|
(ಪೂಲ್ ಡ್ಯಾನ್ಸ್ ಎಂದರೆ ಈಜುಕೊಳದಲ್ಲಿ ನೃತ್ಯ ಮಾಡುವುದು)
ಬೆಂಗಳೂರು – ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹೋಳಿ ಹಬ್ಬದಂದು ವಾಣಿಜ್ಯ ‘ಪೂಲ್ ಡ್ಯಾನ್ಸ್’ ಅಥವಾ ‘ರೈನ್ ಡ್ಯಾನ್ಸ್’ ಮಾಡದಂತೆ ಕರೆ ನೀಡಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ನಗರದಲ್ಲಿ ಮನೆ ಮತ್ತು ವಸತಿ ಪ್ರದೇಶಗಳಲ್ಲಿ ಹೋಳಿ ಆಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
1. ಮಂಡಳಿಯು, ಹೋಳಿ ಹಬ್ಬದಂದು ‘ರೈನ್ ಡ್ಯಾನ್ಸ್’ ಅಥವಾ ‘ಪೂಲ್ ಡ್ಯಾನ್ಸ್’ ಆಯೋಜಿಸಿದರೆ ಕಾವೇರಿ ನದಿ ಅಥವಾ ಬೋರ್‌ವೆಲ್ ನೀರನ್ನು ಬಳಸಬಾರದು ಎಂದು ಹೇಳಿದೆ. ಇದಕ್ಕಾಗಿ ಅವರು ಸಂಸ್ಕರಿಸಿದ ನೀರನ್ನು ಬಳಸಬೇಕು. ಮಂಡಳಿಯು ‘ರೇನ್ ವಾಟರ್ ಹಾರ್ವೆಸ್ಟಿಂಗ್’ (ಮಳೆ ನೀರಿನ ಸಂಗ್ರಹ) ಮತ್ತು ಅಂತರ್ಜಲ ಮರುಪೂರಣಕ್ಕೆ ಆದ್ಯತೆ ನೀಡಿದೆ ಎಂದು ಹೇಳಿದೆ.
2. ಮಂಡಳಿಯ ಅಧ್ಯಕ್ಷ ರಾಮಪ್ರಸಾದ್ ಮನೋಹರ್ ಮಾತನಾಡಿ, ಜನರ ನಿರ್ಲಕ್ಷ್ಯದಿಂದ ಈ ಸ್ಥಿತಿ ಉಂಟಾಗಿದೆ. ಜನರು ನೀರನ್ನು ವ್ಯರ್ಥ ಮಾಡುತ್ತಾರೆ. ಮಂಡಳಿಯಿಂದ ಪೂರೈಕೆಯಾಗುವ 100 ಲೀಟರ್ ನೀರಿಗೆ ಮಂಡಳಿ 90 ರೂಪಾಯಿ ಖರ್ಚು ಮಾಡುತ್ತಿದ್ದರೆ, ಗ್ರಾಹಕರಿಂದ ಕೇವಲ 45 ರೂಪಾಯಿ ಸಿಗುತ್ತದೆ
ಜನರಿಗೆ ನೀರಿನ ಮಹತ್ವ ಅರಿವಾಗಬೇಕು ಮತ್ತು ಮಿತವಾಗಿ ಬಳಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುಹೋಳಿ ಹಬ್ಬದಂದು ನೀರು ಪೋಲು ಆಗುವ ಕುರಿತು ಪ್ರಕರಣ ದಾಖಲಿಸಿ ಸಂಬಂಧಪಟ್ಟವರಿಂದ ಭಾರಿ ದಂಡ ವಸೂಲಿ ಮಾಡಲು ಕಾನೂನು ರೂಪಿಸಬೇಕು ಆಗ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯ ! |