|
ನವದೆಹಲಿ – ಆಂಧ್ರಪ್ರದೇಶದಲ್ಲಿ ಅಕ್ಟೋಬರ್ 29, 2023 ರಂದು ಎರಡು ರೈಲ್ವೇ ರೈಲುಗಳು ಡಿಕ್ಕಿ ಹೊಡೆದು 14 ಪ್ರಯಾಣಿಕರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಅಪಘಾತದ ಬಗ್ಗೆ ಶ್ರೀ. ಅಶ್ವಿನಿ ವೈಷ್ಣವ ಮಾತನಾಡುತ್ತಾ, ಅಪಘಾತಕ್ಕೂ ಮುನ್ನ ರೈಲ್ವೇ ಚಾಲಕ ಮತ್ತು ಸಹ ಚಾಲಕ ಮೊಬೈಲ್ ಮೇಲೆ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದ ಕಾರಣ ಅವರ ಗಮನ ವಿಚಲಿತವಾಯಿತು ಮತ್ತು ಅಪಘಾತ ಸಂಭವಿಸಿತು ಎಂದು ಹೇಳಿದ್ದಾರೆ. ಭಾರತೀಯ ರೈಲ್ವೇಯು ಈಗ ಹೊಸ ಸುರಕ್ಷತಾ ಕ್ರಮಗಳ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಆ ವಿಷಯಗಳ ಮಾಹಿತಿಯನ್ನು ನೀಡುವಾಗ ವೈಷ್ಣವ ಅವರು 4 ತಿಂಗಳ ಹಿಂದೆ ಸಂಭವಿಸಿದ ಈ ಅಪಘಾತದ ಹಿಂದಿನ ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ.
(ಸೌಜನ್ಯ – News 24 Digital)
1. ಆಂಧ್ರಪ್ರದೇಶದಲ್ಲಿ ಸಂಭವಿಸಿದ ಅಪಘಾತದ ನಂತರ ರೈಲ್ವೆ ಸುರಕ್ಷತಾ ಆಯುಕ್ತರ ತನಿಖೆಯ ವರದಿ ಇನ್ನೂ ಬಹಿರಂಗವಾಗಿಲ್ಲ. ಅಪಘಾತದ ಮರುದಿನದ ಪ್ರಾಥಮಿಕ ತನಿಖೆಯಲ್ಲಿ ‘ರಾಯಗಡ ಪ್ಯಾಸೆಂಜರ್ ರೈಲಿನ’ ಚಾಲಕ ಮತ್ತು ಸಹ-ಚಾಲಕನನ್ನು ಅಪಘಾತಕ್ಕೆ ಹೊಣೆಗಾರರನ್ನಾಗಿ ಮಾಡಿತು. ಅವರು ಎರಡೂ ಸಿಗ್ನಲ್‌ಗಳನ್ನು ದಾಟಿರುವುದಾಗಿ ಅವರ ಮೇಲೆ ಆರೋಪ ಹೊರಸಲಾಗಿತ್ತು. ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದ್ದರು.
2. ರೈಲ್ವೆ ಸಚಿವರು ಮಾತನಾಡಿ, ಈಗ ರೈಲಿನಲ್ಲಿ ನಾವು ಇಂತಹ ತಪ್ಪುಗಳನ್ನು ಕಂಡು ಹಿಡಿಯಲು ಸಾಧ್ಯವಾಗುವಂತಹ ವ್ಯವಸ್ಥೆಯನ್ನು ಜೋಡಿಸುವವರಿದ್ದೇವೆ, ಇದರಿಂದ, ಚಾಲಕ ಮತ್ತು ಸಹ-ಚಾಲಕರು ಕೇವಲ ರೈಲ್ವೆ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುವ ಬಗ್ಗೆ ಭವಿಷ್ಯದಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು. ಪ್ರತಿಯೊಂದು ಅಪಘಾತದ ನಂತರ ನಾವು ಮೂಲದ ವರೆಗೆ ಹೋಗಿ ತನಿಖೆ ಮಾಡುತ್ತೇವೆ. ಅಪಘಾತಗಳ ಕಾರಣಗಳನ್ನು ಕಂಡುಹಿಡಿದ ಬಳಿಕ, ಮುಂದಿನ ಸಮಯದಲ್ಲಿ ಆ ಕಾರಣಗಳಿಂದ ಪುನಃ ಅಪಘಾತವಾಗಬಾರದು ಎಂದು ಅದರ ಮೇಲೆ ಉಪಾಯವನ್ನು ಕಂಡು ಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ.
ಸಂಪಾದಕೀಯ ನಿಲುವುಇದು ಪ್ರಯಾಣಿಕರ ಜೀವಕ್ಕೆ ಬೆಲೆ ಇಲ್ಲದಿರುವುದರ ದ್ಯೋತಕವಾಗಿದೆ. ಇಂತಹ ಘಟನೆಗಳು ಇತರ ಚಾಲಕರಿಂದಲೂ ಆಗುವುದಿಲ್ಲವೆಂದು ಹೇಗೆ ತಿಳಿಯುವುದು? ಕೇವಲ ಅಪಘಾತಗಳು ಸಂಭವಿಸದೇ ಇರುವುದರಿಂದ ಅವರ ಇಂತಹ ಕೃತ್ಯಗಳು ಬೆಳಕಿಗೆ ಬರುವುದಿಲ್ಲ ಎಂದು ಈಗ ಹೇಳಬೇಕಾಗುತ್ತದೆ |