SC Notice To SBI : ಚುನಾವಣಾ ಬಾಂಡ್ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದಿಂದ ಎಸ್.ಬಿ.ಐ.ಗೆ ನೋಟೀಸ್ ಜಾರಿ !

ಬ್ಯಾಂಕ್ ಬಾಂಡ್‌ಗಳ ಮಾಹಿತಿ ನೀಡುವಾಗ ಯಾರು ಯಾವ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ?, ಈ ಮಾಹಿತಿ ನೀಡಿಲ್ಲ !

ನವ ದೆಹಲಿ – ಚುನಾವಣಾ ಬಾಂಡ್‌ಗಳ ಪ್ರಕರಣದಲ್ಲಿ ಎಸ್.ಬಿ.ಐ.ವು ಚುನಾವಣಾ ಆಯೋಗಕ್ಕೆ ಸರ್ವೋಚ್ಛ ನ್ಯಾಯಾಲಯದ ಆದೇಶದ ನಂತರ ಸಾಲ ಬಾಂಡ್‌ಗಳ ಬಗ್ಗೆ ಮಾಹಿತಿ ಕೊಟ್ಟಿದೆ. ಆನಂತರ ಆಯೋಗವು ಈ ಮಾಹಿತಿಯನ್ನು ಅದರ ಜಾಲತಾಣದಲ್ಲಿ ಪ್ರಸಾರ ಮಾಡಿದೆ; ಆದರೆ ಈ ಮಾಹಿತಿಯಲ್ಲಿ ಬಾಂಡ್‌ಗಳ ಸಂಖ್ಯೆ ನಮೂದಿಸದ ಕಾರಣ ಸರ್ವೋಚ್ಛ ನ್ಯಾಯಾಲಯವು ನೋಟೀಸ್ ಜಾರಿ ಮಾಡಿದ್ದು ಮಾರ್ಚ್ ೧೮ ರ ಒಳಗೆ ಅದಕ್ಕೆ ಉತ್ತರ ನೀಡುವಂತೆ ಸೂಚಿಸಿದೆ. ಈ ಸಂಖ್ಯೆ ಇಲ್ಲದಿರುವುದರಿಂದ ಯಾರು ಯಾವ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ?, ಇದು ಬಹಿರಂಗವಾಗಿಲ್ಲ.

ನ್ಯಾಯಾಲಯವು, ಚುನಾವಣಾ ಬಾಂಡ್‌ನ ಖರಿದಿಯ ದಿನಾಂಕ, ಖರೀದಿದಾರರ ಹೆಸರು, ವರ್ಗ ಸೇರಿದಂತೆ ಸಂಪೂರ್ಣ ವಿವರಗಳನ್ನು ನೀಡಬೇಕು ಎಂದು ಸಂವಿಧಾನ ಪೀಠದ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಹೇಳಿದೆ. ಬ್ಯಾಂಕ್ ಬಾಂಡ್‌ಗಳ ‘ಯೂನಿಕ್ ಆಲ್ಫಾ ನ್ಯೂಮರಿಕ್‘ ಸಂಖ್ಯೆಗಳನ್ನು ಬಹಿರಂಗಪಡಿಸಿಲ್ಲ.

ಸಂಪಾದಕೀಯ ನಿಲುವು

ಈ ಪ್ರಕರಣದಲ್ಲಿ ಎಸ್.ಬಿ.ಐ. ಮರೆಮಾಚುತ್ತಿದೆ, ಎಂದು ಜನಸಾಮಾನ್ಯರಿಗೆ ಕಂಡು ಬರುತ್ತಿದೆ !