ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ನಂತರ ಪಾಕಿಸ್ತಾನಿಗಳ ಪ್ರತಿಕ್ರಿಯೆ !
ಇಸ್ಲಾಮಾಬಾದ (ಪಾಕಿಸ್ತಾನ) – ಭಾರತ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತಂದಿದೆ. ಈ ಕಾನೂನು ಜಾರಿಗೊಳಿಸಿದ ಬಳಿಕ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಈ ಮುಸ್ಲಿಂ ಬಹುಸಂಖ್ಯಾತ ದೇಶದಿಂದ ಬಂದಿರುವ ಮತ್ತು 2014 ರಿಂದ ಭಾರತದಲ್ಲಿ ವಾಸಿಸುವವರಿಗೆ ಭಾರತದ ಪೌರತ್ವ ಸಿಗಲಿದೆ. ಸರಕಾರದ ಈ ನಿರ್ಧಾರದಿಂದ ಕೇವಲ ಭಾರತದಲ್ಲಿ ವಾಸಿಸುವ ಪಾಕಿಸ್ತಾನಿ ನಿರಾಶ್ರಿತರಷ್ಟೇ ಅಲ್ಲ, ಬದಲಾಗಿ ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಮುಸಲ್ಮಾನರೂ ಶ್ಲಾಘಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿರುವ ಓರ್ವ ಪ್ರಸಿದ್ಧ ‘ಯು ಟ್ಯೂಬರ’ (ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ) ಸೋಹೆಬ ಚೌಧರಿ ಅವರು ‘ಸಿಎಎ’ ಕುರಿತು ಪಾಕಿಸ್ತಾನದ ನಾಗರಿಕರ ಅಭಿಪ್ರಾಯವನ್ನು ಸಂಗ್ರಹಿಸಿದರು. ಈ ಬಗ್ಗೆ ಹೆಚ್ಚಿನವರು ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಗಡಿಯನ್ನು ತೆರೆದರೆ, ಅವರೆಲ್ಲರೂ ಭಾರತಕ್ಕೆ ಹೋಗುವರು ಎಂದು ಹೇಳಿದರು.
1. ನಮ್ಮ ಮುಸ್ಲಿಂ ಸಹೋದರತ್ವ ಸುಳ್ಳಾಗಿದೆ !
ಸೋಹೇಬ ಚೌಧರಿಯೊಂದಿಗೆ ಮಾತನಾಡುತ್ತಿರುವಾಗ ಒಬ್ಬ ಪಾಕಿಸ್ತಾನಿ ಯುವಕನು, ನಾವು ಪಾಕಿಸ್ತಾನಿಗಳು ‘ಮುಸ್ಲಿಂ ಬ್ರದರ್‌ಹುಡ್’ (ಮುಸಲ್ಮಾನ ಸಹೋದರತ್ವ) ಬಗ್ಗೆ ಮಾತನಾಡುತ್ತೇವೆ; ಆದರೆ ನಮ್ಮ ಸಹೋದರತ್ವ ಸುಳ್ಳಾಗಿದೆ. ಅಫ್ಘಾನಿಸ್ತಾನದ ನಿರಾಶ್ರಿತ ಮುಸ್ಲಿಮರು 40 ವರ್ಷಗಳಿಂದ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ; ಆದರೆ ಇಲ್ಲಿಯವರೆಗೆ ನಾವು ಅವರಿಗೆ ಪೌರತ್ವ ನೀಡಿಲ್ಲ. ಇದಕ್ಕೆ ವಿರುದ್ಧವಾಗಿ, ಅವರನ್ನು ದೇಶದಿಂದ ಹೊರಗೆ ಅಟ್ಟುತ್ತಿದ್ದೇವೆ. ಇದೇ ಸಮಯದಲ್ಲಿ ಇತರ ದೇಶಗಳಲ್ಲಿ ತೊಂದರೆಗಳನ್ನು ಎದುರಿಸುವ ಹಿಂದೂ ಸಹೋದರರಿಗೆ ಮಾತ್ರ ಭಾರತ ತನ್ನ ದೇಶದ ಪೌರತ್ವವನ್ನು ನೀಡುತ್ತಿದೆ. ಇಷ್ಟೇ ಅಲ್ಲ ಇದರಲ್ಲಿ ಸಿಖ್ಖರೂ ಸೇರಿದ್ದಾರೆ. ಮೋದಿಯವರು ನಿಜವಾದ ನಾಯಕರಾಗಿದ್ದಾರೆ. `ಈ ಜನರು ನಾಗರಿಕರಾಗಿ ದೇಶದ ಪ್ರಗತಿಗೆ ತಮ್ಮ ಸಹಕಾರವನ್ನು ನೀಡುವರು’ ಎನ್ನುವುದು ಅವರಿಗೆ ತಿಳಿದಿದೆ.
2. ಪಾಕಿಸ್ತಾನದ ಗಡಿ ತೆರೆದರೆ, ಹಿಂದೂಗಳು ಭಾರತಕ್ಕೆ ಹೋಗುವರು; ಆದರೆ ಕಾಶ್ಮೀರದಿಂದ ಒಬ್ಬನೇ ಒಬ್ಬ ಮುಸಲ್ಮಾನ ಪಾಕಿಸ್ತಾನಕ್ಕೆ ಬರುವುದಿಲ್ಲ !
ಇನ್ನೊಬ್ಬ ಪಾಕಿಸ್ತಾನಿ ಯುವಕ ಮಾತನಾಡಿ, ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳು ಭಾರತಕ್ಕೆ ಹೋಗಲು ಕಾರಣವೇನು?, ದಯವಿಟ್ಟು ಜನರಿಗೆ ತಿಳಿಸಿರಿ, ಕಳೆದ 40 ವರ್ಷಗಳಲ್ಲಿ ಎಷ್ಟು ಹೊಸ ದೇವಸ್ಥಾನಗಳು ನಿರ್ಮಾಣವಾಗಿವೆ ? ಇದಕ್ಕೆ ಉತ್ತರ ನೀಡಬೇಕು. ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳ ಮೂಲಭೂತ ಅಗತ್ಯಗಳನ್ನು ಏಕೆ ಪೂರೈಸುತ್ತಿಲ್ಲ ? ಇಂದು ಪರಿಸ್ಥಿತಿ ಹೇಗಿದೆಯೆಂದರೆ, ಒಂದು ವೇಳೆ ಗಡಿ ತೆರೆದರೆ ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂಗಳೆಲ್ಲ ಭಾರತಕ್ಕೆ ಹೋಗುತ್ತಾರೆ. ಇದರ ಬದಲು ಭಾರತದ ಭಾಗವನ್ನು ಬಿಡಿರಿ, ಕಾಶ್ಮೀರದಿಂದಲೂ ಮುಸಲ್ಮಾನರು ಪಾಕಿಸ್ಥಾನಕ್ಕೆ ಬರುವುದಿಲ್ಲ.
3. ನೆರೆಯ ದೇಶದೊಂದಿಗೆ ಪಾಕಿಸ್ತಾನದ ಸಂಬಂಧ ಸ್ವಲ್ಪವೂ ಚೆನ್ನಾಗಿಲ್ಲ !
ನೆರೆಯ ದೇಶಗಳೊಂದಿಗೆ ಪಾಕಿಸ್ತಾನದ ಸಂಬಂಧ ಸ್ವಲ್ಪವೂ ಚೆನ್ನಾಗಿಲ್ಲ, ಎಂದು ಪಾಕಿಸ್ತಾನದ ಯುವತಿಯೊಬ್ಬಳು ಹೇಳಿದ್ದಾರೆ. ಅವರು ಮಾತನಾಡಿ, ನೀವು ಇರಾನ್ ಕಡೆ ನೋಡಿರಿ, ಅಫ್ಘಾನಿಸ್ತಾನ ಕಡೆ ನೋಡಿರಿ ಯಾರೊಂದಿಗೂ ಪಾಕಿಸ್ತಾನದ ಸಂಬಂಧ ಉತ್ತಮವಾಗಿಲ್ಲ. ಭಾರತವನ್ನು ನೋಡಿ, ಇರಾನ್‌ನೊಂದಿಗೆ ಅದರ ಸಂಬಂಧಗಳು ಎಷ್ಟು ಉತ್ತಮವಾಗಿವೆ ಎಂದರೆ ಭಾರತವು ಚಾಬಹಾರ್ ಬಂದರನ್ನು ಅಲ್ಲಿ ನಿರ್ಮಿಸುತ್ತಿದೆ. ಭಾರತದ ಬಾಂಗ್ಲಾದೇಶದೊಂದಿಗಿನ ಸಂಬಂಧದ ಮೇಲೆ ಸಂಪೂರ್ಣ ಜಗತ್ತಿನ ಗಮನವಿದೆ. ಅಫಘಾನಿಸ್ತಾನದ ತಾಲಿಬಾನ ಸರಕಾರವೂ ಪಾಕಿಸ್ತಾನದೊಂದಿಗೆ ಅಲ್ಲ, ಬದಲಾಗಿ ಭಾರತದೊಂದಿಗೆ ಸಂಬಂಧವನ್ನು ಸುಧಾರಿಸುವಲ್ಲಿ ನಿರತವಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನದ ಮುಸಲ್ಮಾನರಿಗೆ ಏನು ಗಮನಕ್ಕೆ ಬರುತ್ತದೆಯೋ, ಅದು ಭಾರತದಲ್ಲಿರುವ ಕಪಟಿ ಜಾತ್ಯತೀತವಾದಿ ಜನ್ಮಹಿಂದೂ ರಾಜಕಾರಣಿಗಳ ಗಮನಕ್ಕೆ ಬರುವುದಿಲ್ಲ. ಈಗ ಇಂತಹ ಹಿಂದೂಗಳನ್ನೇ ಯಾರಾದರೂ ಪಾಕಿಸ್ಥಾನಕ್ಕೆ ಕಳುಹಿಸುವಂತೆ ಕೋರಿದರೆ, ಆಶ್ಚರ್ಯಪಡಬಾರದು ! |