ಖಲಿಸ್ತಾನಿ ಮತ್ತು ದರೋಡೆಕೋರರ ಪ್ರಕರಣಕ್ಕೆ ಸಂಬಂಧಿಸಿ ಕ್ರಮ
ನವ ದೆಹಲಿ/ಜಯಪುರ – ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್.ಐ.ಎ.)ಖಲಿಸ್ತಾನಿ ಪರ ದರೋಡೆಕೋರರಿಗೆ ಸಂಬಂಧಿಸಿದಂತೆ ಪಂಜಾಬ್,ಹರಿಯಾಣ,ರಾಜಸ್ಥಾನ ಮತ್ತುಮಧ್ಯಪ್ರದೇಶ ಈ ರಾಜ್ಯಗಳ ಸಹಿತ ಕೇಂದ್ರಾಡಳಿತ ಪ್ರದೇಶವಾದ ಚಂಢಿಗಢದಲ್ಲಿ ದಾಳಿ ಮಾಡಿದೆ. ಒಟ್ಟು ೩೦ ಸ್ಥಳಗಳಲ್ಲಿ ಈ ದಾಳಿ ನಡೆಸಲಾಗಿದೆ. ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯಿ ಅವನ ಅಡಗುತಾಣಗಳ ಮೇಲೆ ದಾಳಿ ನಡೆಸಲಾಯಿತು. ದೇಶದ ಉತ್ತರ ಭಾಗದಲ್ಲಿರುವ ರಾಜ್ಯಗಳಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸಲು ವಿದೇಶಿ ಭಯೋತ್ಪಾದಕ ಸಂಘಟನೆಗಳು ಸಂಘಟಿತ ಅಪರಾಧ ಗುಂಪುಗಳೊಂದಿಗೆ ಸೇರಿ ಕೆಲಸ ಮಾಡುತ್ತಿವೆ ಎಂಬ ಮಾಹಿತಿ ಎನ್.ಐ.ಎ.ಗೆ ಸಿಕ್ಕಿತ್ತು.
National Investigation Agency raids 30 locations in 4 States
Probe regarding the connection between #Khalistanis and Criminals#NIARaid #Khalistan pic.twitter.com/x4WjG4NCtt
— Sanatan Prabhat (@SanatanPrabhat) March 12, 2024