SriLanka Arrest Indian Fishermen : ಶ್ರೀಲಂಕಾ ನೌಕಾಪಡೆಯಿಂದ 15 ಭಾರತೀಯ ಮೀನುಗಾರರ ಬಂಧನ !

ಅಕ್ರಮ ಮೀನುಗಾರಿಕೆ ಮಾಡಿದ ಆರೋಪ

ಕೊಲಂಬೊ – ಶ್ರೀಲಂಕಾದ ನೌಕಾಪಡೆಯು ಮಾರ್ಚ್ 15 ರಂದು ಉತ್ತರ ಜಾಫ್ನಾ ದ್ವೀಪದ ಕರೈನಗರದ ಕರಾವಳಿಯಲ್ಲಿ 15 ಭಾರತೀಯ ಮೀನುಗಾರರನ್ನು ಅಕ್ರಮ ಮೀನುಗಾರಿಕೆ ಆರೋಪದ ಮೇಲೆ ಬಂಧಿಸಿದೆ. ಶ್ರೀಲಂಕಾ ನೌಕಾಪಡೆಯು ಈ ಮೀನುಗಾರರ ದೋಣಿಗಳನ್ನು ಸಹ ವಶಪಡಿಸಿಕೊಂಡಿದೆ ಮತ್ತು ತಪಾಸಣೆಗಾಗಿ ಮೀನುಗಾರಿಕೆ ನಿರ್ದೇಶನಾಲಯಕ್ಕೆ ಕಳುಹಿಸಿದೆ. ಈ ವರ್ಷ, ಶ್ರೀಲಂಕಾ ನೌಕಾಪಡೆಯು 16 ದೋಣಿ ಸಹಿತ 225 ಭಾರತೀಯ ಮೀನುಗಾರರನ್ನು ಬಂಧಿಸಿದೆ.