Islamic Provocation in France: ಫ್ರಾನ್ಸನಲ್ಲಿನ ಒಂದು ಸ್ಮಶಾನದಲ್ಲಿ ದುಷ್ಕರ್ಮಿಗಳಿಂದ ೫೮ ಗೋರಿಗಳ ಮೇಲೆ ಫ್ರಾನ್ಸ್ ಅಲ್ಲಾನದ್ದಾಗಿದೆ, ಅಲ್ಲಾನಿಗೆ ಶರಣಾಗಿ ಎಂಬ ಬರಹ !

ಫ್ರಾನ್ಸ್ ನಲ್ಲಿ ಕೇವಲ ಶೇಕಡ ೯ ರಷ್ಟು ಮುಸಲ್ಮಾನರಿದ್ದರೂ ಈ ಸ್ಥಿತಿ ಇದೆ. ನಾಳೆ ಇದಕ್ಕಿಂತಲೂ ಎರಡು ಪಟ್ಟು ಅಥವಾ ಮೂರು ಪಟ್ಟು ಆದಾಗ ಫ್ರಾನ್ಸ್ ಇಸ್ಲಾಮಿ ದೇಶವಾದರೆ ಅದರಲ್ಲಿ ಆಶ್ಚರ್ಯ ಏನು ಇಲ್ಲ !

ಪ್ಯಾರಿಸ್ (ಫ್ರಾನ್ಸ್) – ಮುಸಲ್ಮಾನರ ರಮಜಾನ ತಿಂಗಳು ಆರಂಭವಾಗುತ್ತಲೇ ಫ್ರಾನ್ಸನ ಒಂದು ಸ್ಮಶಾನ ಭೂಮಿಯಲ್ಲಿ ಸುಮಾರು ೫೮ ಗೋರಿಗಳ ಮೇಲೆ ‘ಅಲ್ಲಾನಿಗೆ ಶರಣಾಗಿ’, ‘ಫ್ರಾನ್ಸ್ ಮೊದಲೇ ಅಲ್ಲಾನದ್ದಾಗಿದೆ’ ಮತ್ತು ‘ಮುಸಲ್ಮಾನೇತರರಿಗೆ ರಮಜಾನ್ ಮುಬಾರಕ್’ ಮುಂತಾದವು ಬರೆದಿರುವುದು ಕಂಡು ಬಂದಿದೆ. ಈ ಗೋರಿಗಳು ಕ್ರೈಸ್ತರದ್ದಾಗಿದೆ, ಎಂದು ಹೇಳುತ್ತಿದ್ದಾರೆ. ಈ ಘಟನೆಯಿಂದ ಪರಿಸರದ ನಾಗರಿಕರಲ್ಲಿ ಆಕ್ರೋಶವು ಭುಗಿಲೆದ್ದಿದೆ. ಇಲ್ಲಿಯ ಮೇಯರ್‌ಘಟನಾಸ್ಥಳಕ್ಕೆ ತಲುಪಿ, ಇಂತಹ ಚಿಕ್ಕ ನಗರದಲ್ಲಿ ಇದು ವಿಚಿತ್ರವಾಗಿದೆ ಎಂದು ಹೇಳಿದರು.

ಅ. ಮಾರ್ಚ್ ೧೧ ರಂದು ಬೆಳಿಗ್ಗೆ ಪೇರಿಗಾರ್ಡ್ ವರ್ಟ್, ಡಾಡ್ರೋಗ್ನೆ ಇಲ್ಲಿಯ ಕ್ಲೆರ್ಮೊಟ್ ಡಿ ಎಕ್ಸೆಡ್ಯುಯಿಲ್ ಸ್ಮಶಾನ ಭೂಮಿಯಲ್ಲಿನ ೫೮ ಗೋರಿಗಳ ಮೇಲೆ ಈ ಮೇಲಿನ ಶಬ್ದಗಳು ಬರೆದಿರುವುದು ಕಂಡುಬಂದಿತು. ಗೋರಿ, ಯುದ್ಧ ಸ್ಮಾರಕ, ಚರ್ಚಿನ ಬಾಗಿಲು, ಯೇಸುವಿನ ಪುತ್ತಳಿ ಮತ್ತು ಕಾರಂಜಿಗಳು ಇರುವ ಸ್ಥಳಗಳಲ್ಲಿ ಇಂತಹ ವಾಕ್ಯಗಳು ಬರೆದಿದ್ದಾರೆ.

ಆ. ಇದಲ್ಲದೆ ಒಂದು ಗೋರಿಯ ಮೇಲೆ GWER ಎಂದೂ ಬರೆದಿರುವುದು ಕಂಡು ಬಂದಿದೆ. ಅಲ್ಜೇರಿಯನ್ ಅರೇಬಿಯಲ್ಲಿ ‘ಗ್ವರ್’ ಎಂದರೆ ‘ಶ್ವೇತ ವರ್ಣಿಯರು, ಪಶ್ಚಿಮಾತ್ಯರು ಅಥವಾ ಮುಸಲ್ಮಾನನೇತರರು’ ಎಂದಾಗುತ್ತದೆ. ಅಷ್ಟೇ ಅಲ್ಲದೆ ಸ್ಮಶಾನ ಭೂಮಿಯಿಂದ ೩೦೦ ಮೀಟರ್ ಅಂತರದಲ್ಲಿರುವ ಒಂದು ಚರ್ಚ್ ಅನ್ನು ಗುರಿ ಮಾಡಿ ಅದರ ಮರದ ಬಾಗಿಲಿನ ಮೇಲೆ ‘ರಮಜಾನ್ ಮುಬಾರಕ್’ ಎಂದು ಬರೆದಿದ್ದಾರೆ.