Archeology Department Blocked Work: ಮಹಾರಾಷ್ಟ್ರದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರದ ಕಾರ್ಯದಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಅಡ್ಡಗಾಲು !

ದೇವಸ್ಥಾನದ ಕಾರ್ಯ ಪೂರ್ಣಗೊಳ್ಳುವುದರ ಬಗ್ಗೆ ಅನುಮಾನ !

ಮುಂಬಯಿ – ಸರಕಾರದಿಂದ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿನ ೯ ಪ್ರಾಚೀನ ದೇವಸ್ಥಾನಗಳು ಹಾಗೂ ಲೇಣಿ ಶಿಲ್ಪಗಳ ಅಭಿವೃದ್ಧಿ ಪಡಿಸಿ ಅವುಗಳಿಗೆ ಅಂತರಾಷ್ಟ್ರೀಯ ಸ್ಥಾನಮಾನ ನೀಡುವ ಕಾರ್ಯ ಕೈಗೆತ್ತಿಕೊಂಡಿದೆ; ಆದರೆ ಇದರಲ್ಲಿ ಕಾರ್ಲಾದ ಶ್ರೀ ಏಕವಿರಾದೇವಿಯ ದೇವಸ್ಥಾನ ಸಹಿತ ೫ ದೇವಸ್ಥಾನಗಳ ಜೀರ್ಣೋದ್ಧಾರದ ಕಾರ್ಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಅಡಚಣೆ ತಂದಿರುವುದರಿಂದ ‘ಈ ಕಾರ್ಯ ಯಾವಾಗ ಪೂರ್ಣಗೊಳ್ಳುವುದು?’ ಎಂಬ ಪ್ರಶ್ನೆ ನಿರ್ಮಾಣವಾಗಿದೆ.

ಕಾರ್ಲಾದಲ್ಲಿನ ಶ್ರೀ ಏಕವಿರಾದೇವಿಯ ದೇವಸ್ಥಾನ, ರತ್ನಾಗಿರಿಯ ಶ್ರೀಧೂತಪಾಪೆಶ್ವರ ದೇವಸ್ಥಾನ, ಕೊಲ್ಲಾಪುರದ ಖಿದ್ರಾಪುರದ ಶ್ರೀ ಕೋಪೇಶ್ವರ ದೇವಸ್ಥಾನ, ಸಿನ್ನರ್ (ನಾಶಿಕ) ಇಲ್ಲಿಯ ಶ್ರೀ ಗೋಂದೇಶ್ವರ ದೇವಸ್ಥಾನ, ಛತ್ರಪತಿ ಸಂಭಾಜಿ ನಗರದಲ್ಲಿನ ಶ್ರೀ ಖಂಡೋಬಾ ದೇವಸ್ಥಾನ, ಬೀಡ್‌ನ ಪುರುಷೋತ್ತಮಪುರಿಯ ಭಗವಾನ್ ಶ್ರೀ ಪುರುಷೋತ್ತಮ ದೇವಸ್ಥಾನ, ಅಮರಾವತಿಯಲ್ಲಿನ ಲಾತೂರ ಇಲ್ಲಿಯ ಶ್ರೀ ಆನಂದೇಶ್ವರ ದೇವಸ್ಥಾನ, ಗಡಚಿರೋಲಿಯಲ್ಲಿನ ಶ್ರೀ ಮಾರ್ಕಂಡೇಶ್ವರ ದೇವಸ್ಥಾನ ಹಾಗೂ ಸಾತಾರಾದ ಶ್ರೀ ಉತ್ತೇಶ್ವರ ದೇವಸ್ಥಾನ ಇವುಗಳನ್ನು ಅಭಿರ್ವದ್ಧಿ ಮಾಡುವವರಿದ್ದರು; ಆದರೆ ಕೇವಲ ಧೂತಪಾಪೆಶ್ವರ, ಖಂಡೋಬಾ, ಭಗವಂತ ಪುರುಷೋತ್ತಮ ಮತ್ತು ಉತ್ತೇಶ್ವರ ಈ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ ಆರಂಭವಾಗಿದೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಜೀರ್ಣೋದ್ಧಾರದ ಕಾರ್ಯದಲ್ಲಿ ಅಡ್ಡಗಾಲು ಹಾಕುವ ಭಾರತೀಯ ಪುರಾತತ್ವ ಇಲಾಖೆ ಇತರ ಧರ್ಮದ ಶ್ರದ್ಧಾ ಸ್ಥಾನದ ಕೆಲಸದಲ್ಲಿ ಅಡಚಣೆ ನಿರ್ಮಾಣ ಮಾಡುವ ಧೈರ್ಯ ಮಾಡಲ್ಲ ಇದನ್ನು ತಿಳಿದುಕೊಳ್ಳಿ ! ಇದರ ಬಗ್ಗೆ ಈಗ ಎಲ್ಲ ಹಿಂದುಗಳು ಕಾನೂನು ರೀತಿಯಲ್ಲಿ ಧ್ವನಿ ಎತ್ತುವುದು ಅವಶ್ಯಕ !