ರಾಯಬರೇಲಿ (ಉತ್ತರ ಪ್ರದೇಶ)ದಲ್ಲಿ ಹಿಂದೂ ಹುಡುಗನನ್ನು ಮದುವೆಯಾದ ಮುಸ್ಲಿಂ ಹುಡುಗಿ !

ರಾಯಬರೇಲಿ (ಉತ್ತರ ಪ್ರದೇಶ) – ಜಿಲ್ಲೆಯ ಮಂತಾಶಾ ಎಂಬ ಮುಸ್ಲಿಂ ಹುಡುಗಿ ಆಶಿಶ್ ಮೌರ್ಯ ಎಂಬ ಹಿಂದೂ ಹುಡುಗನನ್ನು ವಿವಾಹವಾದರು. ಮಂತಾಶಾ ಅವರನ್ನು ಈಗ ಮಾನಸಿ ಮೌರ್ಯ ಎಂದು ಗುರುತಿಸಲಾಗುವುದು. ಜಿಲ್ಲೆಯ ದೇವಸ್ಥಾನವೊಂದರಲ್ಲಿ ವೈದಿಕ ಸಂಪ್ರದಾಯದಂತೆ ಇಬ್ಬರೂ ವಿವಾಹವಾದರು.

1. ಮಂತಾಶಾ, ‘ನನಗೆ ಮೊದಲಿನಿಂದಲೂ ಇಸ್ಲಾಂ ಧರ್ಮ ಇಷ್ಟವಿರಲಿಲ್ಲ. ನನಗೆ ಹಿಂದೂ ಧರ್ಮ ಇಷ್ಟವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ನನಗೆ ಹಿಂದೂ ಧರ್ಮವನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಸಿಕ್ಕಿತು’ ಎಂದರು.

2. ಆಶಿಶ್ ಮೌರ್ಯನನ್ನು ಮದುವೆಯಾಗಲು ಮಂತಾಶಾ ತನ್ನ ಕುಟುಂಬವನ್ನು ಮನವೊಲಿಸಲು ತುಂಬಾ ಪ್ರಯತ್ನ ಮಾಡಿದರು; ಆದರೆ ಏನು ಉಪಯೋಗವಾಗಲಿಲ್ಲ. ಫೆಬ್ರವರಿ 25 ರಂದು, ಮಂತಾಶಾ ಮನೆ ತೊರೆಯಲು ಯಶಸ್ವಿಯಾದರು. ಆಶಿಶ್ ಮೌರ್ಯ ಮತ್ತು ಮಂತಾಶಾ ಇಬ್ಬರೂ ರಾಯಬರೇಲಿಯ ಬೇನಿ ಮಾಧವ ಹನುಮಾನ್ ದೇವಸ್ಥಾನವನ್ನು ತಲುಪಿದರು. ಅಲ್ಲಿ ಅವರು ವೈದಿಕ ಸಂಪ್ರದಾಯದ ಪ್ರಕಾರ ವಿವಾಹವಾದರು.