ಎಲ್ಲರೂ ಬಾಂಗ್ಲಾದೇಶದ ಮುಸಲ್ಮಾನರು
ನವಿಮುಂಬಯಿ – ಇಲ್ಲಿನ ಶಹಾಬಾಜ್ ಗ್ರಾಮದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ೮ ಬಾಂಗ್ಲಾದೇಶ ನಾಗರಿಕರ ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ ೫ ಮಹಿಳೆಯರು ಮತ್ತು ೩ ಪುರುಷರು ಇದ್ದು, ಅವರ ಹೆಸರುಗಳು ಹೀಗಿದೆ: ಪಾಯಲ್ ಕುಟುಸ್ ಮಲಿಕ್ , ರೂಬಿ ಕಾಶಮ್ ಅಲಿ ಬೇಗಂ, ಕನಿಕಾ ಬಾಬು ಶೇಖ್, ರಾಣಿ ಶಬ್ಬೀರ್ ಮುಲ್ಲಾ, ಹಲೀಮಾ ಸಲೀಂ ಶೇಖ್, ಮುನಿರುಲ್ ಸಿದ್ಧಿಕಿ ಶೇಖ್, ಸಲೀಂ ಕುಕ ಶೇಖ್, ಮಾಸುದ್ ರಾಜು ರಾಣಾ. ಇವರೆಲ್ಲರೂ ಬಾಂಗ್ಲಾದೇಶದ ನಾಗರೀಕರಾಗಿದ್ದಾರೆಂದು ಅಕ್ರಮ ಮಾನವ ಕಳ್ಳಸಾಗಣೆ ವಿರೋಧಿ ಘಟಕ(AHTU) ಮಾಡಿದ ಕಾರ್ಯಾಚರಣೆಯಲ್ಲಿ ಬಯಲಿಗೆ ಬಂದಿದೆ.
ಈ ಗ್ರಾಮದ ಅಪಾರ್ಟ್ಮೆಂಟ್ ನಲ್ಲಿ ಕೆಲವು ಬಾಂಗ್ಲಾದೇಶದ ನಾಗರೀಕರು ಅಕ್ರಮವಾಗಿ ವಾಸುಸುತ್ತಿರುವ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ AHTU ತಂಡ ದಾಳಿ ನಡೆಸಿದಾಗ ಇಷ್ಟೊಂದು ಮಂದಿ ಅಕ್ರಮವಾಗಿರುವುದು ಹೊರಬಂದಿದೆ. ಇವರ ಬಳಿ ಭಾರತೀಯ ನಾಗರೀಕತ್ವದ ಯಾವುದೇ ಸಾಕ್ಷಿ ಅಥವಾ ದಾಖಲೆ ಸಿಗಲಿಲ್ಲ. ಆದ್ದರಿಂದ ಇವರೆಲ್ಲರನ್ನೂ ಸದ್ಯ ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಇನ್ನೋರ್ವ ಬಾಂಗ್ಲಾದೇಶದ ನಾಸರೀನ್ ಸಿದ್ದಿಕಿ ಅಕ್ತರ್ ಎಂಬ ಮಹಿಳೆ ಬಂಧಿತರ ಜೊತೆಗೆ ಸಿಕ್ಕಿದ್ದು, ಆಕೆಯ ಬಳಿ ಚಿಕಿತ್ಸೆಗಾಗಿ ನೀಡಿರುವ ಅಧಿಕೃತ ವೀಸಾ ಇದ್ದ ಕಾರಣ ಆಕೆಯನ್ನು ಬಿಡುಗಡೆ ಮಾಡಲಾಗಿದೆ.
ಸಂಪಾದಕೀಯ ನಿಲುವುಅಕ್ರಮವಾಗಿ ಭಾರತದಲ್ಲಿ ವಾಸಿಸುವ ಬಾಂಗ್ಲಾದೇಶ ನಾಗರೀಕರ ಉಪಸ್ಥಿತಿ ಪೊಲೀಸರಿಗೆ ಲಚ್ಚಸ್ಪದ ! ಇಂತಹ ಪೊಲೀಸರು ಜನರನ್ನು ಹೇಗೆ ರಕ್ಷಿಸುವರು ? ಇಂತಹವರನ್ನು ನುಸುಳುಕೋರರೆಂದು ಘೋಷಿಸಿ ಭಾರತದಿಂದ ಗಡಿಪಾರು ಮಾಡಬೇಕಿದೆ ! |