ಕಾಂಗ್ರೆಸ್ ಸಭೆಯಲ್ಲಿ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿರುವ ಬಗ್ಗೆ ಭಾಜಪದಿಂದ ಪೊಲೀಸರಲ್ಲಿ ದೂರು !

ಅಚಾತುರ್ಯದಿಂದ ತಪ್ಪಾಗಿದೆಯೆಂದು ಕಾಂಗ್ರೆಸ್ಸಿನ ಹೇಳಿಕೆ! 

ಕಾಂಗ್ರೆಸ್ಸಿನ ತಿರುವನಂತಪುರಂ ಜಿಲ್ಲಾಧ್ಯಕ್ಷ ಪಾಲೊದೆ ರವಿ

ತಿರುವನಂತಪುರಂ (ಕೇರಳ) – ಇಲ್ಲಿ ನಡೆದ ಕಾಂಗ್ರೆಸ್ ಸಭೆಯ ಸಮಾರೋಪದ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿರುವ ಬಗ್ಗೆ ಭಾಜಪ ಕಾಂಗ್ರೆಸ್ಸಿನ ತಿರುವನಂತಪುರಂ ಜಿಲ್ಲಾಧ್ಯಕ್ಷ ಪಾಲೊದೆ ರವಿ ಇವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದೆ.

ಈ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಟಿ.ಸಿದ್ದೀಕ ಅವರು ಒಂದು ವಿಡಿಯೋ ಮೂಲಕ ಅಚಾತುರ್ಯದಿಂದ ಈ ಘಟನೆ ನಡೆದಿದೆ. ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡಿರುವುದಿಲ್ಲ, ಕಾರಣ ಈ ವಿಷಯವನ್ನು ಸುಮ್ಮನೆ ಮುಂದುವರಿಸಬಾರದು. 2021 ರಲ್ಲಿ ಬಂಗಾಳದಲ್ಲಿ ಭಾಜಪದವರಿಂದಲೂ ಇಂತಹುದೇ ಘಟನೆ ನಡೆದಿತ್ತು ಎಂದು ಅವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಒಂದು ವೇಳೆ ಅಚಾತುರ್ಯದಿಂದ ಇದು ನಡೆದಿದ್ದರೆ, ಕಾಂಗ್ರೆಸ್ ದೇಶವಾಸಿಗಳ ಕ್ಷಮೆ ಏಕೆ ಕೇಳುವುದಿಲ್ಲ?