ಸಾಂವಿಧಾನಿಕ ಸ್ಥಾನದಲ್ಲಿರುವ ವ್ಯಕ್ತಿ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಯನ್ನು ನೀಡಬಾರದು ! – ಮದ್ರಾಸ ಉಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದ ನಂತರ ಮದ್ರಾಸ ಉಚ್ಚ ನ್ಯಾಯಾಲಯದಿಂದಲೂ ಉದಯನಿಧಿ ಸ್ಟಾಲಿನ್ ಗೆ ಛೀಮಾರಿ!

ಚೆನ್ನೈ (ತಮಿಳುನಾಡು) – ಸಂವಿಧಾನದ ಹುದ್ದೆಯಲ್ಲಿರುವ ವ್ಯಕ್ತಿಯು ಸನಾತನ ಧರ್ಮವನ್ನು ಏಡ್ಸ ಮತ್ತು ಮಲೇರಿಯಾಗಳೊಂದಿಗೆ ತುಲನೆ ಮಾಡುವುದು ಯೋಗ್ಯವಾಗಿದೆಯೆಂದು ಹೇಳಲು ಸಾಧ್ಯವಿಲ್ಲ. ಅಲ್ಲದೇ ಇಂತಹ ಜನರು ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎನ್ನುವ ಶಬ್ದಗಳಲ್ಲಿ ಈಗ ಮದ್ರಾಸ ಉಚ್ಚ ನ್ಯಾಯಾಲಯವು ರಾಜ್ಯದ ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ ಇವರ ಪುತ್ರ ಮತ್ತು ಸಚಿವ ಉದಯನಿಧಿ ಸ್ಟಾಲಿನ ಇವರಿಗೆ ಛೀಮಾರಿ ಹಾಕಿದೆ. ಆದರೆ ಅದೇ ಸಮಯದಲ್ಲಿ ನ್ಯಾಯಾಲಯವು ಉದಯನಿಧಿಯವರನ್ನು ಅವರ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದೆ.

(ಸೌಜನ್ಯ –  India Today)

1. ತಮಿಳುನಾಡು ರಾಜ್ಯದ ಇತರ ಕೆಲವು ನಾಯಕರ ಹೇಳಿಕೆಗಳ ಬಗ್ಗೆ ಮತ್ತು ಸನಾತನ ಧರ್ಮವನ್ನು ನಷ್ಟಗೊಳಿಸಲು ಆಯೋಜಿಸಲಾಗಿದ್ದ ಪರಿಷತ್ತಿನಲ್ಲಿ ಅವರು ಭಾಗವಹಿಸಿರುವ ಬಗ್ಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಾಲಯವು ತನ್ನ ಹೇಳಿಕೆಯಲ್ಲಿ ರಾಜಕೀಯ ನಾಯಕರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ಸಾರ್ವಜನಿಕರನ್ನು ವಿಭಜಿಸುವ ಹೇಳಿಕೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೀಡಬಾರದು ಅಂಗೀಕರಿಸಬಾರದು ಎಂದು ಹೇಳಿದೆ.

2. ಇದಕ್ಕೂ ಮುನ್ನ ಮಾರ್ಚ್ 4 ರಂದು ಸರ್ವೋಚ್ಚ ನ್ಯಾಯಾಲಯವು ಉದಯನಿಧಿ ಸ್ಟಾಲಿನ ಅವರಿಗೆ ಸನಾತನ ಧರ್ಮದ ಮೇಲಿನ ಹೇಳಿಕೆಯ ಬಗ್ಗೆ ಛೀಮಾರಿ ಹಾಕಿತ್ತು. ‘ಕಲಂ19 ಅನ್ವಯ ಅಭಿವ್ಯಕ್ತಿ ಸ್ವಾತಂತ್ರ್ಯದ ಅಧಿಕಾರವನ್ನು ನೀವು ದುರುಪಯೋಗ ಪಡಿಸಿಕೊಂಡಿದ್ದೀರಿ. ಧಾರ್ಮಿಕ ಸ್ವಾತಂತ್ರ್ಯದ ಅಧಿಕಾರದ ಉಲ್ಲಂಘನೆಯಾಗಿದೆ ಮತ್ತು ಈಗ ನಿಮಗೆ ಕಲಂ 32 ರ ಅಡಿಯಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಬೇಕಾಗಿದೆ. ನೀವು ಸಾಮಾನ್ಯ ನಾಗರಿಕರಲ್ಲ. ನೀವು ಸಚಿವರಾಗಿದ್ದೀರಿ. ನಿಮ್ಮ ಇಂತಹ ಹೇಳಿಕೆಗಳಿಂದ ಏನು ಪರಿಣಾಮವಾಗಬಹುದು ಎನ್ನುವುದು ನಿಮಗೆ ತಿಳಿದಿರಬೇಕು’, ಎನ್ನುವ ಶಬ್ದಗಳಲ್ಲಿ ನ್ಯಾಯಾಲಯವು ಉದಯನಿಧಿಯವರ ಕಿವಿ ಹಿಂಡಿತು. ಹಾಗೆಯೇ ಈ ಸಂದರ್ಭದಲ್ಲಿ ಮದ್ರಾಸ ಉಚ್ಚ ನ್ಯಾಯಾಲಯಕ್ಕೆ ಹೋಗುವಂತೆ ಹೇಳಿತ್ತು.

ಸಂಪಾದಕೀಯ ನಿಲುವು

ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿರುವುದರೊಂದಿಗೆ ಕಠಿಣ ಶಿಕ್ಷೆಯನ್ನೂ ಅವರಿಗೆ ನೀಡಬೇಕು, ಇದರಿಂದ ಇತರರಿಗೆ ತಕ್ಕ ಪಾಠವಾಗುವುದು ಎಂದು ಹಿಂದೂಗಳಿಗೆ ಅನಿಸುತ್ತದೆ.