ನಲ್ಗೊಂಡ (ತೆಲಂಗಾಣ) – ತೆಲಂಗಾಣದ ಕೃಷ್ಣಾ ನದಿಯ ದಡದಲ್ಲಿರುವ ಮುದಿಮಾಣಿಕ್ಯಂ ಗ್ರಾಮದಲ್ಲಿ ಪುರಾತತ್ವ ಇಲಾಖೆಯ ವಿಜ್ಞಾನಿಗಳು ಮಣ್ಣನ್ನು ಅಗೆಯುತ್ತಿದ್ದಾಗ ಕಲ್ಲು ಒಡೆಯುವ ಸದ್ದು ಕೇಳಿಸಿತು. ಅವರು ಮಣ್ಣನ್ನು ತೆಗೆದಾಗ ಅಪರೂಪದ ಶಾಸನಗಳಿರುವ ೨ ಬಾದಾಮಿ ಚಾಲುಕ್ಯ ದೇವಾಲಯಗಳು ಕಂಡುಬಂದಿವೆ. ಈ ದೇವಾಲಯಗಳು ೧ ಸಾವಿರದ ೩೦೦ ವರ್ಷಗಳಿಗಿಂತಲೂ ಹಳೆಯವು ಎಂದು ಅಂದಾಜಿಸಲಾಗಿದೆ. ಇಲ್ಲಿ ದೊರೆತಿರುವ ಶಾಸನವು ೧ ಸಾವಿದರ ೨೦೦ ವರ್ಷಗಳಷ್ಟು ಹಳೆಯದ್ದಾಗಿದೆ. ಒಂದು ದೇವಸ್ಥಾನದಲ್ಲಿ ಶಿವಲಿಂಗದ ಒಂದು ಭಾಗ ಉಳಿದಿದ್ದರೆ, ಇನ್ನೊಂದು ದೇವಸ್ಥಾನದಲ್ಲಿ ವಿಷ್ಣುವಿನ ವಿಗ್ರಹವಿದ್ದು, ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ದೇವಾಲಯಗಳ ವಿಶಿಷ್ಟ ವಾಸ್ತುಶಿಲ್ಪ ಶೈಲಿಯು ಅವುಗಳ ವಿಶಿಷ್ಟತೆಯನ್ನು ತೋರಿಸುತ್ತದೆ.
೧. “ಪಬ್ಲಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಹಿಸ್ಟರಿ”ನ ಡಾ. ಒಂ.ಎ. ಶ್ರೀನಿವಾಸ್ ಮತ್ತು ಎಸ್. ಅಶೋಕ್ ಕುಮಾರ್ ಅವರ ತಂಡ ಇಲ್ಲಿ ಅಗೆಯುತ್ತಿತ್ತು. ವಿಜ್ಞಾನಿಗಳ ಪ್ರಕಾರ, ಈ ಶಾಸನವು ಕ್ರಿ.ಶ. ೮ ಅಥವಾ ೯ ನೇ ಶತಮಾನದಷ್ಟು ಹಿಂದಿನದು ಎಂದು ಅಂದಾಜಿಸಲಾಗಿದೆ. ಚಾಲುಕ್ಯ ರಾಜವಂಶವು ಆಗ ಬಾದಾಮಿ ಪ್ರದೇಶವನ್ನು ಆಳಿತ್ತು.
೨. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಡಾ. ಮುನಿರತ್ನಂ ರೆಡ್ಡಿ ಇವರು, ಸಿಕ್ಕ ಶಾಸನದ ಮೇಲೆ ‘ಗಂಡಲೋರುರ್ರು’ ಎಂದು ಬರೆಯಲಾಗಿದೆ. ಇದು ಕಾಲದ ಪದವಾಗಿತ್ತು. ಕನ್ನಡದಲ್ಲಿ ’ಗಂಡ’ ಎಂದರೆ ’ನಾಯಕ’ ಅಥವಾ ವೀರ ಎಂದಾಗಿತ್ತು. ಬಾದಾಮಿ ಚಾಲುಕ್ಯರ ದೇವಾಲಯಗಳಲ್ಲಿ ಕದಂಬ ನಾಗರ ಶೈಲಿಯನ್ನು ಪ್ರಯೋಗಿಸಲಾಗಿದೆ. ಇದು ತೆಲಂಗಾಣದಲ್ಲಿ ಅಪರೂಪದ ವಾಸ್ತುಶಿಲ್ಪವಾಗಿದೆ. ಪಂಚಕೂಟ ಎಂಬ ಹೆಸರಿನ ೫ ದೇವಾಲಯಗಳ ಸಮೂಹವಿದೆ. ಈ ದೇವಾಲಯಗಳ ಶಾಸನಗಳ ಮೇಲೆ ’ಗಂಡಲೋರುಂರು’ ಎಂಬ ಪದವನ್ನು ಬರೆಯಲಾಗಿದೆ.