ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಪಡೆಸಿಕೊಂಡು ಅಧಿಕಾರದ ದಾವೆ ಹೇಗೆ ಮಾಡುತ್ತೀರಾ ? – ಸರ್ವೋಚ್ಚ ನ್ಯಾಯಾಲಯ

ಸನಾತನ ಧರ್ಮವನ್ನು ಮುಗಿಸುವ ಹೇಳಿಕೆ ನೀಡಿರುವ ಉದಯ ನಿಧಿ ಸ್ಟಾಲಿನ್ ಗೆ ಸರ್ವೋಚ್ಚ ನ್ಯಾಯಾಲಯದಿಂದ ತಪರಾಕಿ !

ನವ ದೆಹಲಿ – ‘ನೀವು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಅಧಿಕಾರದ ದುರುಪಯೋಗ ಮಾಡಿಕೊಂಡ ನಂತರ ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರದ ದಾವೆ ಹೇಗೆ ಮಾಡುತ್ತೀರಾ ? ಎಂದು ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಇವರ ಪುತ್ರ ಉದಯನಿಧಿ ಸ್ಟಾಲಿನ್ ಇವರಿಗೆ ಪ್ರಶ್ನೆ ಕೇಳುತ್ತಾ ತಪರಾಕಿ ನೀಡಿತು. ಉದಯನಿಧಿ ಇವರು ಕೆಲವು ತಿಂಗಳ ಹಿಂದೆ ಸನಾತನ ಧರ್ಮವನ್ನು ಡೆಂಗ್ಯು-ಮಲೇರಿಯಾಗೆ ಹೋಲಿಸಿ ಅದನ್ನು ಮುಗಿಸುವ ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಉದಯನಿಧಿ ಇವರು ಅವರ ಮೇಲಿನ ಆರೋಪವನ್ನು ವಿರೋಧಿಸುವ ಮತ್ತು ಕಾರ್ಯಾಚರಣೆಯಿಂದ ರಕ್ಷಣೆ ಕೋರಿ ನ್ಯಾಯ ಕೇಳುವ ಅರ್ಜಿ ದಾಖಲಿಸಿದ್ದರು. ಅದರ ಕುರಿತಾದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಅವರಿಗೆ ತಪರಾಕಿ ನೀಡಿದ್ದು. ಈ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ ೧೫ ರಂದು ನಡೆಯುವುದು.

(ಸೌಜನ್ಯ – India Today)

ನೀವು ಸಚಿವರಾಗಿದ್ದರಿಂದ ಇಂತಹ ವಿಷಯಗಳ ಪರಿಣಾಮದ ಕಲ್ಪನೆ ಇರಬೇಕು !

ನೀವು ಸಂವಿಧಾನದ ಕಲಂ ೧೯(೧)(ಅ) ಅಂತರ್ಗತ ದೊರೆತಿರುವ ಅಧಿಕಾರದ ದುರುಪಯೋಗ ಮಾಡಿದ್ದೀರಿ. ಅದರ ಅವಮಾನ ಮಾಡಿದ್ದೀರಿ. ಈಗ ನೀವು ಕಲಂ ೩೨ ದ ಪ್ರಕಾರ ಅಧಿಕಾರದ ಉಪಯೋಗವನ್ನು ನ್ಯಾಯ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಹೇಗೆ ಸಲ್ಲಿಸಿದ್ದೀರಿ ? ನೀವು ಏನು ಹೇಳುತ್ತಿದ್ದೀರಿ, ಅದರ ಪರಿಣಾಮ ಏನು ಆಗಬಹುದು ಇದು ನಿಮಗೆ ತಿಳಿದಿರಲಿಲ್ಲವೇ ? ನೀವೇನು ಸಾಮಾನ್ಯ ವ್ಯಕ್ತಿಯಲ್ಲ, ಒಬ್ಬ ಸಚಿವರಾಗಿದ್ದೀರಿ. ನಿಮಗೆ ಇಂತಹ ವಿಷಯದ ಪರಿಣಾಮದ ಕಲ್ಪನೆ ಇರಬೇಕು ಎಂದು ನ್ಯಾಯಾಲಯವು ಸ್ಟಾಲಿನ್ ಇವರಿಗೆ ತಪರಾಕಿ ನೀಡಿದೆ.

ಉದಯನಿಧಿ ಏನು ಹೇಳಿದ್ದರು ?

‘ಸನಾತನ ಧರ್ಮ ಇದು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ವಿರೋಧಿ ಆಗಿದೆ. ಆದ್ದರಿಂದ ಇಂತಹ ವಿಷಯದ ವಿರೋಧ ಮಾಡುವ ಬದಲು ಅದನ್ನು ಬೇರು ಸಹಿತ ನಾಶ ಮಾಡಬೇಕು. ಸೊಳ್ಳೆ, ಡೆಂಗ್ಯು ಮಲೇರಿಯಾ ಮತ್ತು ಕೋರೋನಾ ಇವುಗಳಂತಹ ರೋಗವನ್ನು ವಿರೋಧಿಸಲು ಸಾಧ್ಯವಿಲ್ಲ. ಅವುಗಳ ಮೂಲ ನಾಶ ಮಾಡಬೇಕು. ಅದರಂತೆಯೇ ಸನಾತನ ಧರ್ಮ ಕೂಡ ನಾಶವಾಗಬೇಕು’, ಎಂದು ಉದಯ ನಿಧಿ ಸ್ಟಾಲಿನ್ ಇವರು ಹೇಳಿದ್ದರು.

ಸಂಪಾದಕೀಯ ನಿಲುವು

ಸರ್ವೋಚ್ಚ ನ್ಯಾಯಾಲಯವು ಉದಯನಿಧಿ ಇವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸನಾತನ ಧರ್ಮೀಯರ ಬೇಡಿಕೆ ಆಗಿದೆ !