Abhijit Gangopadhyay : ಗೋಡ್ಸೆ ಮ.ಗಾಂಧಿಯನ್ನು ಕೊಂದಿದ್ದೇಕೆ ಎಂದು ತಿಳಿದುಕೊಳ್ಳುವುದು ಅಗತ್ಯ !

  • ಬಂಗಾಳದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಹೇಳಿಕೆ !

  • ಗಂಗೋಪಾಧ್ಯಾಯ ಅವರ ಉಮೇದುವಾರಿಕೆ ಹಿಂಪಡೆಯಲು ಕಾಂಗ್ರೆಸ್ ಆಗ್ರಹ

ಕೋಲಕಾತಾ (ಬಂಗಾಳ) – ನಾನು ಕಾನೂನು ಕ್ಷೇತ್ರದಿಂದ ಬಂದಿದ್ದೇನೆ. ಪ್ರತಿಯೊಂದು ಪ್ರಕರಣಕ್ಕೂ ಒಂದು ತಿರುವು ಇರುತ್ತದೆ ಅದನ್ನು ತಿಳಿದುಕೊಳ್ಳುವುದು ಮುಖ್ಯವೆಂದು ನಾನು ಭಾವಿಸುತ್ತೇನೆ. ಗೋಡ್ಸೆ ಗಾಂಧಿ ಹತ್ಯೆಯ ಕುರಿತು ಪುಸ್ತಕ ಬರೆದಿದ್ದರು. ಅದು ಬಂಗಾಳಿಯಲ್ಲಿ ಲಭ್ಯವಿತ್ತು; ಆದರೆ ಈಗ ಆ ಪುಸ್ತಕ ಸಿಗುತ್ತಿಲ್ಲ. ‘ಗೋಡ್ಸೆಯವರ ಸಾಹಿತ್ಯವನ್ನು ಓದಿದ ನಂತರ ಅವರು ಮಹಾತ್ಮ ಗಾಧಿಯನ್ನು ಏಕೆ ಸಾಯಿಸಲು ನಿರ್ಧರಿಸಿದರು ಎಂಬುದು ತಿಳಿಯಬೇಕು ಎಂದು ನನಗೆ ಅನಿಸುತ್ತದೆ. ಈ ವಿಷಯ ನನಗೆ ತಿಳಿಯುವವರೆಗೂ ನಾನು ಗಾಂಧಿ ಮತ್ತು ಗೋಡ್ಸೆ ನಡುವೆ ಆಯ್ಕೆ ಮಾಡುವುದಿಲ್ಲ ಎಂದು ಕೊಲಕಾತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರು ಮತ್ತು ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರು ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರ ಲೋಕಸಭೆಯ ಉಮೇದುವಾರಿಕೆಯನ್ನು ಹಿಂಪಡೆಯುವಂತೆ ಬಿಜೆಪಿಯನ್ನು ಒತ್ತಾಯಿಸಿದೆ.

ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ್ ಅವರು ‘ಎಕ್ಸ್’ ನಲ್ಲಿ ಪ್ರತಿಕ್ರಿಯಿಸುತ್ತಾ, ‘ಗಂಗೋಪಾಧ್ಯಾಯ ಅವರ ಹೇಳಿಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಅವರು ಮಹಾತ್ಮ ಗಾಂಧಿಯವರ ಪರಂಪರೆಯನ್ನು ಉಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ. (ಮ. ಗಾಂಧಿಯವರ ಪರಂಪರೆಯನ್ನು ಕಾಪಾಡುವ ಹೊಣೆಗಾರಿಕೆ ಈ ದೇಶದ ಯಾವುದೇ ಪ್ರಜೆಗೂ ಇಲ್ಲ. ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ವಾತಂತ್ರ್ಯವಿದೆ ! – ಸಂಪಾದಕರು) ಆದ್ದರಿಂದ ಅವರ ಉಮೇದುವಾರಿಕೆಯನ್ನು ಕೂಡಲೇ ಹಿಂಪಡೆಯಬೇಕು. ರಾಷ್ಟ್ರಪಿತನ ವಿಚಾರಧಾರೆಗಳನ್ನು ರಕ್ಷಿಸಲು ಇಂದಿನ ರಾಷ್ಟ್ರದ ಪ್ರಮುಖರು ಯಾವ ನಿರ್ಧಾರ ತೆಗೆದುಕೊಳ್ಳುವರು? ಎಂದು ಜೈರಾಮ್ ರಮೇಶ್ ಪ್ರಶ್ನೆ ಎತ್ತಿದರು.

(ಸೌಜನ್ಯ – India Today)

ಸಂಪಾದಕೀಯ ನಿಲುವು

ಒಸಾಮಾ ಬಿನ್ ಲಾಡೆನ್‌ನನ್ನು ‘ಒಸಾಮಾಜಿ’ ಎಂದು ಕರೆದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಜಿಹಾದಿ ಭಯೋತ್ಪಾದಕನು ಹತನಾದಾಗ ಕಣ್ಣೀರು ಸುರಿಸಿದ ಸೋನಿಯಾ ಗಾಂಧಿ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ ?

ಭಾರತ ವಿಭಜನೆಗೆ ಅನುಮತಿ ನೀಡಿದ ಗಾಂಧಿ, ವಿಭಜನೆಯಿಂದಾಗಿ ಭಾರತಕ್ಕೆ ಮರಳಿದ ಹಿಂದೂಗಳು ಚಳಿಗಾಲದ ವೇಳೆ ಮಸೀದಿಯೊಂದರಲ್ಲಿ ಆಶ್ರಯ ಪಡೆದಾಗ ಅವರನ್ನು ಹೊರಹೋಗಲು ಅನಿವಾರ್ಯಪಡಿಸಿದ ಗಾಂಧಿ, ವಿಭಜನೆಯ ಸಮಯದಲ್ಲಿ 10 ಲಕ್ಷ ಹಿಂದೂಗಳ ಹತ್ಯೆಗೆ ಕಾರಣವಾದ ಗಾಂಧಿ, ಕಾಶ್ಮೀರದ ಮೇಲೆ ಆಕ್ರಮಣ ಮಾಡಿದ ಪಾಕಿಸ್ತಾನಕ್ಕೆ ಅವರ ಪಾಲು 55 ಕೋಟಿ (ಈಗಿನ ಅಂದಾಜು 1 ಸಾವಿರದ 200 ಕೋಟಿ) ನೀಡಲು ಉಪವಾಸ ಮಾಡಿದ ಗಾಂಧಿ, ಈ ಇತಿಹಾಸವನ್ನು ಹೇಗೆ ಮರೆಯಲು ಸಾಧ್ಯ ?