ಸಿಎಎ ಕಾಯ್ದೆಯನ್ನು ವಿರೋಧಿಸುವವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ ಶಾಹ ವಾಗ್ದಾಳಿ !
ಸಿಎಎ ಕಾಯ್ದೆ ಕುರಿತು ಕೇಂದ್ರ ಗೃಹ ಸಚಿವ ಅಮಿತ ಶಾಹ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅವರು ಹೇಳಿದ ಮಹತ್ವದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
೧. ಜನಸಂಘ ಯಾವಾಗಲೂ ವಿಭಜನೆಯನ್ನು ವಿರೋಧಿಸುತ್ತಲೇ ಬಂದಿದೆ !
೧೯೪೭ ರಲ್ಲಿ ದೇಶ ವಿಭಜನೆಯಾಯಿತು. ಭಾರತೀಯ ಜನಸಂಘ ಮತ್ತು ಭಾಜಪ ಯಾವಾಗಲೂ ವಿಭಜನೆಯನ್ನು ವಿರೋಧಿಸುತ್ತಿವೆ. ಧರ್ಮದ ಆಧಾರದಲ್ಲಿ ದೇಶದ ವಿಭಜನೆ ಆಗಬಾರದಿತ್ತು; ಆದರೆ ಆ ಸಮಯದಲ್ಲಿ ಅದನ್ನು ಮಾಡಲಾಯಿತು. ವಿಭಜನೆಯ ನಂತರ ಅಲ್ಪಸಂಖ್ಯಾತರ ಅಪಾರ ಶೋಷಣೆಯಾಯಿತು. ಅವರನ್ನು ಮತಾಂತರಿಸಲಾಯಿತು. ಅವರು ಭಾರತಕ್ಕೆ ಆಶ್ರಯಕ್ಕಾಗಿ ಬಂದರೆ, ಅವರಿಗೆ ಇಲ್ಲಿ ಪೌರತ್ವದ ಹಕ್ಕಿಲ್ಲವೇ?
೨. ಹಿಂದೂಗಳಿಗೆ ವಿಶ್ವಾಸಘಾತ ಮಾಡಿದ ಕಾಂಗ್ರೆಸ್ !
‘ಈಗ ಗಲಭೆ ನಡೆಯುತ್ತಿದೆ. ಆದ್ದರಿಂದ ನೀವು ಇರುವ ಸ್ಥಳದಲ್ಲಿಯೇ ಇರಿ. ಮುಂದಿನ ಬಾರಿ ನೀವು ಭಾರತಕ್ಕೆ ಬಂದಾಗ ನಿಮ್ಮನ್ನು ಸ್ವಾಗತಿಸಲಾಗುವುದು’, ಎಂದು ವಿಭಜನೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಚುನಾವಣೆ ಮತ್ತು ಮತಪೆಟ್ಟಿಗೆಗಳ ರಾಜಕೀಯ ಪ್ರಾರಂಭವಾಯಿತು. ಇದಲ್ಲದೆ, ಹಿಂದೂಗಳಿಗೆ ನೀಡಿದ ಭರವಸೆಯನ್ನು ಕಾಂಗ್ರೆಸ್ ಎಂದಿಗೂ ಈಡೇರಿಸಿಲ್ಲ!
೩. ಪ್ರತಿಯೊಂದು ದೇಶದ ದುಸ್ಥಿತಿಯಿಂದಾಗಿ ಅಲ್ಲಿನ ಜನರಿಗೆ ಪೌರತ್ವ ನೀಡುವುದು ಅಪ್ರಾಯೋಗಿಕ!
ಮುಸಲ್ಮಾನ ಜನಸಂಖ್ಯೆಗೆ ಮಾತ್ರ ಅಖಂಡ ಭಾರತವನ್ನು ವಿಭಜಿಸಿ ಪ್ರತ್ಯೇಕ ದೇಶವನ್ನು ನೀಡಲಾಯಿತು. ಅವರಿಗೂ ಪೌರತ್ವವನ್ನು ನೀಡಬೇಕೆಂದು ಯೋಚಿಸಿದರೆ, ಪ್ರತಿಯೊಂದು ದೇಶದ ದುರವಸ್ಥೆಯಿಂದಾಗಿ ಅದರ ಜನರಿಗೆ ಭಾರತದ ಬಾಗಿಲು ತೆರೆಯಬೇಕಾಗುತ್ತದೆ. ಅಖಂಡ ಭಾರತದ ಭಾಗವಾಗಿದ್ದವರು ಮತ್ತು ಧಾರ್ಮಿಕ ಕಿರುಕುಳ ಅನುಭವಿಸಿದವರಿಗೆ ಆಶ್ರಯ ನೀಡುವುದು ನಮ್ಮ ನೈತಿಕ ಕರ್ತವ್ಯ ಎಂದು ನಾನು ತಿಳಿಯುತ್ತೇನೆ.
೪. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಎಲ್ಲಾ ಹಿಂದೂಗಳು ಎಲ್ಲಿಗೆ ಹೋದರು?
- ಪಾಕಿಸ್ತಾನ: ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ಶೇ. ೨೩ ರಷ್ಟು ಹಿಂದೂಗಳು ಮತ್ತು ಸಿಖ್ಖರು ಇದ್ದರು. ಇಂದು, ಶೇ. ೩.೭ ರಷ್ಟು ಉಳಿದಿದ್ದಾರೆ.
- ಬಾಂಗ್ಲಾದೇಶ: ೧೯೫೧ ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಪ್ರಮಾಣವು ಶೇ. ೨೨ ರಷ್ಟಿತ್ತು, ೨೦೧೧ ರ ಜನಗಣತಿಯಲ್ಲಿ ಅದು ಶೇ. ೧೦ ರಷ್ಟಿತ್ತು.
- ಅಫ್ಘಾನಿಸ್ತಾನ: ೧೯೯೨ ರ ಮೊದಲು ಸುಮಾರು ೨ ಲಕ್ಷ ಸಿಕ್ಖ್ ಮತ್ತು ಹಿಂದೂಗಳಿದ್ದರು. ಇಂದು ಸರಿಸುಮಾರು ಕೇವಲ ೫೦೦ ಇಷ್ಟೇ ಉಳಿದಿದ್ದಾರೆ.
- ಅವರೆಲ್ಲ ಎಲ್ಲಿ ಹೋದರು? ಅವರನ್ನು ಮತಾಂತರಿಸಲಾಯಿತು. ಅವರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಿ ಅವಮಾನಿಸಲಾಯಿತು. ಈ ಜನರು ಎಲ್ಲಿಗೆ ಹೋಗುವರು ?
- ದೇಶ ಅದರ ಬಗ್ಗೆ ಯೋಚಿಸುವುದಿಲ್ಲವೇ? ಇವರ ಶ್ರದ್ಧೆಗೆ ತಕ್ಕಂತೆ ಬದುಕುವ ಹಕ್ಕು ಇವರಿಗಿಲ್ಲವೇ? ಭಾರತ ಅಖಂಡವಾದಾಗ ಅವರೆಲ್ಲ ನಮಗೆ ಸೇರಿದ್ದರು. ಈ ತತ್ವವನ್ನು
- ಉಳಿಸಿಕೊಳ್ಳಬೇಕಾದರೆ, ವಿಭಜನೆಯ ನಂತರ ದೇಶದಲ್ಲಿ ಇಷ್ಟೊಂದು ನಿರಾಶ್ರಿತರನ್ನು ಏಕೆ ಇರಿಸಲಾಯಿತು? ಆಗ ಅದಕ್ಕೂ ಅರ್ಥವಿಲ್ಲ.
೫. ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ಕೇಜ್ರಿವಾಲ್ ಏಕೆ ಮಾತನಾಡುವುದಿಲ್ಲ ?
ಈ ಕಾನೂನಿನಿಂದ ನಿರಾಶ್ರಿತರಿಗೆ ಪೌರತ್ವ ಸಿಗಲಿದೆ. ಇದು ಅಪಾಯಕಾರಿಯಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದರು. ಈ ಬಗ್ಗೆ ಶಾಹ ಇವರು ಉತ್ತರಿಸುತ್ತಾ, ಕೇಜ್ರಿವಾಲ್‌ಗೆ ಈ ಜನರು ಈಗಾಗಲೇ ನಮ್ಮ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ ಎಂಬುದು ತಿಳಿದಿಲ್ಲ. ಅವರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಇವರು ೨೦೧೪ ರಿಂದ ಇಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಂತಹವರಿಗೆ ಮಾತ್ರ ಪೌರತ್ವ ಸಿಗುತ್ತದೆ. ಕೇಜ್ರಿವಾಲ್ ಅವರಿಗೆ ಈ ಬಗ್ಗೆ ಮಾತ್ರ ಕಾಳಜಿ ಇದ್ದರೆ, ಅವರು ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಅವರು ರೋಹಿಂಗ್ಯಾಗಳನ್ನು ಏಕೆ ವಿರೋಧಿಸುವುದಿಲ್ಲ?
೬. ಮಮತಾ ಬ್ಯಾನರ್ಜಿಯವರಿಗೆ ನಿರಾಶ್ರಿತರು ಮತ್ತು ನುಸುಳುಕೋರರ ನಡುವಿನ ವ್ಯತ್ಯಾಸ ತಿಳಿದಿಲ್ಲ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ನಡೆಯುತ್ತಿರುವ ರಾಜಕೀಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ ಶಾಹ ಇವರು ಪ್ರತಿಕ್ರಿಯಿಸಿದ್ದಾರೆ. ಈ ಕಾನೂನನ್ನು ವಿರೋಧಿಸಿದ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿದ ಶಾಹ, ಬಾಂಗ್ಲಾದೇಶದಿಂದ ಬಂಗಾಳಕ್ಕೆ ಬಂದ ಹಿಂದೂಗಳಿಗೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಅವರನ್ನು ಅಕ್ರಮ ವಲಸಿಗರ ಪಟ್ಟಿಗೆ ಸೇರಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುವುದು. ಬ್ಯಾನರ್ಜಿಯವರಿಗೆ ನಿರಾಶ್ರಿತರು ಮತ್ತು ನುಸುಳುಕೋರರ ನಡುವಿನ ವ್ಯತ್ಯಾಸ ತಿಳಿದಿಲ್ಲ. ನಾನು ಅವರಿಗೆ ಮನವಿ ಮಾಡುತ್ತೇನೆ, ದಯವಿಟ್ಟು ಬಾಂಗ್ಲಾದೇಶದಿಂದ ಬರುವ ಬಂಗಾಳಿ ಹಿಂದೂಗಳಿಗೆ ವಿರೋಧಿಸಬೇಡಿ. ನೀವೂ ಬೆಂಗಾಲಿಯೇ ಆಗಿದ್ದೀರಿ!
೭. ಇಸ್ಲಾಮಿಕ್ ದೇಶಗಳಲ್ಲಿ ಮುಸಲ್ಮಾನರ ಮೇಲೆ ದಬ್ಬಾಳಿಕೆಯಾಗಲು ಸಾಧ್ಯವಿಲ್ಲ !
ಸಿಎಎ ಕಾಯ್ದೆಯನ್ನು ಮುಸಲ್ಮಾನವಿರೋಧಿ ಎಂದು ಕರೆಯುವುದರ ಹಿಂದೆ ಓವೈಸಿಯ ತರ್ಕವೇನು ? ಧಾರ್ಮಿಕವಾಗಿ ಅನ್ಯಾಯಕ್ಕೊಳಗಾದವರಿಗೆ ಭಾರತೀಯ ಪೌರತ್ವ ನೀಡಬೇಕು ಎಂಬುದು ಮಾನದಂಡವಾಗಿದೆ. ಮುಸಲ್ಮಾನರಿಗೆ ಧಾರ್ಮಿಕ ಅನ್ಯಾಯವಾಗಲು ಸಾಧ್ಯವಿಲ್ಲ; ಏಕೆಂದರೆ ನಮ್ಮ ಸುತ್ತಲಿನ ಮೂರು ದೇಶಗಳೂ ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸಲ್ಪಟ್ಟಿವೆ. ಅವರ ಸಂವಿಧಾನದಲ್ಲಿ ಅವು ಇಸ್ಲಾಮಿಕ್ ರಾಷ್ಟ್ರವೆಂದು ಹೇಳುತ್ತದೆ,
೮. ಸಿಎಎ ಮೂಲಕ ಪೌರತ್ವದ ಸಿಗುವ ಬಗ್ಗೆ ಗೃಹ ಸಚಿವರು ಹೇಳಿದ್ದೇನು?
ಸಿಎಎ ಅಡಿಯಲ್ಲಿ ಪೌರತ್ವವನ್ನು ಪಡೆಯುವವರನ್ನು ಭಾರತದ ಇತರ ನಾಗರಿಕರಂತೆ ಗೌರವದಿಂದ ಭಾರತೀಯರ ಪಟ್ಟಿಯಲ್ಲಿ ಸೇರಿಸಲಾಗುವುದು. ಪ್ರಜೆಗಳಾಗಿ ನಮಗಿರುವ ಎಲ್ಲಾ ಹಕ್ಕುಗಳು ಅವರಿಗೂ ಇರುತ್ತದೆ. ಅವರೂ ಚುನಾವಣೆಗೆ ಸ್ಪರ್ಧಿಸಬಹುದು. ಶಾಸಕರು, ಸಂಸದರು, ಮಂತ್ರಿಗಳೂ ಆಗಬಹುದು.
ಭಾರತದ ಅಲ್ಪಸಂಖ್ಯಾತರು ಆತಂಕಪಡುವ ಅಗತ್ಯವಿಲ್ಲ !
ಇಂತಹವರು ನಮ್ಮ ದೇಶದಲ್ಲಿ ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಇದು ಮೂರು ತಲೆಮಾರುಗಳಿಂದ ಕಿತ್ತುಕೊಂಡಿರುವ ಹಕ್ಕುಗಳನ್ನು ಅವರಿಗೆ ನೀಡುವ ಅಂಶವಾಗಿದೆ. ಭಾರತದ ಅಲ್ಪಸಂಖ್ಯಾತರು ಆತಂಕಪಡುವ ಅಗತ್ಯವಿಲ್ಲ ಎಂದು ನಾನು ಇತ್ತೀಚೆಗೆ ೪೧ ಬಾರಿ ಹೇಳಿದ್ದೇನೆ. ಈ ಕಾಯಿದೆಯು ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ.
ವಿದೇಶಿ ಮಾಧ್ಯಮಗಳಿಗೆ ಉತ್ತರ !
“ಅವರ ದೇಶದಲ್ಲಿ ತ್ರಿವಳಿ ತಲಾಖ್ ಇದೆಯೇ ? ಎಂದು ವಿದೇಶಿ ಮಾಧ್ಯಮಗಳಿಗೆ ಕೇಳಿ. ಅವರ ದೇಶದಲ್ಲಿ ‘ಮುಸ್ಲಿಂ ವೈಯಕ್ತಿಕ ಕಾನೂನು’ ಇದೆಯೇ? ಅವರ ದೇಶದಲ್ಲಿ ಒಂದಾದರೂ ರಾಜ್ಯಗಳಲ್ಲಿ ೩೭೦ ನೇ ವಿಧಿಯಂತಹ ನಿಬಂಧನೆ ಇದೆಯೇ?
ಸಂಪಾದಕೀಯ ನಿಲುವುನೆರೆಯ ಇಸ್ಲಾಮಿಕ್ ರಾಷ್ಟ್ರಗಳ ಕಿರುಕುಳದಿಂದ ಹಿಂದೂಗಳನ್ನು ಮುಕ್ತಗೊಳಿಸಿದ ಕೇಂದ್ರ ಸಚಿವ ಅಮಿತ ಶಾಹ ಅವರ ಈ ಕ್ರಮ ಸ್ವಾಗತಾರ್ಹ. ಹಿಂದೂಗಳ ಪುನರುತ್ಥಾನಕ್ಕಾಗಿ ಇಂತಹ ಪ್ರಯತ್ನಗಳನ್ನು ಮಾಡದೆ ಕಾಂಗ್ರೆಸ್ ಕೊನೆಯ ಉಸಿರೆಳೆಯುತ್ತಿದೆ ಎಂಬುದನ್ನು ಅದು ನೆನಪಿಟ್ಟುಕೊಳ್ಳಬೇಕು ! |