Attack on Police Constable : ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯ ಮಾಡಲಿಲ್ಲ ಎಂದು ಪೊಲೀಸರಿಗೆ ಥಳಿತ

ಇಬ್ಬರ ಬಂಧನ

ಅಫ್ಜಲಪುರ – ದ್ವಿತೀಯ ‘ಫ್ರೀ ಯುನಿವರ್ಸಿಟಿ ಕೋರ್ಸ್’ ನ(ಪಿಯುಸಿ) ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯ ಮಾಡಿಲ್ಲ: ಎಂದು ಕಾರ್ಯನಿರತ ಪೊಲೀಸ ಹವಾಲ್ದಾರ್ ಮೇಲೆ ದಾಳಿ ನಡೆಸಿರುವ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಕಲಬುರ್ಗಿ ತಾಲೂಕಿನ ಕರಜಗಿ ಪರೀಕ್ಷಾ ಕೇಂದ್ರದ ಹತ್ತಿರ ಈ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದ ಹತ್ತಿರ ಪೊಲೀಸ ಹವಾಲ್ದಾರ್ ಪಂಡಿತ ಪಾಂಡ್ರೆ ಕರ್ತವ್ಯ ನಿರ್ವಹಿಸುತ್ತಿರುವಾಗ ಕೈಲಾಸ ಸಕ್ಕರಗಿ ಪಾಂಡ್ರೆ ಇವರ ಬಳಿ ಬಂದು ‘ನನ್ನ ತಂಗಿ ಪರೀಕ್ಷೆ ಬರೆಯುತ್ತಿದ್ದಾಳೆ, ಅದಕ್ಕಾಗಿ ನನಗೆ ತರಗತಿಯೊಳಗೆ ಹೋಗಲು ಬಿಡಿ, ಇಲ್ಲದಿದ್ದರೆ ನಿಮ್ಮ ಜೊತೆ ಬೇರೆ ರೀತಿ ವರ್ತಿಸ ಬೇಕಾಗುವುದು’, ಎಂದು ಬೆದರಿಕೆ ನೀಡಿದನು. ಕೈಲಾಸ ಇವನು ಪರೀಕ್ಷಾ ಕೇಂದ್ರದಲ್ಲಿ ನುಸುಳುವ ಪ್ರಯತ್ನ ಮಾಡಿದನು ಆಗ ಹವಾಲ್ದಾರ್ ಪಾಂಡ್ರೆ ಇವರು ತಡೆದರು. ಆ ಸಮಯದಲ್ಲಿ ಕೈಲಾಸ ಸಕ್ಕರಗಿ ಮತ್ತು ಅವನ ಸಹಚರ ಸಮೀರ್ ನಡುವಿನಕೆರಿ ಇವರು ಪಾಂಡ್ರೆ ಇವರ ಹತ್ತಿರ ಇದ್ದ ಲಾಠಿಯನ್ನು ಕಸೆದು ಅವರ ಮೇಲೆ ದಾಳಿ ಮಾಡಿದರು.

ಸಂಪಾದಕೀಯ ನಿಲುವು

ಕಾಪಿ ಮಾಡುವುದಕ್ಕಾಗಿ ನೇರ ಪೊಲೀಸರ ಮೇಲೆ ದಾಳಿ ಮಾಡುವ ಧೈರ್ಯವಾಗುತ್ತದೆ, ಇದರಿಂದ ದೇಶದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ? ಇದು ತಿಳಿಯುತ್ತದೆ ! ಜನರ ಮೇಲೆ ಯೋಗ್ಯ ಸಂಸ್ಕಾರ ಮಾಡದೆ ಇರುವ ಮತ್ತು ಯೋಗ್ಯ ಶಿಕ್ಷಣ ನೀಡದೆ ಇರುವ ಎಲ್ಲಾ ಪಕ್ಷದ ರಾಜಕೀಯ ನಾಯಕರೇ ಈ ಸ್ಥಿತಿಗೆ ಜವಾಬ್ದಾರರಾಗಿದ್ದಾರೆ !