ಅಲ್ವರ್ (ರಾಜಸ್ಥಾನ) – ‘ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್’ ಈ ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿದ ‘ಸ್ಟೇಟ್ ಆಫ್ ಇಂಡಿಯಾಸ್ ಎನ್ವಿರಾನ್‌ಮೆಂಟ್’ ವರದಿಯ ಪ್ರಕಾರ, ದೇಶದಲ್ಲಿ 1 ಲಕ್ಷ 25 ಸಾವಿರಕ್ಕೂ ಹೆಚ್ಚು ಪರಿಸರಕ್ಕೆ ಸಂಬಂಧಿಸಿದ ದೂರುಗಳು ದಾಖಲಾಗಿವೆ. ಈ ಪೈಕಿ 88 ಸಾವಿರ 439 ದೂರುಗಳು ಬಾಕಿ ಇವೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ದೂರುಗಳು ದಾಖಲಾಗಿದ್ದು, ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ.
ಪ್ರತಿ ವರ್ಷ ಪರಿಸರಕ್ಕೆ ಸಂಬಂಧಿಸಿದ ದೂರುಗಳು ಹೆಚ್ಚಾಗುತ್ತಿರುವುದರಿಂದ ನ್ಯಾಯಾಂಗ ಪ್ರಕ್ರಿಯೆಯೂ ಒತ್ತಡದಲ್ಲಿದೆ. ಒಟ್ಟಾರೆ ಬಾಕಿ ಇರುವ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಎಲ್ಲ ದೂರುಗಳನ್ನು ಒಂದು ವರ್ಷದೊಳಗೆ ಪರಿಹರಿಸಲು ಆಡಳಿತ ನಿರ್ಧರಿಸಿದರೆ, ಪ್ರತಿದಿನ 242 ಅರ್ಜಿಗಳನ್ನು ಆಲಿಸಬೇಕಾಗುತ್ತದೆ ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.
ಸಂಪಾದಕೀಯ ನಿಲುವುದೇಶದ ಪರಿಸರ ನಾಶವಾಗುತ್ತಿರುವಾಗ, ಭಾರತೀಯರು ಜಾಗೃತರಾಗಿಲ್ಲ ಮತ್ತು ಯಾವುದೇ ಸರಕಾರ ಅಥವಾ ರಾಜಕೀಯ ಪಕ್ಷವು ಜನರನ್ನು ಸಮರೋಪಾದಿಯಲ್ಲಿ ಜಾಗೃತಗೊಳಿಸುತ್ತಿಲ್ಲ, ಇದು ನಾಚಿಕೆಗೇಡಿನ ಸಂಗತಿ ! |