೨೩ ತಳಿಯ ನಾಯಿಗಳ ಮೇಲೆ ನಿಷೇಧ ಹೇರಿರುವ ಕೇಂದ್ರ ಸರಕಾರದ ಆದೇಶಕ್ಕೆ ಕರ್ನಾಟಕ ನ್ಯಾಯಾಲಯದಿಂದ ತಡೆ ಆಜ್ಞೆ !

ಬೆಂಗಳೂರು – ಮನುಷ್ಯರ ಮೇಲೆ ನಾಯಿಗಳ ದಾಳಿ ಮತ್ತು ಪರಿಣಾಮದಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣ ಗಮನಿಸಿ ಕೇಂದ್ರ ಸರಕಾರವು ಮಾರ್ಚ್ ೧೩ ರಂದು ಒಂದು ಸುತ್ತೋಲೆ ಹೊರಡಿಸಿತು. ರಾಜ್ಯ ಸರಕಾರದಿಂದ ನೀಡಿರುವ ಈ ಆದೇಶದಲ್ಲಿ, ೨೩ ತಳಿಯ ನಾಯಿಯ ಆಮದಿನ ಮೇಲೆ ನಿಷೇಧ ಹೇರಬೇಕು ! ಕೇಂದ್ರ ಸರಕಾರದ ಸುತ್ತೋಲೆಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಮಾತ್ರ ಇತ್ತೀಚಿಗೆ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಇವರು ಇದರ ಬಗ್ಗೆ ಮಾತನಾಡಿ, ಈ ನಿಷೇಧ ಕರ್ನಾಟಕ ರಾಜ್ಯಕ್ಕೆ ಜಾರಿ ಆಗುವುದಿಲ್ಲ. ಕೇಂದ್ರ ಸರಕಾರದ ಈ ನಿರ್ಣಯಕ್ಕೆ ಆಧಾರ ಏನು ಇದೆ, ಇದು ಉಪಮಹಾನ್ಯಾಯವಾದಿ ಇವರು ಸ್ಪಷ್ಟ ಪಡಿಸಬೇಕು, ಎಂದು ನ್ಯಾಯಾಲಯವು ಹೇಳಿದೆ. ಮುಂದಿನ ಆಲಿಕೆ ಏಪ್ರಿಲ್ ೫ ರಂದು ನಡೆಯಲಿದೆ.

೧. ೨೩ ತಳಿಯ ಸೂಚಿಯಲ್ಲಿ ಬುಲಡಾಗ್, ರಾಟರವೆಲರ್, ಪಿಟಬುಲ್, ವುಲ್ಫ ಡೋಗ್, ಟೆರಿಯಾರ್ ಇವುಗಳ ಸಮಾವೇಶ ಇದೆ. ಈ ನಾಯಿಗಳು ಮಿಶ್ರತಳಿ ಮೇಲೆ ಕೂಡ ನಿಷೇಧ ಹೇರಬೇಕೆಂದು ಕೇಂದ್ರವು ಸ್ಪಷ್ಟಪಡಿಸಿದೆ.

೨. ಪ್ರಾಣಿ ಕಲ್ಯಾಣ ಸಂಸ್ಥೆ ಮತ್ತು ತಜ್ಞರ ಸಮಿತಿಯು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ವರದಿ ಪ್ರಸ್ತುತಪಡಿಸಿತ್ತು. ಅದರಲ್ಲಿ ಕೇಂದ್ರ ಸರಕಾರವು ಮೇಲಿನ ನಿರ್ಣಯ ನೀಡಿತು. ಇದರ ನಂತರ ಶ್ವಾನ ಪರೀಕ್ಷಕರು ಮತ್ತು ಶ್ವಾನ ಸಾಕುವವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಇದರ ವಿರುದ್ಧ ಸಂಯುಕ್ತ ಅರ್ಜಿ ದಾಖಲಿಸಿದ್ದರು. (ಭಾರತದಲ್ಲಿ ನಾಯಿಗಳ ಆಕ್ರಮಕ ತಳಿಯಿಂದ ಮನುಷ್ಯನ ಜೀವಕ್ಕೆ ಅಪಾಯ ಬಂದಿರುವ ಅನೇಕ ಉದಾಹರಣೆಗಳು ಇವೆ, ಹೀಗೆ ಇರುವಾಗ ಕೂಡ ಶ್ವಾನ ಪ್ರೇಮಿಗಳಿಗೆ ಮನುಷ್ಯನ ಜೀವಕ್ಕಿಂತಲೂ ನಾಯಿಯ ಜೀವ ಮಹತ್ವದ್ದು ಅನಿಸುತ್ತಿದೆ, ಇದು ಅಸಮಾಧಾನಕಾರಕ ! – ಸಂಪಾದಕರು)

೩. ದಿಲ್ಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಎಲ್ಲಾ ಪಕ್ಷಗಳ ಜೊತೆಗೆ ಚರ್ಚೆ ನಡೆಸಿ ೩ ತಿಂಗಳಲ್ಲಿ ಈ ಪ್ರಕರಣದ ನಿರ್ಣಯ ತೆಗೆದುಕೊಳ್ಳಲು ಆದೇಶ ನೀಡಿದೆ.