ನವ ದೆಹಲಿ – ದೆಹಲಿ ಅಭಿವೃದ್ಧಿ ಪ್ರಾಧಿಕರಣ (ಡಿ.ಡಿ.ಎ.) ರಾಜ್ಯದ ‘ಮಜನು ಕಾ ಟಿಲಾ’ ಪ್ರದೇಶದಲ್ಲಿರುವ ಹಿಂದೂಗಳ ನಿರಾಶ್ರಿತರ ವಸತಿಗಳನ್ನು ತೆಗೆದುಹಾಕಲು ನೋಟಿಸ್ ನೀಡಿದೆ. ಇದರಿಂದಾಗಿ ಪಾಕಿಸ್ತಾನದಿಂದ ಬಂದ 160 ಹಿಂದೂ ಕುಟುಂಬಗಳು ನಿರಾಶ್ರಿತರಾಗುವ ವಿಪತ್ತು ಎದುರಾಗಿದೆ. ಸಧ್ಯಕ್ಕೆ ಎಲ್ಲರಿಗೂ ರಾತ್ರಿ ಆಶ್ರಯ ಡೇರೆಗಳಲ್ಲಿ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ.
ನ್ಯಾಯಮಂಡಳಿಯ (ಎನ್‌ಜಿಟಿ) ಅಧಿಕಾರಿಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಆದೇಶದಂತೆ ಡಿ.ಡಿ.ಎ.ಗೆ ಭೂಮಿಯನ್ನು ತೆರವು ಮಾಡುವಂತೆ ತಿಳಿಸಲಾಗಿದೆ ಎಂದು ಹೇಳುತ್ತಾರೆ. ಪೊಲೀಸ ಬಂದೋಬಸ್ತ್ ಮಾಡಿದ ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ನಿರಾಶ್ರಿತರ ಮುಖ್ಯಸ್ಥ ದಯಾಳ ದಾಸ ಅವರು ಮಾತನಾಡಿ, ಈ ಪ್ರಕರಣದಲ್ಲಿ ಭಾಜಪ ಸಂಸದ ಮನೋಜ್ ತಿವಾರಿ ಅವರನ್ನು ಭೇಟಿ ಮಾಡಿದ್ದರು. ಅವರು ‘ನಿರಾಶ್ರಿತ ಹಿಂದೂಗಳನ್ನು ಇಲ್ಲಿಂದ ಕದಲಿಸುವುದಿಲ್ಲ’ ಎಂದು ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನದಿಂದ ಬಂದಿರುವ 160 ಕ್ಕೂ ಹೆಚ್ಚು ಕುಟುಂಬಗಳ 750 ಕ್ಕೂ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ, ಇಲ್ಲಿ ನಮ್ಮ ಮಕ್ಕಳ ಶಾಲೆಗಳಿವೆ. ನಮ್ಮನ್ನು ಇಲ್ಲಿಂದ ಕದಲಿಸಿದರೆ, ಮಕ್ಕಳ ಅಭ್ಯಾಸ ಹೇಗೆ ಆಗುವುದು? ಎನ್ನುವ ಆತಂಕವಿದೆ.
ಸಂಪಾದಕೀಯ ನಿಲುವುವಸತಿ ಅಕ್ರಮವಾಗಿದ್ದರೆ ಸರಕಾರ ಈ ಹಿಂದೂಗಳಿಗೆ ಕಾನೂನಿನ ಮೂಲಕ ಇದುವರೆಗೂ ಮನೆಗಳನ್ನು ಏಕೆ ನಿರ್ಮಿಸಿ ಕೊಟ್ಟಿಲ್ಲ ? ಪಾಕಿಸ್ತಾನದಲ್ಲಿ ಹಿಂದೂಗಳು ಏನು ಅನುಭವಿಸುತ್ತಿದೆಯೋ, ಅದೇ ಭಾರತದಲ್ಲಿಯೂ ಅನುಭವಿಸಬೇಕಾಗುತ್ತಿದ್ದರೆ, ಅದು ಭಾರತೀಯ ಹಿಂದೂಗಳಿಗೆ ನಾಚಿಕೆಗೇಡು ! |