ಹನುಮಾನ ಚಾಲಿಸಾ ಹಾಕಿದ್ದಕ್ಕೆ ವ್ಯಾಪಾರಿಗೆ ಥಳಿಸಿದ್ದ ಎಲ್ಲಾ ಆರೋಪಿಗಳ ಬಂಧನ !

ದೂರಿನಲ್ಲಿ ಹನುಮಾನ ಚಾಲಿಸಾದ ಉಲ್ಲೇಖ ಮರೆಮಾಚಿದ ಪೊಲೀಸ್ !

ಬೆಂಗಳೂರು – ಇಲ್ಲಿನ ನಗರಥಪೇಟೆ ಪ್ರದೇಶದಲ್ಲಿ ಜುಮ್ಮಾ ಮಸೀದಿಯ ಮಾರ್ಗದಲ್ಲಿ ಮೊಬೈಲ್ ವ್ಯಾಪಾರಿಯೊಬ್ಬ ಹನುಮಾನ ಚಾಲಿಸಾ ಹಾಕಿದ್ದಕ್ಕೆ ಅವನ ಮೇಲೆ ದಾಳಿ ಮಾಡಿದ್ದ ಎಲ್ಲಾ ೬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಲೇಮಾನ್, ಶಹನವಾಜ್, ರೋಹಿತ, ಡ್ಯಾನಿಶ, ತರುಣ್ ಅಲಿಯಾಸ್ ದಡಿಯ ಮತ್ತು ಓರ್ವ ಅಪ್ರಾಪ್ತ ಹುಡುಗ ಹೀಗೆ ೬ ಜನರು ಬಂಧಿತರಾಗಿದ್ದಾರೆ. ಅಪ್ರಾಪ್ತ ಬಂಧಿತನನ್ನು ಬಾಲಾಪರಾಧಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲು ನ್ಯಾಯಾಲಯವು ಆದೇಶ ನೀಡಿದೆ, ಹಾಗೂ ಉಳಿದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಚಿತ್ರವೆಂದರೆ, ಹನುಮಾನ ಚಾಲಿಸಾ ಹಾಕಿದ್ದರಿಂದ ವ್ಯಾಪಾರಿಯ ಮೇಲೆ ದಾಳಿ ನಡೆಸಲಾಯಿತು ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಲಿಲ್ಲ.

ಈ ಪ್ರಕರಣದಲ್ಲಿನ ಮುಖ್ಯ ಆರೋಪಿ ಸುಲೇಮಾನ್ ಬಾಡಿಗೆ ವಾಹನ ಚಲಾಯಿಸುವ ಕೆಲಸ ಮಾಡುತ್ತಾನೆ. ಇವನ ಮೇಲೆ ಈ ಹಿಂದೆ ಕೂಡ ದೂರುಗಳು ದಾಖಲಾಗಿದ್ದವು . ಶಹನವಾಜ್ ನಿರುದ್ಯೋಗಿ, ಹಾಗೂ ರೋಹಿತ ಔಷಧಿ ಅಂಗಡಿಗಳಿಗೆ ಔಷಧಿಗಳನ್ನು ಪೂರೈಸುತ್ತಾನೆ. ತರುಣ್ ಎಂಬ ಆರೋಪಿ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿದ್ದಾನೆ. ಸುಲೇಮಾನ್ ಮತ್ತು ಅವನ ಸಹಚರರು ಹೋಟೆಲ್ ಮಾಲೀಕ ಸತೀಶ್ ಎಂಬವರ ಮೇಲೆ ದಾಳಿ ನಡೆಸಿದ್ದರು ಎಂಬ ಆರೋಪ ಕೂಡ ಇದೆ.

  • ಪ್ರಮುಖ ಆರೋಪಿ ಸುಲೇಮಾನ್ ಸಹೋದರನಿಂದ ವಾಟ್ಸಾಪ್ನಲ್ಲಿ ಸ್ಟೇಟಸ್ !

  • ಇಂದು ಜೈಲು, ನಾಳೆ ಬೇಲ್ (ಜಾಮೀನು), ಮತ್ತೆ ಅದೇ ಖೇಲ್ !

ಪೊಲೀಸರು ೬ ಜನರನ್ನು ಬಂಧಿಸಿದ್ದರೂ ಈ ಮತಾಂಧರ ಮೇಲೆ ಅದರ ಯಾವುದೇ ರೀತಿಯ ಪರಿಣಾಮ ಆಗಿಲ್ಲ. ಬಂಧಿತ ಸುಲೇಮಾನ್ ನ ಸಹೋದರ ಸಯ್ಯದ್ ಇವನು ತನ್ನ ವಾಟ್ಸಾಪ್ನಲ್ಲಿ ಇದರ ಸ್ಟೇಟಸ್ ಇಟ್ಟಿದ್ದು, ‘ಇಂದು ಜೈಲ್, ನಾಳೆ ಬೇಲ್, (ಜಾಮೀನು) ಮತ್ತೆ ಅದೇ ಖೇಲ್ (ಗೂಂಡಾಗಿರಿ)’ ಎಂದು ಬರೆದಿದ್ದಾನೆ. ಸೈಯದ್ ಅಪ್ರಾಪ್ತನಾಗಿದ್ದಾನೆಂದು ಹೇಳಲಾಗುತ್ತಿದೆ. (ಅಪ್ರಾಪ್ತನಾಗಿದ್ದರೂ ಸಹ ಒಬ್ಬ ಮತಾಂಧನ ಮನಸಿಕತೆ ಹೇಗಿರುತ್ತದೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ ಎಂದು ಬೊಬ್ಬೆ ಹಾಕುವವರು ಈ ಬಗ್ಗೆ ತಮ್ಮ ಮೌನ ಮುರಿಯುವರೇ ?

 

ಸಂಪಾದಕೀಯ ನಿಲುವು

ಪೊಲೀಸರ ಇಂತಹ ವರ್ತನೆಯಿಂದ ಅವರು ಅಪರಾಧಿಗಳಿಗೆ ಸಹಾಯ ಮಾಡುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ ! ಕಾಂಗ್ರೆಸ್ಸಿನ ರಾಜ್ಯದಲ್ಲಿ ಇಂತಹ ಅಪರಾಧಿಗಳಿಗೆ ಶಿಕ್ಷೆಯಾಗುವ ಸಾಧ್ಯತೆ ಅತಿ ಕಡಿಮೆ.