ದೆಹಲಿಯ ಶಾಹಿನಾಳು ಹಿಂದೂ ಧರ್ಮವನ್ನು ಸ್ವೀಕರಿಸಿ ಶಿವಂನೊಂದಿಗೆ ವಿವಾಹ !

ನವ ದೆಹಲಿ – ಇಲ್ಲಿ ಶಾಹಿನಾ ಹೆಸರಿನ ಮುಸ್ಲಿಂ ಮಹಿಳೆ `ಘರವಾಪಸಿ’ ಮಾಡಿದ್ದಾಳೆ. ಶಾಹಿನಾಳು ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ ‘ಆರಾಧನಾ’ ಎಂಬ ಹೆಸರನ್ನು ಇಟ್ಟುಕೊಂಡಿದ್ದಾಳೆ. ತದನಂತರ ಶಾಹಿನಾಳು ಶಿವಂ ಹೆಸರಿನ ಹಿಂದೂ ಯುವಕನೊಂದಿಗೆ ದೆಹಲಿಯ ಆರ್ಯ ಸಮಾಜ ಮಂದಿರದಲ್ಲಿ ಮಾರ್ಚ 7, 2024 ರಂದು ವೈದಿಕ ಪದ್ಧತಿಯಂತೆ ವಿವಾಹವಾದಳು. ಶಾಹಿನಾಳು ಹಿಂದೂ ಧರ್ಮಕ್ಕೆ ಮರಳಿರುವುದು, ಅವಳ ಸ್ವಂತ ನಿರ್ಣಯವಾಗಿದೆಯೆಂದು ಹೇಳಿದಳು. ಶಾಹಿನಾಳು ದೆಹಲಿ ಸರಕಾರದ ಬಳಿ ಅವಳಿಗೆ ಮತ್ತು ಪತಿಯ ರಕ್ಷಣೆಗಾಗಿ ಸಹಾಯವನ್ನು ಕೋರಿದ್ದಾಳೆ. ದೆಹಲಿಯ `ಹಿಂದೂ ಮೋರ್ಚಾ’ ಹೆಸರಿನಲ್ಲಿ ಸಂಘಟನೆ ನಡೆಸುವ ದೀಪಕ ಮಲಿಕ ಇವರು ಈ ವೇಳೆ ಉಪಸ್ಥಿತರಿದ್ದರು.

ದೀಪಕ ಮಲಿಕ ಇವರು ಮಾತನಾಡಿ, ಶಾಹಿನಾ ಮತ್ತು ಶಿವಂ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಶಾಹಿನಾಳ ಕುಟುಂಬದವರು ಈ ಪ್ರೀತಿಗೆ ವಿರೋಧಿಸಿದ್ದರು. ಇವರಿಬ್ಬರೂ `ಹಿಂದೂ ಮೋರ್ಚಾ’ ವನ್ನು ಸಂಪರ್ಕಿಸಿದರು. `ಹಿಂದೂ ಮೋರ್ಚಾ’ ಇವರಿಬ್ಬರಿಗೂ ಭದ್ರತೆ ಮತ್ತು ಸಹಕಾರದ ಭರವಸೆಯನ್ನು ನೀಡಿತು.
ಮಾರ್ಚ್ 7, 2024 ರಂದು, 22 ವರ್ಷದ ಶಾಹಿನಾ ಮನೆಯಿಂದ ಹೊರಟು 26 ವರ್ಷದ ಶಿವಂ ಬಳಿ ತಲುಪಿದಳು. ಇಬ್ಬರೂ ಮೊದಲು ನ್ಯಾಯಾಲಯದಲ್ಲಿ ಆವಶ್ಯಕ ಕಾಗದಪತ್ರಗಳನ್ನು ಹಾಜರುಪಡಿಸಿದ ನಂತರ ದಂಪತಿಗಳು ಶಾಹದರಾ ಪರಿಸರದಲ್ಲಿರುವ ಆರ್ಯ ಸಮಾಜ ಮಂದಿರವನ್ನು ತಲುಪಿದರು. ಅಲ್ಲಿ ಶಾಹಿನಾ ಶಿವಂನೊಂದಿಗೆ ವೈದಿಕ ಪದ್ದತಿಯಂತೆ ಮದುವೆಯಾದರು. ಶಾಹಿನಾ ತಾನು ಈ ವಿವಾಹದಿಂದ ಸಂತೋಷ ಮತ್ತು ಸಮಾಧಾನಿಯಾಗಿದ್ದಾಳೆಂದು ಹೇಳಿದ್ದಾಳೆ.