ಹಿಂದೂದ್ವೇಷಿ ದ್ರಮುಕ ಮುಖಂಡ ಎ. ರಾಜಾನ ವಿಚಿತ್ರ ಶೋಧ !
ಕೊಯಿಮತ್ತೂರು (ತಮಿಳುನಾಡು) – ಭಾರತ ಇದು ಒಂದು ಉಪಖಂಡವಾಗಿದೆ. ಇದರ ಕಾರಣವೇನು ? ತಮಿಳುನಾಡು ಇದು ದೇಶವಾಗಿದೆ. ಮಲಯಾಳಂ ಒಂದು ಭಾಷೆ ಇದೆ. ಒಂದು ರಾಷ್ಟ್ರ ಇದೆ ಮತ್ತು ಒಂದು ದೇಶ ಇದೆ. ಒಡಿಸ್ಸಾ ಒಂದು ದೇಶವಿದೆ, ಅಲ್ಲಿ ಒಂದು ಭಾಷೆ ಇದೆ. ಕೇರಳದಲ್ಲಿ ಬೇರೆ ಮತ್ತು ದೆಹಲಿಯಲ್ಲಿ ಬೇರೆ ಭಾಷೆ ಮತ್ತು ಸಂಸ್ಕೃತಿ ಇದೆ. ಎಲ್ಲಾ ದೇಶಗಳು ಸೇರಿ ಭಾರತ ಎನ್ನುತ್ತಾರೆ. ಆದ್ದರಿಂದ ಭಾರತ ಇದು ದೇಶವಾಗಿರದೆ ಒಂದು ಉಪಖಂಡವಾಗಿದೆ, ಎಂದು ತಮಿಳುನಾಡಿನ ದ್ರಮುಕದ ಸಂಸದ ರಾಜಾ ಇವರು ಹೇಳಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ ೩ ರಂದು ಆಯೋಜಿಸಿರುವ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಎ. ರಾಜಾ ಮಾತು ಮುಂದುವರೆಸಿ,
೧. ಮಣಿಪುರದಲ್ಲಿ ನಾಯಿಯ ಮಾಂಸ ತಿನ್ನುತ್ತಾರೆ. ಏಕೆ ? ಕಾರಣ ಅದು ಅಲ್ಲಿಯ ಸಂಸ್ಕೃತಿ ಆಗಿದೆ. ಅದರಲ್ಲಿ ತಪ್ಪೇನೂ ಇಲ್ಲ. ಇದು ಎಲ್ಲವೂ ನಮ್ಮ ಮನಸ್ಸಿನಲ್ಲಿ ಇದೆ. ಕಾಶ್ಮೀರದಲ್ಲಿ ಬೇರೆ ಸಂಸ್ಕೃತಿ ಇದೆ. ಅದನ್ನು ನೀವು ಸ್ವೀಕಾರ ಮಾಡಬೇಕಾಗುತ್ತದೆ. ಯಾವುದೋ ಜನಾಂಗ ಗೋ ಮಾಂಸ ತಿಂದರೆ, ನಿಮಗೆ ಸಮಸ್ಯೆ ಏನು ? ಅವರು ನಿಮಗೆ ತಿನ್ನಲು ಹೇಳಿದ್ದಾರೆಯೆ ? ವಿವಿಧತೆಯಲ್ಲಿ ಏಕತೆ ಇದೆ. ನಮ್ಮಲ್ಲಿ ಮತಬೇಧಗಳು ಇವೆ ಇದನ್ನು ಒಪ್ಪಿಕೊಳ್ಳಿ.
೨. ನೀರಿನ ಟ್ಯಾಂಕಿನಲ್ಲಿನ ನೀರು ಅಡುಗೆ ಮನೆಯಲ್ಲಿ ಹಾಗೂ ಶೌಚಾಲಯದಲ್ಲಿ ಬರುತ್ತದೆ. ಆ ನೀರು ನಾವು ಅಡುಗೆ ಮನೆಯಲ್ಲಿ ಬಳಸುತ್ತೇವೆ; ಆದರೆ ಶೌಚಾಲಯದಿಂದ ತಂದಿರುವ ನೀರು ಅಡುಗೆ ಮನೆಯಲ್ಲಿ ಬಳಸುವುದಿಲ್ಲ. ಇದಕ್ಕೆ ಕಾರಣ ಏನು? ಇದು ಒಂದು ಮಾನಸಿಕ ಸಮಸ್ಯೆ ಆಗಿದೆ. ನೀರು ಅದೇ; ಆದರೆ ಅದು ಎಲ್ಲಿಂದ ಬರುತ್ತದೆ, ಇದರಿಂದ ಏನು ವ್ಯತ್ಯಾಸವಾಗುತ್ತದೆ? ನಮಗೆ, ಇದು ಅಡುಗೆ ಮನೆ ಮತ್ತು ಇದು ಶೌಚಾಲಯ ಎಂಬುದು ತಿಳಿದಿದೆ.
ಎ. ರಾಜಾ ಇವರು ಈ ಹಿಂದೆ ಕೂಡ ಸನಾತನ ಧರ್ಮವನ್ನು ಏಡ್ಸ್ ಮತ್ತು ಕುಷ್ಟರೋಗ ಎಂದು ಹೇಳಿದ್ದರು !
ಎ. ರಾಜಾ ಇವರು ಕಳೆದ ವರ್ಷ ಸಪ್ಟೆಂಬರ್ ೬ ರಂದು ಚೆನ್ನೈಯಲ್ಲಿ, ಕುಷ್ಟರೋಗ ಮತ್ತು ಏಡ್ಸ್ ಅನ್ನು ನಾವು ದ್ವೇಷಿಸುತ್ತೇವೆ. ಇದನ್ನು (ಸನಾತನ ಧರ್ಮವನ್ನು) ಒಂದು ರೋಗ ಎಂದು ನೋಡಬೇಕು. ಏಡ್ಸ್ ಮತ್ತು ಕುಷ್ಠ ರೋಗದ ರೀತಿಯಲ್ಲಿ ನಾವು ಸನಾತನ ಧರ್ಮವನ್ನು ನಾಶಪಡಿಸಬೇಕು ಎಂದು ಹೇಳಿದ್ದರು.
ಸಂಪಾದಕೀಯ ನಿಲುವುಭಾರತ ಉಪಖಂಡವೇ ಇದೆ; ಆದರೆ ಅದರಲ್ಲಿ ‘ಭಾರತ’ವೆಂಬ ಬೇರೆ ದೇಶ ಅಸ್ತಿತ್ವದಲ್ಲಿದೆ. ಇದು ಎ. ರಾಜಾ ಇವರು ಉದ್ದೇಶಪೂರ್ವಕವಾಗಿ ನಿರಾಕರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಭಾರತ ಇದು ಉಪಖಂಡ ಎಂದು ಹೇಳುವುದಿದ್ದರೆ, ಅವರು ಅಖಂಡ ಭಾರತ ನಿರ್ಮಾಣಕ್ಕಾಗಿ ಮಾತನಾಡಬೇಕು ಮತ್ತು ಪ್ರಯತ್ನ ಮಾಡಬೇಕು ! |