ಸಹರಾನಪುರ (ಉತ್ತರ ಪ್ರದೇಶ) – ಇಲ್ಲಿನ ಡಾ. ಸಾಜಿದ ಅಹಮದ ಇವರು ರಮಝಾನ ಮೊದಲು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಅವರು ಈಗ ಸತಬೀರ ಸಿಂಹ ರಾಣಾ ಆಗಿದ್ದಾರೆ. ಅವರು 4 ವರ್ಷಗಳ ಮೊದಲು ಅನಿತಾ ಹೆಸರಿನ ಹಿಂದೂ ಯುವತಿಯೊಂದಿಗೆ ಪ್ರೇಮವಿವಾಹವಾಗಿದ್ದರು. ಆ ಸಮಯದಲ್ಲಿ ಅವರಿಬ್ಬರೂ ತಮ್ಮ ತಮ್ಮ ಧರ್ಮವನ್ನು ಪಾಲಿಸುವ ಬಗ್ಗೆ ನಿರ್ಧರಿಸಿದ್ದರು. ಕಾಲಾಂತರ ಪತ್ನಿಯು ಅವರನ್ನು ಹಿಂದೂ ಧರ್ಮವನ್ನು ಅವಲಂಬಿಸುವಂತೆ ಸಲಹೆಯನ್ನು ನೀಡಿದ್ದರು. ಡಾ. ಸಾಜಿದ ಇವರು ಮಾತನಾಡಿ, `ನನಗೆ ಚಿಕ್ಕಂದಿನಿಂದಲೂ ಹಿಂದೂ ಧರ್ಮದ ಬಗ್ಗೆ ಆಸಕ್ತಿಯಿತ್ತು; ಆದರೆ ಕೌಟುಂಬಿಕ ಸಂಬಂಧಗಳು ಮತ್ತು ಇತರ ಜವಾಬ್ದಾರಿಗಳಿಂದ ನಾನು ಎಂದಿಗೂ ಹಿಂದೂ ಧರ್ಮವನ್ನು ಸ್ವೀಕರಿಸುವ ಧೈರ್ಯವನ್ನು ಮಾಡಿರಲಿಲ್ಲ. ಈಗ ಸತಬೀರ ಸಿಂಹ ರಾಣಾ ಆಗಿರುವ ಬಗ್ಗೆ ಆನಂದವಿದೆ ಎಂದು ಹೇಳಿದರು.
1. ಡಾ. ಸಾಜಿದ ಅಹಮದ ಮಾರ್ಚ 11ರಂದು ಸಹಾರನಪುರದ ಹೌಸಿಂಗ ಡೆವಲಪಮೆಂಟನಲ್ಲಿರುವ ಹರಿಮಂದಿರದಲ್ಲಿ ಪತ್ನಿ ಮತ್ತು ಪುತ್ರನೊಂದಿಗೆ ಹಿಂದೂ ಧರ್ಮವನ್ನು ಸ್ವೀಕರಿಸಿದರು.
2. ಭಜರಂಗದಳದ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದರು. ಸತಬೀರ ಸಿಂಹ ರಾಣಾ ಮಾತನಾಡಿ, “ನನ್ನ ಪೂರ್ವಜರು ಹಿಂದೆ ಹಿಂದೂಗಳಾಗಿದ್ದರು; ಆದರೆ ಕೆಲವು ಕಾರಣಗಳಿಂದ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು; ಈಗ ಹಿಂದೂ ಧರ್ಮವನ್ನು ಪ್ರವೇಶಿಸುವ ಮೂಲಕ ನಾನು ತುಂಬಾ ಸಂತೋಷವನ್ನು ಅನುಭವಿಸಿದೆ. ನಾನು ಸ್ವ ಇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ.
3. ರಾಣಾ ತಮ್ಮ ಮಾತನ್ನು ಮುಂದುವರಿಸಿ, ಮುಸ್ಲಿಂ ಸಮುದಾಯದ ಜನರಿಗೆ ಅವರ ನಿರ್ಣಯ ಇಷ್ಟವಾಗಿಲ್ಲ. ಆದುದರಿಂದ ಜೀವಕ್ಕೆ ಅಪಾಯವಿದೆ. ಅದಕ್ಕಾಗಿ ಪೊಲೀಸರಿಗೆ ನಮಗೆ ಭದ್ರತೆ ನೀಡುವಂತೆ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿದರು.
#Saharanpur का साजिद ने अपना हिंदू धर्म, शादी के बाद मानसिक तनाव से था परेशान
सब्सक्राइब करें #TimesNowNavbharat👉 https://t.co/ogFsKfs8b9#TimesNowNavbharatOriginals #TNNOriginals #Shorts #TNNShorts #Religion #Hindu #Muslims #Conversion #SaharanpurNews #UPNews pic.twitter.com/Rxm3DY3OCo
— Times Now Navbharat (@TNNavbharat) March 11, 2024