ಜ್ಞಾನವಾಪಿಯ ನಂತರ ಈಗ ಧಾರನ ಭೋಜಶಾಲೆಯ ಸಮೀಕ್ಷೆ ! – ಉಚ್ಚ ನ್ಯಾಯಾಲಯ, ಮಧ್ಯಪ್ರದೇಶ

  • ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರ ವಿಭಾಗೀಯಪೀಠದ ಆದೇಶ

  • ೬ ವಾರದಲ್ಲಿ ವರದಿ ಸಲ್ಲಿಸುವಂತೆ ಆದೇಶ

ಇಂದೂರು (ಮಧ್ಯಪ್ರದೇಶ) – ಜ್ಞಾನವಾಪಿಯಂತೆ ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ಇಂದೂರ ವಿಭಾಗೀಯಪೀಠದಿಂದ ಭೋಜಶಾಲೆಯ ಸಮೀಕ್ಷೆ ನಡೆಸುವ ಆದೇಶ ನೀಡಿದೆ. ಈ ಬೇಡಿಕೆಯ ಅರ್ಜಿಯ ಮೇಲೆ ವಿಚಾರಣೆ ನಡೆಸುವಾಗ ಉಚ್ಚ ನ್ಯಾಯಾಲಯವು ಭಾರತೀಯ ಪುರಾತತ್ವ ಸಮೀಕ್ಷಾ ವಿಭಾಗಕ್ಕೆ ೫ ತಜ್ಞರ ತಂಡ ಸ್ಥಾಪಿಸಲು ಹೇಳಿದೆ. ಈ ತಂಡಕ್ಕೆ ೬ ವಾರದಲ್ಲಿ ವರದಿ ಸಿದ್ಧಪಡಿಸಿ ಪ್ರಸ್ತುತಪಡಿಸಬೇಕಾಗುತ್ತದೆ. ಹಿಂದೂ ಪಕ್ಷವು ಇಲ್ಲಿ ನಡೆಯುವ ನಮಾಜವನ್ನು ನಿಷೇಧಿಸಲು ಆಗ್ರಹಿಸಿದೆ. ನ್ಯಾಯಾಲಯವು ಸಮೀಕ್ಷೆಯ ಛಾಯಾಚಿತ್ರ ತೆಗೆಯುವ ಸಹಿತ ಚಿತ್ರೀಕರಣ ನಡೆಸಲು ಹೇಳಿದೆ. ಈ ವೈಜ್ಞಾನಿಕ ಸಮೀಕ್ಷೆ ‘ಜಿ.ಪಿ.ಆರ್’ ಮತ್ತು ‘ಜಿ.ಪಿ.ಎಸ್’ ಪದ್ಧತಿಯಿಂದ ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಈ ಪ್ರಕರಣದಲ್ಲಿ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಉಚ್ಚ ನ್ಯಾಯಾಲಯದ ಆದೇಶದ ಪತ್ರಕವನ್ನು ಪೋಸ್ಟ್ ಮಾಡುತ್ತಾ, ಮಧ್ಯ ಪ್ರದೇಶದಲ್ಲಿನ ಧಾರ ಭೋಜಶಾಲೆಯ ಪುರಾತತ್ವ ಸಮೀಕ್ಷೆ ನಡೆಸುವಂತೆ ನನ್ನ ವಿನಂತಿಗೆ ಇಂದೂರು ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ. ಇದರ ಆಧಾರದಲ್ಲಿ ಸಮೀಕ್ಷೆಯ ಬೇಡಿಕೆಗೆ ಒಪ್ಪಿಗೆ ನೀಡಿದ್ದಾರೆ.

ಮುಸಲ್ಮಾನರು ಭೋಜಶಾಲೆಯಲ್ಲಿನ ಯಜ್ಞಕುಂಡ ಅಪವಿತ್ರ ಗೊಳಿಸುತ್ತಾರೆ !

‘ಹಿಂದೂ ಫ್ರೆಂಟ್ ಫಾರ್ ಜಸ್ಟಿಸ್’ ಈ ಸಂಘಟನೆಯು ಮೇ ೧, ೨೦೨೨ ರಂದು ಇಂದೂರ ವಿಭಾಗಿಯಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ‘ಭೋಜಶಾಲೆಯ ಸಂಪೂರ್ಣ ನಿಯಂತ್ರಣ ಹಿಂದುಗಳ ಕೈಗೆ ನೀಡಬೇಕು, ಇದರಲ್ಲಿ ಹೇಳಿದೆ, ಪ್ರತಿ ಮಂಗಳವಾರ ಹಿಂದೂಗಳು ಭೋಜಶಾಲೆಯಲ್ಲಿ ಯಜ್ಞ ಮಾಡಿ ಶುದ್ಧೀಕರಣ ಮಾಡುತ್ತಾರೆ ಮತ್ತು ಶುಕ್ರವಾರ ಮುಸಲ್ಮಾನರು ನಮಾಜದ ಮೂಲಕ ಯಜ್ಞಕುಂಡ ಅಪವಿತ್ರ ಗೊಳಿಸುತ್ತಾರೆ. ಇದು ನಿಲ್ಲಬೇಕು. ಹಾಗೂ ಭೋಜಶಾಲೆಯ ಛಾಯಾಚಿತ್ರ ಮತ್ತು ಚಿತ್ರೀಕರಣ ಸಹಿತ ಉತ್ಖನ ನಡೆಸಲು ಅರ್ಜಿಯಲ್ಲಿ ವಿನಂತಿಸಲಾಗಿದೆ.

ಏನಿದು ವಾದ ?

ಧಾರ ಭೋಜಶಾಲೆ ರಾಜಾ ಭೋಜನು ಕಟ್ಟಿದ್ದನು. ಜಿಲ್ಲಾ ಆಡಳಿತದ ಜಾಲತಾಣದ ಪ್ರಕಾರ ಇದು ಒಂದು ವಿದ್ಯಾಪೀಠವಾಗಿತ್ತು. ಅದರಲ್ಲಿ ವಾಗ್ದೇವಿ (ಸರಸ್ವತಿ ದೇವಿಯ) ಮೂರ್ತಿ ಸ್ಥಾಪಿಸಲಾಗಿತ್ತು. ಮುಸಲ್ಮಾನ ಆಕ್ರಮಕರಿಂದ ಇಲ್ಲಿ ದಾಳಿ ನಡೆದು ಅದನ್ನು ಮಸೀದಿಗೆ ಪರಿವರ್ತಿಸಿದರು. ಇದರ ಅವಶೇಷ ಇಲ್ಲಿಯ ಮೌಲಾನ ಕಮಾಲ ಉದ್ದೀನ ಮಸೀದಿಯಲ್ಲಿ ಕೂಡ ನೋಡಲು ಸಿಗುತ್ತವೆ. ಮಸೀದಿ ಭೋಜಶಾಲೆಯ ಪರಿಸರದಲ್ಲಿಯೇ ಇದೆ ಹಾಗೂ ವಾಗ್ದೇವಿಯಮೂರ್ತಿ ಲಂಡನ್ ಸಂಗ್ರಹಾಲಯದಲ್ಲಿ ಇಡಲಾಗಿದೆ.

ಹಿಂದುಗಳಿಗೆ ಪೂಜೆ ಮತ್ತು ಮುಸಲ್ಮಾನರಿಗೆ ನಮಾಜ ಪಠಣೆಗಾಗಿ ಅನುಮತಿ !

ಪ್ರತಿ ಶುಕ್ರವಾರ ಮುಸಲ್ಮಾನರು ಮಧ್ಯಾಹ್ನ ಒಂದರಿಂದ ಮೂರರ ಸಮಯದಲ್ಲಿ ಸಮಾಜ ಪಠಣೆಗಾಗಿ ಭೋಜಶಾಲೆಯಲ್ಲಿ ಪ್ರವೇಶ ನೀಡುತ್ತಾರೆ ಹಾಗೂ ಪ್ರತಿ ಮಂಗಳವಾರ ಹಿಂದುಗಳಿಗೆ ಪೂಜೆಯ ಅನುಮತಿ ಇದೆ. ಎರಡು ಪಕ್ಷದವರಿಗೆ ಉಚಿತ ಪ್ರವೇಶವಿದೆ. ಇದಲ್ಲದೆ ವಸಂತ ಪಂಚಮಿಗೆ ಸರಸ್ವತಿ ಪೂಜೆಗಾಗಿ ಹಿಂದುಗಳಿಗೆ ದಿನವಿಡೀ ಪೂಜೆ ಮತ್ತು ಹವನಗಳ ಅನುಮತಿ ಇದೆ. ೨೦೦೬, ೨೦೧೨ ಮತ್ತು ೨೦೧೬ ರಲ್ಲಿ ಶುಕ್ರವಾರ ವಸಂತ ಪಂಚಮಿ ಬಂದಿತ್ತು, ಆಗ ವಿವಾದದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಸಂತ ಪಂಚಮಿ ಶುಕ್ರವಾರ ಇರುವಾಗ ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ಇದೆ ಮತ್ತು ಮುಸಲ್ಮಾನರಿಗೆ ಕೂಡ ನಮಜ ಪಠಣೆಯ ಅನುಮತಿ ಇದೆ, ಇಂತಹ ಪರಿಸ್ಥಿತಿಯಲ್ಲಿ ಶುಕ್ರವಾರ ವಸಂತ ಪಂಚಮಿ ಬಂದಿದ್ದರೆ ಪೂಜೆ ಮತ್ತು ನಮಾಜ ಎರಡು ವಿಷಯಗಳಲ್ಲಿ ಚರ್ಚೆ ನಡೆಯುತ್ತದೆ. ೨೦೨೬ ರಲ್ಲಿ ಮತ್ತೆ ಇದೇ ಪರಿಸ್ಥಿತಿ ಉದ್ಭವಿಸಬಹುದು.

ಜಿ.ಪಿ.ಆರ್. ಮತ್ತು ಜಿ.ಪಿ.ಎಸ್. ಎಂದರೆ ಏನು ?

ಜಿ.ಪಿ.ಆರ್. ಎಂದರೆ ಗ್ರೌಂಡ್ ಪೇನಿಟ್ರೆಟಿಂಗ ರಡಾರ್, ಭೂಮಿಯ ಕೆಳಗೆ ಇರುವ ರಚನೆ ಪರಿಶೀಲಿಸುವ ಯಂತ್ರವಾಗಿದೆ. ಇದರಲ್ಲಿ ರಡಾರನ ಉಪಯೋಗ ಮಾಡುತ್ತಾರೆ. ಇದರ ಮೂಲಕ ಭೂಮಿಯ ಕೆಳಗೆ ಇರುವ ವಸ್ತು ಮತ್ತು ಸಂರಚನೆ ನಿಖರವಾಗಿ ಅಳೆಯಬಹುದು. ಅದರಂತೆ ಜಿ.ಪಿ.ಎಸ್. ಎಂದರೆ ಗ್ಲೋಬಲ್ ಪೋಸಿಶನ್ ಇದರ ಮೂಲಕ ಕೂಡ ಭೂಮಿಯ ಸಮೀಕ್ಷೆ ನಡೆಯುತ್ತದೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿನ ಧಾರ ಭೋಜಶಾಲೆಯು ಕೂಡ ಹಿಂದುಗಳದೆ ಆಗಿದೆ. ಇದು ಈ ಸಮೀಕ್ಷೆಯಿಂದ ವೈಜ್ಞಾನಿಕ ದೃಷ್ಟಿಯಿಂದ ಸಿದ್ಧವಾಗುವುದು. ಈ ರೀತಿ ಈಗ ದೇಶದಲ್ಲಿನ ಯಾವ ದೇವಸ್ಥಾನಗಳು ನೆಲಸಮ ಮಾಡಿ ಅಲ್ಲಿ ಮಸೀದಿ ಕಟ್ಟಿದ್ದಾರೆಯೋ ಅಲ್ಲಿ ಇದು ನಡೆಯುವುದು ಅವಶ್ಯಕವಾಗಿದೆ. ಅದಕ್ಕಾಗಿ ನ್ಯಾಯಾಲಯಕ್ಕೆ ಹೋಗದೆ ಕೇಂದ್ರ ಸರಕಾರದಿಂದ ಪುರಾತತ್ವ ಇಲಾಖೆಗೆ ಆದೇಶ ನೀಡಬೇಕು ಹೀಗೆ ಯಾರಿಗಾದರೂ ಅನಿಸಿದರೆ ಅದು ತಪ್ಪಾಗಲಾರದು !