India Tops Weapon Imports: ಭಾರತ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಶಸ್ತ್ರಾಸ್ತ್ರ ಆಮದ ಮಾಡುವ ದೇಶ !

ನವ ದೆಹಲಿ – ‘ಸ್ಟಾಕ್ ಹೋಂ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ ನಿಂದ (‘ಸಿಪರಿ’ಯು) ಪ್ರಸಿದ್ಧಗೊಳಿಸಿದ ವರದಿಯಲ್ಲಿ ಕಳೆದ ೫ ವರ್ಷಗಳಲ್ಲಿ ಭಾರತದ ಶಸ್ತ್ರಾಸ್ತ್ರ ಖರಿದಿಯಲ್ಲಿ ಶೇಕಡಾ ೪.೭ ರಷ್ಟು ಹೆಚ್ಚಾಗಿದೆ. ಆದ್ದರಿಂದ ಭಾರತ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಶಸ್ತ್ರಾಸ್ತ್ರ ಆಮದು ಮಾಡುವ ದೇಶವಾಗಿದೆ. ಭಾರತಸಹಿತ ಜಪಾನ್‌ನಿಂದ ಏಷ್ಯಾದಲ್ಲಿನ ಶಸ್ತ್ರಾಸ್ತ್ರದ ಆಮದಿನಲ್ಲಿ ಶೇಕಡ ೧.೫ ರಷ್ಟು ಹೆಚ್ಚಳವಾಗಿದೆ. ಇದೇ ಸಮಯದಲ್ಲಿ ಚೀನಾದ ಶಸ್ತ್ರಾಸ್ತ್ರಗಳ ಆಮದಿನಲ್ಲಿ ಶೇಕಡ ೪೪ ರಷ್ಟು ಇಳಿಕೆ ಆಗಿದೆ. ಐದನೆಯ ಸ್ಥಾನದಲ್ಲಿ ಪಾಕಿಸ್ತಾನ ಇದೆ.

ಇನ್ನೊಂದು ಕಡೆ ೨೦೧೪ – ೧೮ ರ ತುಲನೆಯಲ್ಲಿ ೨೦೧೯ – ೨೩ ರಲ್ಲಿ ರಷ್ಯಾ ಯುಕ್ರೇನ್ ಯುದ್ಧದಿಂದ ಯುರೋಪಿನಲ್ಲಿ ಶಸ್ತ್ರಾಸ್ತ್ರದ ಆಮದು ಹೆಚ್ಚು ಕಡಿಮೆ ಎರಡು ಪಟ್ಟು ಆಗಿದೆ. ಫೆಬ್ರುವರಿ ೨೦೨೨ ವರೆಗೆ ಕನಿಷ್ಠ ೩೦ ದೇಶಗಳಿಂದ ಸೈನಿಕ ಸಹಾಯವೆಂದು ಯುಕ್ರೇನಿಗೆ ಶಸ್ತ್ರಾಸ್ತ್ರ ಪೂರೈಸಿದವು. ಇದರಿಂದ ೨೦೧೯ – ೨೩ ರಲ್ಲಿ ಯುಕ್ರೇನ್ ಯುರೋಪದಲ್ಲಿ ಎಲ್ಲಕ್ಕಿಂತ ದೊಡ್ಡ ಶಸ್ತ್ರಾಸ್ತ್ರ ಆಮದುದಾರ ಮತ್ತು ಜಗತ್ತಿನಲ್ಲಿ ನಾಲ್ಕನೆ ಎಲ್ಲಕ್ಕಿಂತ ದೊಡ್ಡ ಆಮದದಾರನ ಸ್ಥಾನಕೇರಿತು.

ಶಸ್ತ್ರಾಸ್ತ ರಫ್ತು ಮಾಡುವಲ್ಲಿ ಅಮೇರಿಕಾ ಮೊದಲನೆಯ ಸ್ಥಾನದಲ್ಲಿ !

ಶಸ್ತ್ರಾಸ್ತ್ರ ರಫ್ತು ಮಾಡುವಲ್ಲಿ ಅಮೆರಿಕ ಮೊದಲನೇಯ ಹಾಗೂ ಫ್ರಾನ್ಸ್ ಎರಡನೆಯ ಸ್ಥಾನದಲ್ಲಿದೆ, ರಷ್ಯಾ ಇದೇ ಮೊದಲ ಬಾರಿ ೩ನೇ ಸ್ಥಾನಕ್ಕೆ ಹೋಗಿದೆ.