ಸಂಯುಕ್ತ ರಾಷ್ಟ್ರದಲ್ಲಿ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ !

ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶದ ಬಗ್ಗೆ ನಾವು ಗಮನ ಕೊಡುವುದಿಲ್ಲ !

ನ್ಯೂಯಾರ್ಕ್ (ಅಮೇರಿಕಾ) – ಸಂಯುಕ್ತ ರಾಷ್ಟ್ರ ಮಾನವಾಧಿಕಾರ ಪರಿಷತ್ತಿನ ೫೫ನೇ ಅವಧಿಯ ಉಚ್ಚಮಟ್ಟದ ವಿಭಾಗದಲ್ಲಿ ಭಾರತವು ಪಾಕಿಸ್ತಾನಕ್ಕೆ ಕಾಶ್ಮೀರದ ವಿಷಯ ಎತ್ತಿದ್ದರಿಂದ ತರಾಟೆಗೆ ತೆಗೆದುಕೊಂಡಿತು. ಭಾರತದ ಸಂಯುಕ್ತ ರಾಷ್ಟ್ರದಲ್ಲಿನ ಸಚಿವರಾದ ಅನುಪಮಾ ಸಿಂಹರವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳುವಾಗ, `ಜಗತ್ತಿನಾದ್ಯಂತ ಇರುವ ಭಯೋತ್ಪಾದಕರಿಗೆ ಆಶ್ರಯ ತಾಣವಾಗಿರುವ ದೇಶದ ಕಡೆಗೆ ನಾವು ಹೆಚ್ಚಿನ ಗಮನ ನೀಡಲಾರೆವು. ಪಾಕಿಸ್ತಾನವು ಕೆಂಪು ಬಣ್ಣದಲ್ಲಿ (ರಕ್ತದಲ್ಲಿ) ಮುಳುಗಿರುವ ದೇಶವಾಗಿದೆ. ಅವರ ಸರಕಾರವು ಅವರ ಹಿತದ ಕಾರ್ಯ ಮಾಡುವುದರಲ್ಲಿ ಸೋತಿರುವ ಬಗ್ಗೆ ಅವರ ಜನರಿಗೆ ನಾಚಿಕೆಯಾಗುತ್ತಿದೆ, ಎಂದು ಹೇಳಿದರು.

ಅನುಪಮಾ ಸಿಂಹರವರು ಮಂಡಿಸಿದ ಅಂಶಗಳು 

೧. ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಮಾಡುವ ಸಂಸ್ಥೆಗಳಿರುವ ಹಾಗೂ ಅವರ ಮಾನವ ಹಕ್ಕುಗಳ ಸ್ಥಿತಿಯು ಚಿಂತಾಜನಕವಾಗಿರುವ ದೇಶಕ್ಕೆ ಭಾರತದ ವಿರುದ್ಧ ಹೇಳಿಕೆ ನೀಡಲು ಯಾವುದೇ ಅಧಿಕಾರವಿಲ್ಲ.

೨. ಪಾಕಿಸ್ತಾನವು ಭಾರತವನ್ನು ಆಗಾಗ ಉಲ್ಲೇಖಿಸಿದೆ. ಪರಿಷತ್ತಿನ ಸಭಾಂಗಣದಲ್ಲಿ ಭಾರತದ ಬಗ್ಗೆ ಬಹಿರಂಗವಾಗಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಇದು ಅತ್ಯಂತ ಬೇಸರಕರವಾಗಿದೆ. ಜಮ್ಮೂ-ಕಾಶ್ಮೀರ ಹಾಗೂ ಲಡಾಖ ಭಾರತದ ಅವಿಭಾಜ್ಯ ಅಂಗಗಳಾಗಿವೆ.

೩. ಜಮ್ಮೂ ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ವಿಕಾಸವನ್ನು ಸುನಿಶ್ಚಿತಗೊಳಿಸಲು ಭಾರತ ಸರಕಾರವು ಸಂವಿಧಾನಾತ್ಮಕ ಪ್ರಯತ್ನಗಳನ್ನು ಮಾಡಿದೆ. ಇದು ಭಾರತದ ಆಂತರಿಕ ವಿಷಯವಾಗಿದೆ ಹಾಗೂ ಇದರಲ್ಲಿ ಯಾರ ಹಸ್ತಕ್ಷೇಪವನ್ನೂ ನಾವು ಸಹಿಸುವುದಿಲ್ಲ.

೪. ಆಗಸ್ಟ್ ೨೦೨೩ರಲ್ಲಿ ಪಾಕಿಸ್ತಾನದಲ್ಲಿನ ಜರನವಾಲಾ ನಗರದಲ್ಲಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಮೇಲೆ ಅತ್ಯಾಚಾರ ನಡೆಯಿತು. ಈ ಸಮಯದಲ್ಲಿ ೧೯ ಚರ್ಚ್ ಗಳನ್ನು ನಾಶಮಾಡಲಾಗಿದ್ದು, ೮೯ ಕ್ರೈಸ್ತರು ಗಾಯಗೊಂಡಿದ್ದರು.

ಟರ್ಕಿಯನ್ನೂ ತರಾಟೆಗೆ ತೆಗೆದುಕೊಳ್ಳಲಾಯಿತು !

ಟರ್ಕಿಯೂ ಪರಿಷತ್ತಿನಲ್ಲಿ ಕಾಶ್ಮೀರದ ವಿಷಯವನ್ನು ಮಂಡಿಸಿತ್ತು. ಪಾಕಿಸ್ತಾನದ ಮೇಲೆ ಟೀಕಿಸುವಾಗಲೇ ಭಾರತವು ಟರ್ಕಿಗೂ ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು, ಎಂದು ತರಾಟೆಗೆ ತೆಗೆದುಕೊಂಡಿತು.

ಸಂಪಾದಕೀಯ ನಿಲುವು

ಬುದ್ಧಿವಂತನಿಗೆ ಮಾತಿನ ಪೆಟ್ಟು ತಿಳಿಯುತ್ತದೆ; ಆದರೆ ಎಮ್ಮೆ ಚರ್ಮದ ಪಾಕಿಸ್ತಾನಕ್ಕೆ ಶಬ್ದಗಳಿಂದ ಅಲ್ಲ, ಶಸ್ತ್ರಾಸ್ತ್ರಗಳ ಹೊಡೆತದಿಂದಲೇ ತಿಳಿಯುವುದರಿಂದ ಅದಕ್ಕೆ ಅದೇ ಭಾಷೆಯಲ್ಲಿ ತಿಳಿಸುವುದು ಯೋಗ್ಯವಾಗಿದೆ !