ಭೋಜಶಾಲೆಯು ಶ್ರೀ ಸರಸ್ವತಿ ದೇವಿಯ ದೇವಸ್ಥಾನವಾಗಿತ್ತು !

ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞ ಕೆ.ಕೆ. ಮಹಮ್ಮದ್ ಇವರಿಂದ ಮಾಹಿತಿ

ಧಾರ (ಮಧ್ಯಪ್ರದೇಶ) – ಇಲ್ಲಿಯ ಭೋಜಶಾಲೆಯು ಶ್ರೀ ಸರಸ್ವತಿ ದೇವಿಯ ಮಂದಿರವಾಗಿತ್ತು ಮತ್ತು ನಂತರ ಅದು ಇಸ್ಲಾಮಿಕ ಪ್ರಾರ್ಥನಾ ಸ್ಥಳದಲ್ಲಿ (ಮಸೀದಿಯಲ್ಲಿ) ರೂಪಾಂತರ ಗೊಳಿಸಲಾಯಿತು, ಎಂದು ಭಾರತೀಯ ಪುರಾತತ್ವ ಸಮೀಕ್ಷಾ ವಿಭಾಗದ ಮಾಜಿ ಅಧಿಕಾರಿ ಹಾಗೂ ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞ ಕೆ.ಕೆ. ಮಹಮ್ಮದ್ ಇವರು ಇತ್ತೀಚಿಗೆ ಮಾಹಿತಿ ನೀಡಿದರು. ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಆದೇಶದ ನಂತರ ಭಾರತೀಯ ಪುರಾತತ್ವ ಸಮೀಕ್ಷ ಇಲಾಖೆ (ಎ.ಎಸ್.ಐ.) ಭೋಜಶಾಲೆಯ ಪರಿಸರದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಇಲಾಖೆಗೆ ೭ ವಾರದ ಒಳಗೆ ಈ ಸಮೀಕ್ಷೆ ಪೂರ್ಣಗೊಳಿಸುವುದಿದೆ. ಇದರ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸಲ್ಮಾನರು ನ್ಯಾಯಾಲಯದ ನಿರ್ಣಯದ ಪಾಲನೆ ಮಾಡಬೇಕು, ಎಂದು ಕೂಡ ಹೇಳಿದರು. ಹಿಂದೂಗಳು, ಭೋಜಶಾಲೆ ಇದು ಶ್ರೀ ವಾಗ್ದೇವಿಯ (ಶ್ರೀ ಸರಸ್ವತಿ ದೇವಿಯ) ದೇವಸ್ಥಾನವಿದೆ ಎಂದು ನಂಬುತ್ತಾರೆ ಹಾಗೂ ಮುಸಲ್ಮಾನರು ಅದನ್ನೇ ಕಮಲ ಮೌಲ ಮಸೀದಿ ಎನ್ನುತ್ತಾರೆ.

೧. ಕೆ.ಕೆ. ಮಹಂಮದ್ ಇವರು ಭೋಜಶಾಲೆಯ ಬಗ್ಗೆ ಐತಿಹಾಸಿಕ ವಸ್ತುಸ್ಥಿತಿಯ ಬಗ್ಗೆ ಮಾತನಾಡುತ್ತಾ, ಅದು ಶ್ರೀ ಸರಸ್ವತಿ ದೇವಿಯ ದೇವಸ್ಥಾನವಾಗಿದೆ. ಅದನ್ನು ಮಸೀದಿಯಲ್ಲಿ ರೂಪಾಂತರಿತಗೊಳಿಸಲಾಯಿತು; ಆದರೆ ‘ಪೂಜಾಸ್ಥಳ ಕಾನೂನ ೧೯೯೧’ ರ ಪ್ರಕಾರ ಧಾರ್ಮಿಕ ಸ್ಥಳದ ಮಟ್ಟದ ಆಧಾರ ೧೯೪೭ ಆಗಿದೆ. ಅಂದರೆ ಈ ವಾಸ್ತು ೧೯೪೭ ರಲ್ಲಿ ದೇವಸ್ಥಾನ ಇದ್ದರೆ ಅದು ದೇವಸ್ಥಾನವೇ ಇರುವುದು ಮತ್ತು ಅದು ಮಸೀದಿ ಆಗಿದ್ದರೆ ಮಸೀದಿಯಾಗಿ ಉಳಿಯುವುದು ಎಂದು ಹೇಳಿದರು.

೨. ೧೯೭೬-೭೭ ರಲ್ಲಿ ಅಯೋಧ್ಯೆಯಲ್ಲಿನ ಪ್ರಾಧ್ಯಾಪಕ ಬಿ.ಬಿ. ಲಾಲ್ ಇವರ ನೇತೃತ್ವದಲ್ಲಿ ಮೊದಲ ಉತ್ಕನನ ತಂಡದಲ್ಲಿ ಕೆ.ಕೆ. ಮಹಮ್ಮದ್ ಸಹಭಾಗಿದ್ದರು. ಅವರು, ಮೊದಲು ಬಾರಿ ಬಾಬ್ರಿ ಕಟ್ಟಡದ ಕೆಳಗೆ ಕೂಡ ಶ್ರೀರಾಮ ಮಂದಿರದ ಅವಶೇಷಗಳನ್ನು ನೋಡಿದ್ದರು ಎಂದು ದಾವೆ ಮಾಡಿದ್ದರು.

ಮಥುರಾ ಮತ್ತು ಕಾಶಿಯ ಬಗ್ಗೆ ಮುಸಲ್ಮಾನರು ಹಿಂದುಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ! – ಕೆ.ಕೆ. ಮಹಂಮದ್

ಒಂದು ಪ್ರಶ್ನೆಯ ಉತ್ತರ ನೀಡುವಾಗ ಕೆ.ಕೆ .ಮಹಂಮದ್ ಇವರು, ಮಥುರಾ ಮತ್ತು ಕಾಶಿಯ ಬಗ್ಗೆ ಮುಸಲ್ಮಾನರು ಹಿಂದುಗಳ ಧಾರ್ಮಿಕ ಭಾವನೆಯನ್ನು ಗೌರವಿಸಬೇಕು. ಮುಸಲ್ಮಾನರಿಗಾಗಿ ಮಕ್ಕಾ ಮತ್ತು ಮದೀನಾ ಎಷ್ಟು ಮಹತ್ವದ್ದಾಗಿದೆಯೋ ಹಿಂದೂಗಳಿಗೂ ಮಥುರ ಮತ್ತು ಕಾಶಿಯು ಅಷ್ಟೇ ಮಹತ್ವದ್ದಾಗಿದೆ. ಕಾಶಿಯು ಶಿವನಿಗೆ ಸಂಬಂಧಿತವಾಗಿದೆ ಮತ್ತು ಮಥುರಾ ಶ್ರೀ ಕೃಷ್ಣನ ಜನ್ಮಸ್ಥಾನವಾಗಿದೆ. ಹಿಂದೂಗಳು ಅದನ್ನು ಇತರ ಸ್ಥಳಗಳಲ್ಲಿ ಸ್ಥಳಾಂತರಗೊಳಿಸಲು ಸಾಧ್ಯವಿಲ್ಲ; ಆದರೆ ಇದು ಮುಸಲ್ಮಾನರಿಗೆ ಕೇವಲ ಮಸೀದಿ ಆಗಿದೆ, ಮಹಮ್ಮದ್ ಪೈಗಂಬರ್ ಅಥವಾ ‘ಔಲಿಯ’ಯ ಜೊತೆಗೆ ನೇರ ಸಂಬಂಧವಿಲ್ಲ. ಆ ಮಸೀದಿ ಬೇರೆ ಸ್ಥಳದಲ್ಲಿ ಸ್ಥಳಾಂತರಸಬಹುದು. ಎರಡು ಜನಾಂಗದವರು ಒಟ್ಟಾಗಿ ಕುಳಿತು ಈ ಪ್ರಕರಣದ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.