ನವ ದೆಹಲಿ – ‘ಈಶಾ ಫೌಂಡೇಶನ್’ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಇವರ ಮಾರ್ಚ್ ೨೦ ರಂದು ತುರ್ತು ಬ್ರೈನ್ ಆಪರೇಷನ್ ಮಾಡಲಾಗಿದೆ. ಬಳಿಕ ಅವರ ಆರೋಗ್ಯ ಸ್ಥಿರವಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಎಂದು ದೆಹಲಿಯ ಅಪೋಲೋ ಆಸ್ಪತ್ರೆಯು ಹೇಳಿದೆ. ಮೂರು ವಾರಗಳಿಂದ ಸದ್ಗುರು ಜಗ್ಗಿ ವಾಸುದೇವ ಇವರ ಮೆದುಳಿನಲ್ಲಿ ರಕ್ತಸ್ರಾವ ಆಗುತ್ತಿತ್ತು ಮತ್ತು ಸಹಿಸಲಾರದ ನೋವು ಆಗುತ್ತಿದ್ದವು, ಎಂದು ಹೇಳಿದರು. ಈಶಾ ಫೌಂಡೇಶನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಸದ್ಗುರುಗಳು ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲರಿಂದ ಸಿಕ್ಕಿರುವ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾವು ಅತ್ಯಂತ ಕೃತಜ್ಞರಾಗಿದ್ದೇವೆ ಎಂದು ಹೇಳಿದೆ.
ಸದ್ಗುರು ಜಗ್ಗಿ ವಾಸುದೇವ್ ಇವರು ಮೆದುಳಿನ ಶಸ್ತ್ರಕ್ರಿಯೆಯ ನಂತರ ತಮ್ಮ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು, ಡಾಕ್ಟರ್ ನನ್ನ ತಲೆ ತೆರೆದು ಏನೋ ಹುಡುಕುವ ಪ್ರಯತ್ನ ಮಾಡಿದರು; ಆದರೆ ಅವರಿಗೆ ಅಲ್ಲಿ ಏನು ಸಿಗಲಿಲ್ಲ. ತಲೆ ಸಂಪೂರ್ಣವಾಗಿ ಖಾಲಿ ಆಗಿತ್ತು; ಆದ್ದರಿಂದ ಅವರು ಅದನ್ನು ಮತ್ತೆ ಮುಚ್ಚಿದ್ದಾರೆ. ಈಗ ನಾನು ಆರಾಮವಾಗಿದ್ದೇನೆ ಎಂದು ಹೇಳಿದ್ದಾರೆ.
An Update from Sadhguru… https://t.co/ouy3vwypse pic.twitter.com/yg5tYXP1Yo
— Sadhguru (@SadhguruJV) March 20, 2024
tw-align-center