ಸದನದಲ್ಲಿ ಮತಕ್ಕಾಗಿ (ಓಟಿಗಾಗಿ) ಲಂಚ ಕೊಡುವ ಸಂಸದರು ಮತ್ತು ಶಾಸಕರ ವಿರುದ್ಧ ಈಗ ಕ್ರಮ ಕೈಗೊಳ್ಳಲಾಗುವುದು !

ಸರ್ವೋಚ್ಛ ನ್ಯಾಯಾಲಯವು ೨೬ ವರ್ಷಗಳ ಹಿಂದಿನ ತನ್ನದೇ ನಿರ್ಣಯ ಬದಲಾಯಿದೆ !

ನವ ದೆಹಲಿ – ಸರ್ವೋಚ್ಛ ನ್ಯಾಯಾಲಯದ ೭ ನ್ಯಾಯಾಧೀಶರ ಸಂವಿಧಾನ ಪೀಠವು ಮಹತ್ವದ ತೀರ್ಪು ನೀಡಿದೆ. ೧೯೯೮ ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ ಅವರ ಸರಕಾರದಿಂದ ಸಂಸದರು ಮತ್ತು ಶಾಸಕರನ್ನು ಸದನದಲ್ಲಿ ಭಾಷಣ ಕೊಡುವುದಕ್ಕಾಗಿ ಅಥವಾ ಮತಕ್ಕಾಗಿ ಲಂಚ ತೆಗೆದುಕೊಂಡಿದ್ದಕ್ಕಾಗಿ ಕಾನೂನು ಕ್ರಮದಿಂದ ವಿನಾಯಿತಿ ನೀಡಿತ್ತು. ಆ ಸಮಯದಲ್ಲಿ ಸರ್ವೋಚ್ಛನ್ಯಾಯಾಲಯದಲ್ಲಿ ಇದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ಮೇರೆಗೆ ೫ ನ್ಯಾಯಾಧೀಶರ ಸಂವಿಧಾನ ಪೀಠ ‘ಇಂತಹ ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತಿಲ್ಲ‘ ಎಂದು ತೀರ್ಪು ನೀಡಿತ್ತು. ಈಗ ಸರ್ವೋಚ್ಛ ನ್ಯಾಯಾಲಯವು ತನ್ನ ನಿರ್ಣಯವನ್ನು ರದ್ದು ಮಾಡಿದೆ. ನ್ಯಾಯಾಲಯವು, ವಿಶೇಷ ಅಧಿಕಾರದ ಅಡಿಯಲ್ಲಿ ಮೊಕದ್ದಮೆಗೆ ವಿನಾಯಿತಿ ನೀಡಲಾಗುವುದಿಲ್ಲ, ಎಂದು ಹೇಳಿದೆ.

೧. ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಿದ್ದ ಅರ್ಜಿಯಲ್ಲಿ, ಸಂಸತ್ತು ಮತ್ತು ವಿಧಾನ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಒಳಗೊಂಡಂತೆ ಪ್ರತಿಯೊಂದು ರೀತಿಯ ಕಾಯ್ದೆಯನ್ನು ಕಾನೂನಿನಿಂದ ವಿನಾಯಿತಿ ನೀಡಬಾರದು. ಇದರಿಂದ ಕ್ರಿಮಿನಲ್ ಪಿತೂರಿಯಡಿ ವಿಚಾರಣೆಗೆ ಒಳಪಡಿಸಬಹುದು ಎಂದು ತಿಳಿಸಲಾಗಿದೆ.

೨. ಈ ಅರ್ಜಿಯ ವಿಷಯದ ಬಗ್ಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಲಂಚವು ಪ್ರಾಸಿಕ್ಯೂಷನ್‌ನಿಂದ ವಿನಾಯಿತಿಗೆ ಒಳಪಡುವುದಿಲ್ಲ ಎಂದು ಕೇಂದ್ರ ಸರಕಾರವು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿತ್ತು. ಸಂಸತ್ತಿನ ವಿಶೇಷ ಅಧಿಕಾರ ಎಂದರೆ ಯಾವುದೇ ಸಂಸದ ಅಥವಾ ಶಾಸಕರನ್ನು ಕಾನೂನಿನಿಗಿಂತ ಮಿಗಿಲಾಗಿ ಇಡುವುದು ಎಂದಲ್ಲ ಎಂದಿದೆ.