ಜಾತಿ ಆಧಾರಿತ ತಾರತಮ್ಯಕ್ಕೆ ವರ್ಣ ವ್ಯವಸ್ಥೆ ಹೊಣೆಯಲ್ಲ !

ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮವನ್ನು ಮುಗಿಸುವ ಹೇಳಿಕೆಯ ಕುರಿತು ಮದ್ರಾಸ ಉಚ್ಚ ನ್ಯಾಯಾಲಯದ ಟಿಪ್ಪಣಿ !

ಚೆನ್ನೈ (ತಮಿಳುನಾಡು) – ಸಮಾಜದಲ್ಲಿ ಜಾತಿಯ ಆಧಾರದ ಮೇಲೆ ತಾರತಮ್ಯವಿದೆ ಮತ್ತು ಅದನ್ನು ತೊಡೆದುಹಾಕುವುದು ಅವಶ್ಯಕ ಎಂದು ನಾವು ನಂಬುತ್ತೇವೆ. ಇಂದು ನಮಗೆ ತಿಳಿದಿರುವ ಜಾತಿ ವ್ಯವಸ್ಥೆಯ ಇತಿಹಾಸವು ಒಂದು ಶತಮಾನಕ್ಕಿಂತ ಕಡಿಮೆಯಾಗಿದೆ. ಆದುದರಿಂದ ಜಾತಿಯ ಆಧಾರದ ಮೇಲೆ ಸಮಾಜದಲ್ಲಿ ನಿರ್ಮಾಣವಾಗಿರುವ ಒಡಕು ಮತ್ತು ತಾರತಮ್ಯಕ್ಕೆ ಕೇವಲ ವರ್ಣ ವ್ಯವಸ್ಥೆ ಹೊಣೆಯಾಗುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಉದಯನಿಧಿ ಸ್ಟಾಲಿನ ಇವರು ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಯ ಬಗ್ಗೆ ದಾಖಲಿಸಲಾಗಿರುವ ದೂರಿನ ವಿಚಾರಣೆ ಮಾಡುವಾಗ ಟಿಪ್ಪಣೆ ಮಾಡಿದೆ.

ನ್ಯಾಯಮೂರ್ತಿ ಅನಿತಾ ಸುಮಂತ ಮಾತನಾಡಿ,

1. ತಮಿಳುನಾಡಿನಲ್ಲಿ 370 ನೋಂದಾಯಿತ ಜಾತಿಗಳಿವೆ. ವಿವಿಧ ಜಾತಿಗಳ ನಡುವೆ ಅನೇಕ ಬಾರಿ ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾಗುತ್ತದೆ; ಆದರೆ ಇದಕ್ಕೆ ಕಾರಣ ಕೇವಲ ಜಾತಿಯಷ್ಟೇ ಅಲ್ಲ, ಬದಲಾಗಿ ಅವರಿಗೆ ಸಿಗುವ ಸೌಲಭ್ಯಗಳು ಆಗಿವೆ. ಇಂತಹ ಪರಿಸ್ಥಿತಿಯಿರುವಾಗ ಸಂಪೂರ್ಣ ದೋಷ ಕೇವಲ ಪ್ರಾಚೀನ ವರ್ಣ ವ್ಯವಸ್ಥೆಯ ಮೇಲೆ ಹೇಗೆ ಹೇಳಬಹುದು ? ಇದರ ಉತ್ತರ ಹುಡುಕಿದರೂ ಸಿಗುವುದಿಲ್ಲ.

2. ಜಾತಿಯ ಹೆಸರಿನಡಿಯಲ್ಲಿ ಜನರು ಒಬ್ಬರಿಗೊಬ್ಬರ ಮೇಲೆ ದಾಳಿಗಳನ್ನು ಮಾಡುತ್ತಿರುವುದು ಇತಿಹಾಸದಲ್ಲಿಯೂ ನಡೆಯುತ್ತಲೇ ಬಂದಿದೆ. ಹಳೆಯ ಕಾಲದ ಈ ಕೆಟ್ಟ ವಿಷಯಗಳನ್ನು ದೂರಗೊಳಿಸಲು ನಿರಂತರವಾಗಿ ಬದಲಾವಣೆ ಮಾಡುವುದು ಆವಶ್ಯಕವಿರುತ್ತದೆ. ಆತ್ಮನಿರೀಕ್ಷಣೆಯಾಗಬೇಕು ಮತ್ತು ತಾರತಮ್ಯವನ್ನು ಯಾವ ಮಾರ್ಗದಿಂದ ದೂರ ಮಾಡಲು ಸಾಧ್ಯವಾಗಬಹುದು ಎನ್ನುವ ಬಗ್ಗೆ ವಿಚಾರವನ್ನು ಮಾಡಬೇಕು.

3. ವರ್ಣ ವ್ಯವಸ್ಥೆಯು ಜನನದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಈ ಜನರ ಕೆಲಸದ ಮೇಲೆ ಅಥವಾ ಉದ್ಯೋಗದ ಆಧರಿಸಿದೆ. ಸಮಾಜದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುಬೇಕು ಎಂದು ಈ ವ್ಯವಸ್ಥೆಯನ್ನು ಮಾಡಲಾಯಿತು. ಇಲ್ಲಿ ಜನರ ಗುರುತು ಅವರ ಕೆಲಸದಿಂದ ಆಗುತ್ತದೆ. ಇಂದಿಗೂ ಕೇವಲ ಕೆಲಸದಿಂದಲೇ ಜನರನ್ನು ಗುರುತಿಸಲಾಗುತ್ತದೆ.