Kejriwal Criticizes CAA : ‘ಭಾಜಪದವರು ೩ ಕೋಟಿ ಜನರನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವವರೆ ? (ಅಂತೆ) – ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್

ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್ ಇವರಿಂದ ಸಿಎಎ ಬಗ್ಗೆ ಭಾಜಪ ಕುರಿತು ಟೀಕೆ !

(ಸಿಎಎ ಎಂದರೆ ಪೌರತ್ವ ಸುಧಾರಣೆ ಕಾಯ್ದೆ (ಸಿಟಿಜನ್ ಶಿಪ್ ಅಮೆಂಡ್ಮೆಂಟ್ ಬಿಲ್) 

ನವ ದೆಹಲಿ – ‘ಸಿಎಎ’ ಇಂದ ೩ ಕೋಟಿ ಜನರು ದೇಶದಲ್ಲಿ ಬರುವರು. ಅವರಿಗೆ ಉದ್ಯೋಗ, ಮನೆ ಮುಂತಾದವು ಯಾರು ನೀಡುವರು ? ಭಾಜಪದವರು ತಮ್ಮ ಮನೆಯಲ್ಲಿ ಅವರನ್ನು ಇಟ್ಟುಕೊಳ್ಳುವರೇ ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರು ಕೇಂದ್ರ ಸರಕಾರವನ್ನು ಟೀಕಿಸಿದರು. ಅವರು ಇಲ್ಲಿ ಪತ್ರಕರ್ತರ ಸಭೆಯಲ್ಲಿ ಸಿಎಎ ಕಾನೂನಿನ ವಿರುದ್ಧ ಮಾತನಾಡುತ್ತಿದ್ದರು.

ಕೇಜರಿವಾಲ್ ಇವರು ಮಾತನಾಡುತ್ತಾ,

೧. ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಯು ಜಾರಿಗೊಳಿಸಿ ಸ್ವಂತದ ಅಧಿಕಾರದ ಮನೆಯಲ್ಲಿ ಪಾಕಿಸ್ತಾನಿ ಜನರನ್ನು ಇರಿಸುವ ಕಾರ್ಯ ಮಾಡುತ್ತಿದೆ. ಸರಕಾರಿ ಹಣ ಇದು ದೇಶದ ವಿಕಾಸಕ್ಕಾಗಿ ಖರ್ಚಾಗಬೇಕು; ಆದರೆ ಆ ಹಣ ಈಗ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನ ಈ ೩ ದೇಶಗಳಲ್ಲಿನ ಜನರನ್ನು ಭಾರತದಲ್ಲಿ ವಾಸಿಸುವುದಕ್ಕಾಗಿ ಖರ್ಚು ಮಾಡುತ್ತಿದ್ದಾರೆ. (ನಾಗರಿಕರಿಗೆ ಎಲ್ಲವೂ ಉಚಿತ ನೀಡುವ ಯೋಜನೆಯ ಹೆಸರಿನಲ್ಲಿ ಸರಕಾರದ ಹಣ ವ್ಯರ್ಥ ಖರ್ಚು ಮಾಡುವ ಕೇಜರಿವಾಲ ಸರಕಾರಕ್ಕೆ ಸ್ವಂತದ ರಾಜಕೀಯ ಸ್ವಾರ್ಥ ಸಾಧಿಸುತ್ತಿದ್ದಾರೆ. ಅದರ ಬಗ್ಗೆ ಅವರು ಏಕೆ ಮಾತನಾಡುತ್ತಿಲ್ಲ ? – ಸಂಪಾದಕರು)

೨. ಈ ೩ ದೇಶದ ಸುಮಾರು ೩ ಕೋಟಿ ಜನರು ಅಲ್ಪಸಂಖ್ಯಾತರಾಗಿದ್ದಾರೆ. ಈ ಅಲ್ಪಸಂಖ್ಯಾತರಿಗಾಗಿ ಭಾರತದ ಬಾಗಿಲು ತೆರೆಯುವವರು ಹಾಗೂ ಈ ದೇಶದಿಂದ ದೊಡ್ಡ ಪ್ರಮಾಣದಲ್ಲಿ ಜನರು ಭಾರತಕ್ಕೆ ಬರುವರು. ೩ ಕೋಟಿಯಲ್ಲಿ ಒಂದುವರೆ ಕೋಟಿ ಜನರು ಭಾರತಕ್ಕೆ ಬಂರುವರು ಅವರಿಗೆ ಉದ್ಯೋಗ ಯಾರು ನೀಡುವರು? ಈ ಜನರನ್ನು ಎಲ್ಲಿ ಇರಿಸುವರು? ಭಾಜಪದ ನಾಯಕರು ಅವರನ್ನು ತಮ್ಮ ಮನೆಯಲ್ಲಿ ಇರಿಸಿಕೊಳ್ಳುವರೇ? ಭಾಜಪದ ನಾಯಕರು ಅವರಿಗೆ ಉದ್ಯೋಗ ನೀಡುವರೆ? (ಕೇಜರಿವಾಲ್ ಕಳೆದ ೧೦ ವರ್ಷಗಳಿಂದ ದೆಹಲಿಯ ಮುಖ್ಯಮಂತ್ರಿ ಆಗಿದ್ದಾರೆ ಅವರು ಈ ಸಮಯದಲ್ಲಿ ಎಷ್ಟು ಭಾರತೀಯರಿಗೆ ಉದ್ಯೋಗ ನೀಡಿದ್ದಾರೆ ? ಅದನ್ನು ಅವರು ಹೇಳುವವರೇ ? – ಸಂಪಾದಕರು)

೩. ದೇಶದಲ್ಲಿನ ಮಧ್ಯಮ ವರ್ಗದವರು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಯುವಕರಿಗೆ ಉದ್ಯೋಗ ದೊರೆಯುತ್ತಿಲ್ಲ ಹಾಗಾದರೆ ಇಂತಹ ಪ್ರಶ್ನೆಗಳನ್ನು ಬಿಡಿಸುವ ಬದಲು ಕೇಂದ್ರ ಸರಕಾರವು ‘ಸಿಎಎ’ ತಂದಿದೆ. ಇದರಿಂದ ಕೇಂದ್ರ ಸರಕಾರದ ಹಣ ಪಾಕಿಸ್ತಾನದ ಜನರ ಮೇಲೆ ಖರ್ಚಾಗುವುದು. (ಪಾಕಿಸ್ತಾನಿ ಹಿಂದೂಗಳ ಮೇಲೆ ಖರ್ಚಾಗುವುದು ಎಂದು ಕೇಜರಿವಾಲ್ ಏಕೆ ಮಾತನಾಡುವುದಿಲ್ಲ ? ಹಿಂದೂ ಶಬ್ದ ಮಾತನಾಡಲು ಅವರಿಗೆ ನಾಚಿಕೆ ಅನಿಸುತ್ತದೆಯೆ ? – ಸಂಪಾದಕರು) 

೪. ಭಾಜಪ ಇದೆಲ್ಲವನ್ನು ಮತದ ರಾಜಕಾರಣವೆಂದು ಮಾಡುತ್ತಿದೆ. ಭಾಜಪ ಮತಗಳಿಗಾಗಿ ಹೊಲಸು ರಾಜಕಾರಣ ಮಾಡುತ್ತಿರುವ ಏಕೈಕ ಪಕ್ಷವಾಗಿದೆ. ಅಸ್ಸಾಂ ಸಹಿತ ಈಶಾನ್ಯ ಭಾರತದಲ್ಲಿನ ಜನರು ಈ ಸರಕಾರದ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು ಜನರ ವಿಶ್ವಾಸಘಾತವಾಗಿದೆ. ಜನರು ಚುನಾವಣೆಯಲ್ಲಿ ಮತದಾನ ಮಾಡಿ ಭಾಜಪಾಗೆ ಪ್ರತ್ಯುತ್ತರ ನೀಡುವರು.

ಸಂಪಾದಕೀಯ ನಿಲುವು

  • ಕಳೆದ ಅನೇಕ ವರ್ಷಗಳಿಂದ ಭಾರತದಲ್ಲಿ ಕೋಟ್ಯಾಂತರ ಬಾಂಗ್ಲಾದೇಶದ ಮುಸಲ್ಮಾನರು ನುಸುಳಿ ಇಲ್ಲಿ ವಾಸಿಸುತ್ತಿದ್ದಾರೆ. ರಾಜಧಾನಿಯಲ್ಲಿ ಕೂಡ ಅವರ ಸಂಖ್ಯೆ ಬೃಹತ್ ಪ್ರಮಾಣದಲ್ಲಿದೆ. ದೇಶದಲ್ಲಿ ಈಗ ರೋಹಿಂಗ್ಯಾಗಳು ಕೂಡ ನುಸುಳುತ್ತಿದ್ದಾರೆ. ಅವರನ್ನು ಹೊರ ಹಾಕುವುದರ ಬಗ್ಗೆ ಕೇಜರಿವಾಲ್ ಎಂದು ಚಕಾರ ಶಬ್ದವು ತೆಗೆದಿದ್ದಾರೆಯೇ ? ಕೇಜರಿವಾಲ್ ಇವರು ಈ ನುಸುಳುಕೋರರನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವರೇ ?
  • ಇಸ್ಲಾಂ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಕೇಜ್ರಿವಾಲ್ ಇವರಿಗೆ ಎಂದು ಏಕೆ ಮಾತನಾಡಬೇಕೆಂದು ಅನಿಸುವುದಿಲ್ಲ ? ಅಥವಾ ಅವರಿಗೆ ಅವರು ‘ಹಿಂದೂ’ ಅಂತ ಮಾತನಾಡಬೇಕು ಎಂದು ಅನಿಸುವುದಿಲ್ಲವೇ ?
  • ಕೇಂದ್ರ ಸರಕಾರವು ಈಗ ಬಾಂಗ್ಲಾದೇಶದ ನಸುಳುಕೋರರನ್ನು ಮತ್ತು ರೋಹಿಂಗ್ಯಾ ಮಸಲ್ಮಾನರನ್ನು ಓಡಿಸಲು ಕಾನೂನು ಜಾರಿಗೊಳಿಸಬೇಕು. ಇದಕ್ಕೆ ಕೇಜರಿವಾಲ್ ಸಹಜವಾಗಿ ವಿರೋಧಿಸುವರು ! ಇದರಿಂದ ಅವರ ದ್ವಿಮುಖಪಾತ್ರ ಜಗತ್ತಿನೆದುರು ಬರದೇ ಇರುವುದಿಲ್ಲ !