ರಾಹುಲ ಗಾಂಧಿಯವರಿಗೆ ಭಾಷಣಗಳನ್ನು ಯಾರು ಬರೆದು ಕೊಡುತ್ತಾರೆ ? – ಗೃಹ ಸಚಿವ ಅಮಿತ ಶಾಹ

  • ಚುನಾವಣಾ ಬಾಂಡ ಯೋಜನೆಯ ಕುರಿತು ರಾಹುಲ ಗಾಂಧಿಯವರ ಮೇಲೆ ಗೃಹ ಸಚಿವ ಅಮಿತ ಶಾಹ ಇವರ ವಾಗ್ದಾಳಿ !

  • ಚುನಾವಣೆಯ ಬಾಂಡ ಯೋಜನೆಯನ್ನು ಸುಲಿಗೆಗೆ ಹೋಲಿಸಿದ ರಾಹುಲ ಗಾಂಧಿ

 

ಗೃಹಮಂತ್ರಿ ಅಮಿತ್ ಶಾಹ್ ಮತ್ತು ರಾಹುಲ್ ಗಾಂಧೀ

ನವದೆಹಲಿ : ಚುನಾವಣಾ ಬಾಂಡ ಯೋಜನೆಯ ಬಗ್ಗೆ ಕೇಂದ್ರ ಸರಕಾರದ ಮೇಲೆ ಟೀಕೆಗಳು ಆದ ಬಳಿಕ ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಹಾ ಇವರು, ರಾಜಕೀಯ ಕ್ಷೇತ್ರದಿಂದ ಕಪ್ಪು ಹಣ ಹೊರ ತೆಗೆಯಲು ಚುನಾವಣಾ ಬಾಂಡ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದನ್ನು ನಿರ್ಬಂಧಿಸಿದ್ದರಿಂದ ಈಗ ಕಪ್ಪು ಹಣ ಪುನಃ ರಾಜಕಾರಣದಲ್ಲಿ ಹೋಗುವ ಸಾಧ್ಯತೆಯಿದೆ. ರಾಹುಲ ಗಾಂಧಿಯವರು ಈ ‘ಚುನಾವಣಾ ಬಾಂಡ ಯೋಜನೆಯನ್ನು ಜಗತ್ತಿನ ಅತಿದೊಡ್ಡ ಸುಲಿಗೆ ಮಾಡುವ ಮಾರ್ಗ’ ಎಂದು ಹೇಳಿದ್ದರು. ರಾಹುಲ ಗಾಂಧಿಯವರಿಗೆ ಇಂತಹ ಭಾಷಣಗಳನ್ನು ಯಾರು ಬರೆದು ಕೊಡುತ್ತಾರೆಯೋ, ಗೊತ್ತಿಲ್ಲ ಎಂದು ಶಹಾ ಈ ಸಂದರ್ಭದಲ್ಲಿ ಟೀಕಿಸಿದರು.

ಸರಕಾರವು 2018 ರಲ್ಲಿ ಚುನಾವಣೆ ಬಾಂಡ ಯೋಜನೆಯನ್ನು ಜಾರಿಗೊಳಿಸಿತ್ತು. ಅದನ್ನು ಸರ್ವೋಚ್ಚ ನ್ಯಾಯಾಲಯವು ಕಳೆದ ತಿಂಗಳು ನಿರ್ಬಂಧಿಸಿತು. ಇದರ ಬಗ್ಗೆ ಶಹಾ ಮಾತನಾಡಿ,

1. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ನಾನು ಮಾತನಾಡುವುದಿಲ್ಲ. ಚುನಾವಣೆ ಬಾಂಡ ಯೋಜನೆಯನ್ನು ನಿಲ್ಲಿಸುವ ಬದಲು, ಅದರಲ್ಲಿ ಸುಧಾರಣೆಗಳನ್ನು ಮಾಡಬಹುದು.

2. ಈ ಯೋಜನೆಯ ಮೊದಲು ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ದೇಣಿಗೆಗಳನ್ನು ನೀಡಲಾಗುತ್ತಿತ್ತು. ಈ ಯೋಜನೆಯಿಂದ ಸಂಸ್ಥೆ ಅಥವಾ ವೈಯಕ್ತಿಕ ಸ್ತರದಲ್ಲಿ ಬ್ಯಾಂಕಿನ ಮಾಧ್ಯಮದಿಂದ ಬಾಂಡ(ನಗದು) ಖರೀದಿಸುವ ಮತ್ತು ಅದನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯ ಸ್ವರೂಪದಲ್ಲಿ ನೀಡುವ ಪದ್ಧತಿಯನ್ನು ಪ್ರಾರಂಭಿಸಲಾಯಿತು.

3. ಭಾಜಪ ಅಧಿಕಾರದಲ್ಲಿರುವುದರಿಂದ ಚುನಾವಣಾ ಬಾಂಡ ಯೋಜನೆಯಿಂದ ನಮಗೆ ಅತ್ಯಧಿಕ ಲಾಭವಾಗಿದೆಯೆಂದು ಹೇಳಲಾಗುತ್ತಿದೆ. ಆದರೆ ಭಾಜಪಾಗೆ ಕೇವಲ 6 ಸಾವಿರ ಕೋಟಿ ರೂಪಾಯಿಗಳು ಚುನಾವಣಾ ನಗದು ಸಿಕ್ಕಿದೆ. ಎಲ್ಲ ರಾಜಕೀಯ ಪಕ್ಷಗಳಿಗೆ ಸಿಕ್ಕಿರುವ ಒಟ್ಟು ಚುನಾವಣಾ ನಗದಿನ ಅಂಕಿ ಅಂಶಗಳು 20 ಸಾವಿರ ಕೋಟಿರೂಪಾಯಿಗಳಿಗಿಂತಲೂ ಹೆಚ್ಚಿದೆ. ಇನ್ನುಳಿದ 14 ಸಾವಿರ ಕೋಟಿ ರೂಪಾಯಿಗಳು ಯಾರಿಗೆ ಹೋದವು ?

4. ವಿರೋಧಿ ಪಕ್ಷಗಳಿಗೆ ಸಿಕ್ಕಿರುವ ದೇಣಿಗೆಯು ಅವರ ಲೋಕಸಭೆಯ ಸಂಸದರ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ಇದೆ.

5. ಈ ಯೋಜನೆಯ ಮೊದಲು ನಗದು ರೂಪದಲ್ಲಿ ದೇಣಿಗೆಗಳನ್ನು ನೀಡುತ್ತಿದ್ದಾಗ, ಕಾಂಗ್ರೆಸ್ ನಾಯಕರು 100 ರೂಪಾಯಿ ಪಕ್ಷಕ್ಕೆ ಮತ್ತು 1 ಸಾವಿರ ರೂಪಾಯಿ ತಮ್ಮ ಬಳಿಗೆ ಇಟ್ಟುಕೊಳ್ಳುತ್ತಿದ್ದರು. ಎಂದು ಹೇಳಿದರು.