ಸಿದ್ಧಪೇಟ (ತೆಲಂಗಾಣ)ದಲ್ಲಿ ಮಹಾಶಿವರಾತ್ರಿಯ ದಿನದಂದು ಕೊಮುರಾವೆಲ್ಲಿ ದೇವಸ್ಥಾನದ ಹೊರಗೆ ಪೊಲೀಸರಿಂದ ಭಕ್ತರ ಮೇಲೆ ಲಾಠಿಪ್ರಹಾರ

ಭಾಜಪದಿಂದ ಟೀಕೆ!

ಸಿದ್ಧಪೇಟ (ತೆಲಂಗಾಣ) – ಇಲ್ಲಿ ಮಹಾಶಿವರಾತ್ರಿಯ ದಿನದಂದು ಕೊಮುರಾವೆಳ್ಳಿ ದೇವಸ್ಥಾನದಲ್ಲಿ ಭಕ್ತರು ಜಲಾಭಿಷೇಕ ಮಾಡಲು ಬಂದಾಗ ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಇಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

(ಸೌಜನ್ಯ – Nitin Indian Insights)

1. ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜೆಯ ನಂತರ ಭಕ್ತರ ಬಹುದೊಡ್ಡ ಗದ್ದಲವಾಗಿತ್ತು ಮತ್ತು ಅವರು ಇಲ್ಲಿ ನಿರ್ಮಿಸಲಾಗಿದ್ದ ಕಬ್ಬಿಣದ ಬೇಲಿಯನ್ನು ದಾಟಲು ಪ್ರಯತ್ನಿಸಿದರು. ಇದರಿಂದ ಪೊಲೀಸರು ಅವರನ್ನು ತಡೆಯಲು ಅವರ ಮೇಲೆ ಲಾಠಿ ಪ್ರಹಾರ ನಡೆಸಿದರು. ಇದರಲ್ಲಿ ಅನೇಕ ಭಕ್ತರು ಗಾಯಗೊಂಡರು. ಇದನ್ನು ಭಾಜಪ ಟೀಕಿಸಿದೆ. ಇದರೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕವೂ ರಾಜ್ಯದ ಕಾಂಗ್ರೆಸ ಸರಕಾರವನ್ನು ಟೀಕಿಸುತ್ತಿದ್ದಾರೆ.

2. ಭಾಜಪದ ತೆಲಂಗಾಣ ರಾಜ್ಯ ಖಜಾಂಚಿ ಶಾಂತಿಕುಮಾರ್,`ಎಕ್ಸ್’ ಮೂಲಕ ಮಾಡಿರುವ ಪೋಸ್ಟನಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರು ಮಹಿಳೆಯರನ್ನೂ ಬಿಟ್ಟಿಲ್ಲ. ಇದು ಹಿಂದೂಗಳ ಮೂಲಭೂತ ಹಕ್ಕುಗಳ ಮೇಲಿನ ದಾಳಿಯಾಗಿದೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂಗಳಿಗೆ ಹೊಡೆತವನ್ನೇ ತಿನ್ನಬೇಕಾಗುತ್ತದೆಯೆನ್ನುವುದು ಮತ್ತೊಮ್ಮೆ ಸಾಬೀತು.

ರಸ್ತೆಯನ್ನು ತಡೆದು ನಮಾಜ್ ಮಾಡುವವರನ್ನು ಪೋಲೀಸರು ಹೊಡೆದಾಗ ಆಕಾಶ-ಪಾತಾಳ ಒಂದು ಮಾಡುವ ಕಾಂಗ್ರೆಸ್ಸಿನ ಪ್ರಗತಿ(ಅಧೋ)ಪರರು ಈಗ ಒಂದು ಶಬ್ದವನ್ನೂ ಆಡುವುದಿಲ್ಲ, ಎನ್ನುವುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು!