|
ಮುಂಬಯಿ – ಭಾರತದ ಸ್ವಾತಂತ್ರ್ಯ ಹೋರಾಟಟದ ವೀರ ವಿನಾಯಕ ದಾಮೋದರ ಸಾವರಕರ ಅವರ ಕುರಿತಾದ `ಸ್ವಾತಂತ್ರ್ಯವೀರ ಸಾವರಕರ’ ಈ ಚಲನಚಿತ್ರ ಹಿಂದಿ ಮತ್ತು ಮರಾಠಿಯಲ್ಲಿ ಪ್ರದರ್ಶನಗೊಳ್ಳಲಿದೆ. ಇದರಲ್ಲಿ ಹಿಂದಿ ಭಾಷೆಯ ಚಲನಚಿತ್ರದ ಟ್ರೇಲರ್ (ಜಾಹೀರಾತು) ಬಿಡುಗಡೆಯಾಗಿದೆ. ಈ ಜಾಹೀರಾತಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಕಂಡು ಬರುತ್ತಿದೆ. ಚಲನಚಿತ್ರದ ಸಂಭಾಷಣೆಗಳು ಮತ್ತು ಸ್ವಾತಂತ್ರ್ಯವೀರ ಸಾವರಕರ ಇವರು ಜೈಲಿನಲ್ಲಿ ಅನುಭವಿಸಿದ ಚಿತ್ರಹಿಂಸೆಯ ಚಿತ್ರಣವನ್ನು ತೋರಿಸಲಾಗಿದೆ. ಸ್ವಾತಂತ್ರ್ಯವೀರ ಸಾವರಕರ ಇವರ ಪಾತ್ರವನ್ನು ರಣದೀಪ ಹುಡಾ ಈ ನಟ ನಿರ್ವಹಿಸಿದ್ದು, ಅವರೇ ಈ ಚಿತ್ರವನ್ನು ನಿರ್ದಶಕರಾಗಿದ್ದಾರೆ. ಚಲನಚಿತ್ರದಲ್ಲಿ ಅವರ ಸಾವರಕರರ ಪಾತ್ರವನ್ನು ಎಲ್ಲರೂ ಸ್ವಾಗತಿಸಿದ್ದು, ಅವರ ನಟನೆಯನ್ನು ಶ್ಲಾಘಿಸುತ್ತಿದ್ದಾರೆ. ಈ ಚಲನಚಿತ್ರ ಮಾರ್ಚ್ 22 ರಂದು ‘ಶಹೀದ್ ದಿವಸ್’ ಮುನ್ನಾದಿನದಂದು ಪ್ರದರ್ಶಿತಗೊಳ್ಳಲಿದೆ. ಮಾರ್ಚ್ 23 ರಂದು ಭಗತ ಸಿಂಹ, ಸುಖದೇವ ಮತ್ತು ರಾಜಗುರು ಅವರನ್ನು ಗಲ್ಲಿಗೇರಿಸಲಾಗಿತ್ತು. ಒಟ್ಟು 3 ನಿಮಿಷ 21 ಸೆಕೆಂಡ್ ಗಳ ಜಾಹೀರಾತಿನಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವ ಈ ಕಥೆಯ ಕ್ಷಣಚಿತ್ರವನ್ನು ನೋಡಿ ಜನರಲ್ಲಿ ಚಲನಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ.
(ಸೌಜನ್ಯ – Zee Studio)
ಚಲನ ಚಿತ್ರದಲ್ಲಿ ಸ್ವಾತಂತ್ರ್ಯವೀರ ಸಾವರಕರರ ಕೆಲವು ಸಂಭಾಷಣೆಗಳು
1. 1857 ರ ಯುದ್ಧದಲ್ಲಿ, ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಹೋರಾಡಿದರು; ಏಕೆಂದರೆ ದೇಶವು ಧರ್ಮಕ್ಕಿಂತ ಮುಖ್ಯವಾಗಿತ್ತು
2. ಮಝನಿ ಅಖಂಡ ಇಟಲಿಯನ್ನು ನಿರ್ಮಿಸಿದ್ದನು. ನಾವು ಅಖಂಡ ಭಾರತವನ್ನು ನಿರ್ಮಾಣ ಮಾಡೋಣ.
3. ಒಂದು ಘಟನೆಯಲ್ಲಿ ಸ್ವಾತಂತ್ರ್ಯವೀರ ಸಾವರಕರ ಅವರ ಪತ್ನಿ ಅವರಿಗೆ, ‘ಸಮುದ್ರದಾಚೆಗೆ ಹೋಗುವುದು ಅಶುಭವಾಗಬಹುದು’ ಎಂದು ಹೇಳುತ್ತಾರೆ. ಅದಕ್ಕೆ ಸಾವರಕರರು `ಈ ಮಹಾಸಾಗರವೇ ಭಾರತಮಾತೆಯ ಕಾಲನ್ನು ತೊಳೆಯುತ್ತದೆ, ಸಂಪೂರ್ಣ ಜಗತ್ತಿನಲ್ಲಿ ಸುತ್ತಾಡಿಸಿ ನನ್ನನ್ನು ನಿಮ್ಮ ಕಡೆಗೆ ಮರಳಿ ಕರೆತರುತ್ತದೆ’ ಎಂದು ಹೇಳುತ್ತಾರೆ.
4. ಮೋಹನದಾಸ ಗಾಂಧಿಯವರು ಸಾವರಕರರಿಗೆ, ‘ಹಿಂಸೆಯು ಸಂಘರ್ಷಕ್ಕೆ ಕಾರಣವಾಗಬಹುದು; ಆದರೆ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ಹೇಳುತ್ತಾರೆ, ಇದಕ್ಕೆ ಸಾವರಕರ `ನಾನು ‘ಜೀವಂತ ಬ್ರಿಟಿಷರ ಹೃದಯವನ್ನು ಹರಿದು ತಿನ್ನುವ ಜನರನ್ನು ಹುಡುಕುತ್ತಿದ್ದೇನೆ’ ಎಂದು ಹೇಳುತ್ತಾರೆ.
5. ಈಗ ಚರ್ಚೆ ಮತ್ತು ಸಭೆಗಳ ಸಮಯ ಮುಗಿದಿದೆ, ನಮಗೆ ಇಲ್ಲಿಂದ (ಬ್ರಿಟನ್‌ನಿಂದ) ಬಂದೂಕುಗಳನ್ನು ಭಾರತಕ್ಕೆ ಕಳುಹಿಸಬೇಕಾಗಬಹುದು ಮತ್ತು ಬ್ರಿಟಿಷ್ ಸೈನ್ಯದಲ್ಲಿರುವ ನಮ್ಮ ಸಿಖ್ ಸಹೋದರರಿಗೆ ಹೋರಾಡಲು ಸಿದ್ಧಗೊಳಿಸಲು ಪತ್ರವನ್ನು ಬರೆಯಬೇಕಾಗಬಹುದು.
6. 1912 ರ ವರೆಗೆ ಆಂಗ್ಲರನ್ನು ಹೊಡೆದು ಹೊಡೆದು ಭಾರತದಿಂದ ಹೊರಗೆ ಅಟ್ಟೋಣ ಅಥವಾ ಅವರನ್ನು ಕೊಲ್ಲುತ್ತ ಕೊಲ್ಲುತ್ತ ಹುತಾತ್ಮರಾಗೋಣ.
7. ಸುಭಾಷ ಚಂದ್ರ ಬೋಸ ಅವರಿಗೆ ಸಾವರಕರರು ಇವರು, ‘ಜರ್ಮನಿ ಮತ್ತು ಜಪಾನ್‌ನ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಬ್ರಿಟಿಷರ ಮೇಲೆ ದಾಳಿ ಮಾಡಿ’ ಎಂದು ಹೇಳಿದರು.
8. ಆಂಗ್ಲರು ಭಾರತವನ್ನು ತೊರೆದ ನಂತರ, ಪುನಃ ಇಲ್ಲಿ ಇಸ್ಲಾಮಿಕ ಆಡಳಿತವನ್ನು ತರಲು ಪ್ರಯತ್ನಿಸಿದರೆ, ನಾವು ಮೊಗಲರ ಆಡಳಿತ ಬರಲು ಬಿಡುವುದಿಲ್ಲ.
9. ಸೈನ್ಯಕ್ಕೆ ಸೇರಿ, ಬಂದೂಕು ನಡೆಸುವ ತರಬೇತಿ ಪಡೆಯಿರಿ. ಸೂಕ್ತ ಸಮಯದಲ್ಲಿ `ಆ ಬಂದೂಕಿನ ತುದಿಯನ್ನು ಯಾರ ಮೇಲೆ ಇಡಬೇಕು ?’ ಎನ್ನುವುದನ್ನು ಹೇಳುತ್ತೇನೆ.
10. ‘ಹಿಂದ್’ ಅನ್ನು ಪ್ರೀತಿಸುವ ನಾವೆಲ್ಲರೂ ಹಿಂದೂಗಳಾಗಿದ್ದೇವೆ. ಅಖಂಡ ಭಾರತದ ವಿಜಯವಾಗಲಿ.
11. ಕಾಂಗ್ರೆಸ್ಸಿನ ಒಬ್ಬನೇ ಒಬ್ಬ ಸದಸ್ಯನಿಗೂ ಕರಿ ನೀರಿನ ಶಿಕ್ಷೆ ಏಕೆ ಆಗಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ ?
ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿದ ಕೆಲವು ಪ್ರತಿಕ್ರಿಯೆಗಳು
1. ಸ್ವಾತಂತ್ರ್ಯವೀರ ಸಾವರಕರ ಎಂದರೆ ಹುಲಿ ಇದ್ದಂತೆ.
2. ಕೊನೆಯ ಸಂಭಾಷಣೆ ಅತ್ಯದ್ಭುತವಾಗಿದೆ. 2 ನಿಮಿಷ 17 ಸೆಕೆಂಡುಗಳ ಟ್ರೆಲರ್ ವೀಕ್ಷಿಸಿ ಮೈ ಝಲ್ ಎನ್ನುತ್ತದೆ.
Some dialogues of #SwantatryaVeerSavarkar in the film:
🔸In the battle of 1857, Hindus and Mu$l!ms fought together because the nation is above religion.
🔸Mazzini created a unified Italy; we will create a united India.
🔸In one scene, Veer Savarkar’s wife says to him,… pic.twitter.com/0aUC3iovLB
— Sanatan Prabhat (@SanatanPrabhat) March 5, 2024
ಸಂಪಾದಕೀಯ ನಿಲುವುಕಾಂಗ್ರೆಸ್ಸಿನ ಒಬ್ಬನೇ ಒಬ್ಬ ಸದಸ್ಯನಿಗೂ ಕರಿನೀರಿನ ಶಿಕ್ಷೆ ಏಕೆ ಆಗಿಲ್ಲ ? |