ತರಕಾರಿಗಳ ಕೆಳಗೆ ದನದ ಮಾಂಸ ಅಡಗಿಸಿಟ್ಟಿದ್ದ !
ಓತೂರ್ (ಪುಣೆ ಜಿಲ್ಲೆ) – ಜುನ್ನಾರ್ ತಾಲೂಕಿನ ಓತೂರಿನಲ್ಲಿ ದನದ ಮಾಂಸ ಸಾಗಾಟ ಪ್ರಕರಣದಲ್ಲಿ ನಾಸಿರ್ ಶೇಖ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದು, ಆತನಿಂದ 1 ಸಾವಿರದ 500 ಕೆಜಿ ಗೋಮಾಂಸವಿದ್ದ ಟೆಂಪೋವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಹಾಯಕ ಪೊಲೀಸ್ ನಿರೀಕ್ಷಕ ಎಲ್.ಜಿ. ಥಾಟೆ ಇವರು ಹೇಳಿದರು.
ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿರುವ ಬಗ್ಗೆ ಬಜರಂಗದಳದ ಕಾರ್ಯಕರ್ತರಿಗೆ ಗೌಪ್ಯ ಮಾಹಿತಿ ಸಿಕ್ಕಿತ್ತು. ಈ ವಿಷಯವನ್ನು ಓತೂರು ಪೊಲೀಸರ ಗಮನಕ್ಕೆ ತಂದರು. ಅದರಂತೆ ಮಾರ್ಚ್ 9ರಂದು ಮುಂಬಯಿ ಕಡೆಗೆ ವೇಗವಾಗಿ ಬರುತ್ತಿದ್ದ ಟೆಂಪೋವನ್ನು ಬಜರಂಗದಳದ ಕಾರ್ಯಕರ್ತರು ಹಾಗೂ ಓತೂರು ಪೊಲೀಸರು ತಡೆದು ತಪಾಸಣೆ ನಡೆಸಿದರು. ಈ ವೇಳೆ ಶಂಕಿತ ಆರೋಪಿಗಳು 1 ಸಾವಿರದ 500 ಕೆಜಿ ದನದ ಮಾಂಸವನ್ನು ತರಕಾರಿಗಳ ಕೆಳಗೆ ಬಚ್ಚಿಟ್ಟು ಮುಂಬಯಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಹೃಷಿಕೇಶ್ ಶೆಲಾರ್ ಇವರು ದೂರು ದಾಖಲಿಸಿದ್ದಾರೆ.
Fanatic arrested for #ILLEGALLY transporting 1,500 kg of beef in Otur (District Pune).
Beef was hidden underneath #vegetables
When will the police take concrete measures to stop this frequent illegal transportation and #smuggling of beef? Will the Police ever poise a stature,… pic.twitter.com/mFwEm6mJxW
— Sanatan Prabhat (@SanatanPrabhat) March 11, 2024
ಸಂಪಾದಕೀಯ ನಿಲುವುಪದೇ ಪದೇ ನಡೆಯುತ್ತಿರುವ ಅಕ್ರಮ ಸಾಗಾಟ ಮತ್ತು ಗೋಮಾಂಸ ಸಾಗಣೆಯನ್ನು ತಡೆಯಲು ಪೊಲೀಸರು ಯಾವಾಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ? ಗೋಮಾಂಸವನ್ನು ಅಕ್ರಮವಾಗಿ ಸಾಗಿಸುವ ಮತಾಂಧರಿಗೆ ಹದ್ದುಬಸ್ತಿನಲ್ಲಿಡಲು ಪೊಲೀಸರು ಕ್ರಮ ಕೈಗೊಳ್ಳುವರೇ ? |