ಶ್ರೀಲಂಕಾದ ತಮಿಳು ನಿರಾಶ್ರಿತರನ್ನು ಸಿಎಎ ಕಾನೂನಿನಿಂದ ದೂರವಿಡುವುದು ಸೂಕ್ತವಲ್ಲ ! – ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ

ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡರ ಹೇಳಿಕೆ !

(ಸಿಎಎ ಎಂದರೆ ಪೌರತ್ವ ತಿದ್ದುಪಡಿ ಕಾಯ್ದೆ)

ಬೆಂಗಳೂರು – ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ರಾಜ್ಯದ ಹೇಳಿಕೆಯನ್ನು ಮಂಡಿಸಲು ಮಂತ್ರಿಮಂಡಲದ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ; ಆದರೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಹೇಳುವುದಾದರೆ, ಶ್ರೀಲಂಕಾದಿಂದ ಬಂದಿರುವ ತಮಿಳು ಹಿಂದೂ ನಿರಾಶ್ರಿತರನ್ನು ಈ ಕಾನೂನಿನ ಲಾಭದಿಂದ ವಂಚಿತಗೊಳಿಸುವುದು ಅಥವಾ ಹೊರಗಿಡುವುದು ಸೂಕ್ತವಲ್ಲ ಎಂದು ರಾಜ್ಯದ ಕಂದಾಯ ಸಚಿವ ಭೈರೇಗೌಡರು ಹೇಳಿದ್ದಾರೆ. ಅವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಕಂದಾಯ ಸಚಿವ ಭೈರೇಗೌಡ ಇವರು ಮಾತನಾಡುತ್ತಾ, ಪಕ್ಕದ ದೇಶದಿಂದ ಬರುವವರಿಗೆ ಈ ಕಾನೂನಿನ ಅನುಸಾರ ಪೌರತ್ವ ನೀಡಲಾಗುತ್ತಿದೆ; ಆದರೆ ಶ್ರೀಲಂಕಾದಿಂದ ಬರುವ ನಿರಾಶ್ರಿತರನ್ನು ಈ ಕಾನೂನಿನಿಂದ ಹೊರಗಿಡಲಾಗಿದೆ. ಪ್ರತ್ಯಕ್ಷದಲ್ಲಿ ಎಲ್.ಟಿ.ಟಿ.ಇ. (ಲಿಬರೇಶನ ಟೈಗರ್ಸ ಆಫ್ ತಮಿಳ ಈಳಂ-ಸ್ವತಂತ್ರ ತಮಿಳು ರಾಜ್ಯದ ಹುಲಿ) ಮತ್ತು ಶ್ರೀಲಂಕಾ ನಡುವಿನ ಸಂಘರ್ಷದಲ್ಲಿ ಶ್ರೀಲಂಕಾಗೆ ಹಣ ಗಳಿಸಲು ಹೋಗಿದ್ದ ತಮಿಳು ಜನರು ಸಂತ್ರಸ್ಥರಾಗಿದ್ದಾರೆ. ಎಲ್.ಟಿ.ಟಿ.ಇ. ಜನರನ್ನು ಅಥವಾ ಶ್ರೀಲಂಕಾವನ್ನು ನಾನು ಬೆಂಬಲಿಸುತ್ತಿಲ್ಲ; ಆದರೆ ಈ ಸಂಘರ್ಷದಲ್ಲಿ ಯಾರು ಯಾವ ತಪ್ಪನ್ನೂ ಮಾಡಿಲ್ಲವೋ, ಅಂತಹ ಅಮಾಯಕ ಜನರು ಇದರಲ್ಲಿ ಬಲಿಯಾಗಿದ್ದಾರೆ. ಶ್ರೀಲಂಕೆಯ ಸಂಘರ್ಷದ ಬಳಿಕ ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಅನೇಕ ಸ್ಥಳಗಳಲ್ಲಿ ಬಂದು ನೆಲೆಸಿರುವ ತಮಿಳು ಹಿಂದೂಗಳಿಗೆ ಯಾವುದೇ ಆಧಾರ ಸಿಕ್ಕಿಲ್ಲ. ನನ್ನ ಅಭಿಪ್ರಾಯದಂತೆ ಅತ್ಯಧಿಕ ಶೋಷಣೆಗೊಂಡಿರುವ ಜನರು ಅವರೇ ಆಗಿದ್ದಾರೆ. ಕೇಂದ್ರ ಸರಕಾರವು ತಮಿಳು ಹಿಂದೂಗಳನ್ನು ಸಿಎಎದಿಂದ ಏಕೆ ಹೊರಗಿಟ್ಟಿದೆ ? ಎಂದು ಪ್ರಶ್ನಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಎಂದರೇನು ?

‘ಪೌರತ್ವ ಕಾಯ್ದೆ 1955’ ಈ ಕಾಯಿದೆಯಲ್ಲಿ 2019 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಅದಕ್ಕನುಗುಣವಾಗಿ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಇಸ್ಲಾಮಿಕ್ ದೇಶಗಳಿಂದ ಭಾರತಕ್ಕೆ ನಿರಾಶ್ರಿತರಾಗಿ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಭಾರತದ ಪೌರತ್ವವನ್ನು ನೀಡಲಾಗುತ್ತದೆ. ಇದಕ್ಕಾಗಿ, ಡಿಸೆಂಬರ್ 31, 2014 ಕ್ಕಿಂತ ಮೊದಲು ಭಾರತಕ್ಕೆ ಬಂದಿರುವುದು ಅವಶ್ಯಕವಾಗಿದೆ.

ಸಂಪಾದಕೀಯ ನಿಲುವು

ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿರುವಾಗ `ಸಿಎಎ’ ನಂತಹ ಕಾನೂನನ್ನು ಏಕೆ ರೂಪಿಸಲಿಲ್ಲ ? ಆಗ ಕಾಂಗ್ರೆಸ್ಸನ್ನು ಯಾರು ತಡೆದಿದ್ದರು ? ಈಗಲೂ ಕಾಂಗ್ರೆಸ್ ಈ ಕಾನೂನನ್ನು ಬೆಂಬಲಿಸದೆ, ಕೇವಲ ಪ್ರಶ್ನಿಸುತ್ತಿದೆ !