ಇಸ್ರೇಲ್ ಮೇಲೆ ಹಿಜ್ಬುಲ್ಲಾ ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯನ ಸಾವು, ೨ ಜನರಿಗೆ ಗಾಯ

ಗಾಲೀಲ (ಇಸ್ರೇಲ್) – ಲೆಬನಾನ್‌ನಲ್ಲಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ಇಸ್ರೇಲ್ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಯುವಕ ಪಟನಿಬಿನ್ ಮ್ಯಾಕ್ಸ್‌ವೆಲ್ ಸಾವನ್ನಪ್ಪಿದ್ದಾರೆ. ಹಾಗೂ ಇಬ್ಬರು ಭಾರತೀಯರಾದ ಬುಷ್ ಜೋಸೆಫ್ ಜಾರ್ಜ್ ಮತ್ತು ಫಾಲ್ ಮೆಲವಿನ್ ಗಾಯಗೊಂಡಿದ್ದಾರೆ. ಈ ಮೂವರೂ ಕೇರಳದವರಾಗಿದ್ದಾರೆ. ಇಸ್ರೇಲ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ಭಾರತವು ಸಾವಿರಾರು ನಾಗರಿಕರನ್ನು ತಾಯ್ನಾಡಿಗೆ ಕರೆಸಿತು; ಆದರೆ ಅಲ್ಲಿ ಇನ್ನೂ ೧೮ ಸಾವಿರ ಭಾರತೀಯರು ವಾಸಿಸುತ್ತಿದ್ದಾರೆ.