ಬ್ರಿಟನ ತನ್ನ ದೇಶದಲ್ಲಿ ಖಲಿಸ್ತಾನಿ ಸಂಘಟನೆ ಮತ್ತು ದೂರದರ್ಶನವಾಹಿನಿಯ ಮೇಲೆ ನಿಷೇಧ ಹೇರಲಿದೆ !

ಭಾರತೀಯ ಹೈಕಮಿಷನ ಕಚೇರಿ ಮೇಲಿನ ದಾಳಿ ಪ್ರಕರಣ

ಲಂಡನ (ಬ್ರಿಟನ) – ಬ್ರಿಟನ ಸರಕಾರವು ತನ್ನ ದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ `ಇಂಟರನ್ಯಾಶನಲ್ ಸಿಖ ಯೂಥ್ ಫೆಡರೇಶನ’ (ಐ.ಎಸ್.ವಾಯ್.ಎಫ್), ಖಾಲಸಾ ಟೆಲಿವಿಶನ್ ಲಿಮಿಟೆಡ ಮತ್ತು ಕೆಲವು ವ್ಯಕ್ತಿಗಳ ಮೇಲೆ ನಿರ್ಬಂಧವನ್ನು ಹೇರಲಿದೆಯೆಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಬ್ರಿಟನ ಗೃಹಸಚಿವಾಲಯ ಸಿದ್ಧತೆ ನಡೆಸಿದೆ. ಕಳೆದ ವರ್ಷ ಲಂಡನನಲ್ಲಿ ಭಾರತೀಯ ಹೈಕಮೀಷನ ಕಚೇರಿಯ ಮೇಲೆ ಖಲಿಸ್ತಾನಿಯರು ದಾಳಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಕೊಳ್ಳಲಾಗುತ್ತಿದೆಯೆಂದು ಹೇಳಲಾಗುತ್ತಿದೆ.

1. ಇಂಟರನ್ಯಾಶನಲ್ ಸಿಖ್ ಯೂಥ್ ಫೆಡರೇಶನ ಸಂಘಟನೆಯ ಮೇಲೆ ಬ್ರಿಟನ ಈ ಹಿಂದೆಯೂ ನಿಷೇಧ ಹೇರಿತ್ತು; ಆದರೆ 2016 ರಲ್ಲಿ ಅದನ್ನು ಹಿಂಪಡೆಯಲಾಗಿತ್ತು. ಈ ಸಂಘಟನೆಯ ಮೇಲೆ ಹಿಂದೂ ಮತ್ತು ಭಾರತೀಯ ಸರಕಾರಿ ಅಧಿಕಾರಿಗಳನ್ನು ಗುರಿ ಮಾಡಿ ಅವರ ಹತ್ಯೆ, ಬಾಂಬಸ್ಫೋಟ ಮತ್ತು ಅಪಹರಣ ಮಾಡಿರುವ ಆರೋಪಗಳಿವೆ.

2. ಖಾಲಸಾ ಟೆಲಿವಿಶನ ಲಿಮಿಟೆಡ ಮೇಲೆ ಫೆಬ್ರುವರಿ 2021 ರಲ್ಲಿ 50 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗಿತ್ತು. ಹಾಗೆಯೇ ಅದರ ಪರವಾನಿಗೆಯನ್ನು ರದ್ದುಗೊಳಿಸಲಾಗಿತ್ತು. ಸಧ್ಯಕ್ಕೆ ಈ ಸಂಘಟನೆ ಸಾಮಾಜಿಕ ಮಾಧ್ಯಮದಿಂದ ಸಕ್ರಿಯವಾಗಿದೆ.

ಸಂಪಾದಕೀಯ ನಿಲುವು

ಹಿಂದಿನ ವರ್ಷ ನಡೆದ ದಾಳಿಯ ಹಿನ್ನೆಲೆಯಲ್ಲಿ ಏಕೆ ಇಷ್ಟು ತಡವಾಗಿ ಕ್ರಮ ?