಂತರ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಲಾಯಿತು; ಆದರೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಸಂಪಾದಕೀಯ ನಿಲುವು

ಇದರಿಂದ ಐ.ಎಸ್.ಐ. ಮೂಲಕ ಪಾಕಿಸ್ತಾನದ ಸೇನೆಯು ಪಾಕಿಸ್ತಾನದ ಎಲ್ಲಾ ಸರಕಾರಿ ವ್ಯವಸ್ಥೆಗಳ ಮೇಲೆ ಅಧಿಕಾರವನ್ನು ಚಲಾಯಿಸುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !