ಅಜ್ಮೀರ್(ರಾಜಸ್ಥಾನ) – ಮಾರ್ಚ್ ೧೭ ರ ಸಂಜೆ ನಡೆದ ಸಾಬರಮತಿ-ಆಗ್ರಾ ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲಿನ ಅಪಘಾತಕ್ಕೆ ಕಾರಣ ಏನೆಂಬುದು ಇದೀಗ ಬೆಳಕಿಗೆ ಬಂದಿದೆ. ಲೋಕೋ ಪೈಲಟ್(ಚಾಲಕ) ಮತ್ತು ಸಹಾಯಕ ಲೋಕೋಪೈಲಟ್ ಇವರ ನಡುವೆ ರೈಲಿನ ವೇಗದ ವಿಚಾರವಾಗಿ ಜಗಳವಾಗಿದ್ದೇ ಈ ಅಪಘಾತಕ್ಕೆ ಕಾರಣ ಎಂದು ವಿಚಾರಣೆ ವೇಳೆ ಈ ಚಾಲಕರು ತಿಳಿಸಿದ್ದಾರೆ. ಜಗಳದಲ್ಲಿ ಮುಳುಗಿದ್ದ ಇವರಿಬ್ಬರು ಸಿಗ್ನಲ್‌ನಲ್ಲಿ ಬ್ರೇಕ್ ಹಾಕಲು ಮರೆತರು. ರೈಲಿನ ವೇಗ ಗಂಟೆಗೆ ೯೦ ಕಿ.ಮಿ.ಇರುವಾಗ ಬ್ರೇಕ್ ಹಾಕಿದ ಕಾರಣ ಅದು ರೈಲು ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ರೈಲಿನ ಕೆಲ ಕೋಚ್‌ಗಳು ಹಳಿ ತಪ್ಪಿದವು, ಅನೇಕ ರೈಲುಗಳನ್ನು ರದ್ದು ಪಡಿಸಲಾಯಿತು, ಅಲ್ಲದೇ ಈ ಅಪಘಾತದಲ್ಲಿ ೩ ಜನರು ಗಾಯಗೊಂಡಿದ್ದರು.
ಸಂಪಾದಕೀಯ ನಿಲುವುಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಇಂತಹ ಚಾಲಕರ ವಿರುದ್ಧ ದೂರು ದಾಖಲಿಸಿ ಜೈಲಿಗೆ ತಳ್ಳಬೇಕು ! |