ಶಬರಿಮಲೆ ದೇವಸ್ಥಾನದಲ್ಲಿ ಮಲಯಾಳಿ ಬ್ರಾಹ್ಮಣರು ಮಾತ್ರ ಅರ್ಚಕರಾಗಬಹುದು ! – ಕೇರಳ ಹೈಕೋರ್ಟ್

ತ್ರಾವಣಕೊರು ದೇವಸ್ವಂ ಬೋರ್ಡ್‌ನ ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ !

ತಿರುವನಂತಪುರಂ (ಕೇರಳ) – ತ್ರಾವಣಕೊರ ದೇವಸ್ವಂ ಬೋರ್ಡ್‌ನ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ‘ರಿಟ್’ (ನ್ಯಾಯಾಲಯದ ತಕ್ಷಣದ ಗಮನವನ್ನು ಕೋರುವ ಅರ್ಜಿ) ಅರ್ಜಿಗಳನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ಶಬರಿಮಲೆ ದೇವಸ್ಥಾನದ ಮೇಲಶಾಂತಿ (ಪ್ರಧಾನ ಅರ್ಚಕ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಲ್ಯಾಳಿ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಸೇರಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ. ಅಜಿತ ಕುಮಾರ ಇವರ ವಿಭಾಗೀಯಪೀಠವು ಈ ಅರ್ಜಿಗಳ ಕುರಿತು ತೀರ್ಪು ನೀಡಿದೆ. ಈ ಅರ್ಜಿಯಲ್ಲಿ, ಮಲ್ಯಾಳಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ಮಾತ್ರ ಪ್ರಧಾನ ಅರ್ಚಕ ಹುದ್ದೆಗೆ ಆಯ್ಕೆಯನ್ನು ಸೀಮಿತಗೊಳಿಸಿರುವುದು ಭಾರತದ ಸಂವಿಧಾನ ನೀಡಿರುವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಯುಕ್ತಿ ವಾದ ಮಾಡಲಾಗಿತ್ತು.

1. ಹೈಕೋರ್ಟ್, ‘ಮಲಯಾಳಿ ಬ್ರಾಹ್ಮಣರನ್ನು ದೇವಾಲಯಗಳ ಪ್ರಧಾನ ಅರ್ಚಕರನ್ನಾಗಿ ಕಡ್ಡಾಯಗೊಳಿಸುವುದು ಅಂದರೆ ‘ಅಸ್ಪೃಶ್ಯತೆ’ ಇದೆ ಮತ್ತು ‘ಸಂವಿಧಾನದ 17 ನೇ ವಿಧಿ’ಯ ಉಲ್ಲಂಘನೆಯಾಗಿದೆ ಎಂಬ ಯುಕ್ತಿವಾದವನ್ನು ತಿರಸ್ಕರಿಸಿದೆ. ನ್ಯಾಯಾಲಯವು, ರಿಟ್ ಅರ್ಜಿಗಳು ಯುಕ್ತಿವಾದಗಳು ಮತ್ತು ಕಾರಣಗಳಿಂದ ಸಂಪೂರ್ಣವಾಗಿ ಅಭಾವವಿದೆ ಎಂದು ಹೇಳಿದೆ.

2. ನ್ಯಾಯಾಲಯವು, ಆರ್ಟಿಕಲ್ 25 (ಧರ್ಮದ ಸ್ವಾತಂತ್ರ್ಯದ ಅಡಿಯಲ್ಲಿ ಉದ್ಯೋಗಕ್ಕೆ ಅರ್ಹತೆ) ಮತ್ತು 26 (ಧಾರ್ಮಿಕ ವ್ಯವಹಾರಗಳನ್ನು ನಡೆಸುವ ಸ್ವಾತಂತ್ರ್ಯ) ಕುರಿತು ಸರಿಯಾದ ಯುಕ್ತಿವಾದ ಇಲ್ಲದಿರುವಾಗ, ಈ ರಿಟ್ ಅರ್ಜಿಗಳನ್ನು ದೊಡ್ಡ ವಿಭಾಗೀಯ ಪೀಠವು ಪರಿಗಣಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯವಿದೆ, ಎಂದು ಹೇಳಿದೆ. ಈ ಸೂತ್ರವನ್ನು ಸುಪ್ರೀಂ ಕೋರ್ಟ್ ನಿರ್ಧರಿಸಬೇಕು. ಆದರೂ, ಈ ವಿಷಯದಲ್ಲಿ ಎರಡೂ ಪಕ್ಷಗಳ ಯುಕ್ತಿವಾದಗಳನ್ನು ಸರಿಯಾದ ಸಮಯದಲ್ಲಿ ಸೂಕ್ತ ಪ್ರಕ್ರಿಯೆಗಳಿಗೆ ಮುಕ್ತವಾಗಿ ಇಡಬೇಕು ಎಂದು ನಾವು ಸ್ಪಷ್ಟಪಡಿಸುತ್ತೇವೆ.

ಏನಿದು ಪ್ರಕರಣ ?

ತ್ರಾವಣಕೊರ ದೇವಸ್ವಂ ಬೋರ್ಡ್ ಮೇ 27, 2021 ರಂದು ಒಂದು ಅಧಿಸೂಚನೆಯನ್ನು ಹೊರಡಿಸಿತ್ತು. ಅದರಲ್ಲಿ, ಶಬರಿಮಲೆ ದೇವಸ್ಥಾನ ಮತ್ತು ಮಲ್ಲಿಕಾಪುರಂ ದೇವಸ್ಥಾನದ ಶಾಂತಿಕರಣ (ಪೂಜಾರಿ) ಹುದ್ದೆಗೆ ಮಲ್ಯಾಳಿ ಬ್ರಾಹ್ಮಣ ಸಮುದಾಯದ ಸದಸ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆ ನಂತರ ವಕೀಲ ಬಿ.ಜಿ. ಹರಿಂದ್ರನಾಥ ಇವ ರಮೂಲಕ ಜುಲೈ 2021 ರಲ್ಲಿ ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು.

ಸಂಪಾದಕೀಯ ನಿಲುವು

ಹಿಂದೂಗಳ ಆಚಾರ-ವಿಚಾರಗಳು ಅಸಂವಿಧಾನಿಕ ಎಂದು ಸಾಬೀತುಪಡಿಸಲು ಕಮ್ಯುನಿಸ್ಟರು ಕುತಂತ್ರ ನಡೆಸುತ್ತಿದ್ದಾರೆ. ಕೇರಳ ಹೈಕೋರ್ಟಿನ ತೀರ್ಪಿನಿಂದ ಇಂತಹವರಿಗೆ ಕಪಾಳಮೋಕ್ಷ ಆಗಿದ್ದೂ ಅಷ್ಟೇ ಸತ್ಯ !