ಪುಣೆ ಜಿಲ್ಲೆಯ ರಾಜಗಡದಲ್ಲಿರುವ ಕುಡಿಯುವ ನೀರು ಕಲುಷಿತ !

ಪುಣೆ – ರಾಜಗಡ ಕೋಟೆಯ ಕೆರೆಗಳಲ್ಲಿ ಸಾಕಷ್ಟು ನೀರಿದೆ; ಆದರೆ ಸ್ವಚ್ಛತೆಯ ಕೊರತೆಯಿಂದ ನೀರು ಕಲುಷಿತವಾಗುತ್ತಿದೆ. ಕೋಟೆಯ ಮೇಲೆ ಕುಡಿಯುವ ನೀರಿನ ಕೊರತೆ ನಿರ್ಮಾಣವಾಗಿದೆ. ಇದರಿಂದಾಗಿ ಪ್ರವಾಸಿಗರಿಗೆ ನೀರು ಖರೀದಿಸಬೇಕಾಗುತ್ತಿದೆ. ಕೋಟೆಯ ಮೇಲಿನ ಆಹಾರ ಮಾರಾಟಗಾರರು ನೀರನ್ನು ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ. ಈ ವಿಷಯದ ಕಡೆಗೆ ಪುರಾತತ್ವ ಇಲಾಖೆಯಿಂದ ಅಕ್ಷಮ್ಯ ದುರ್ಲಕ್ಷವಾಗುತ್ತಿದೆ. ಕೋಟೆಯ ಮೇಲಿನ ‘ಕೆರೆಗಳ ನೀರನ್ನು ಸ್ವಚ್ಛಗೊಳಿಸಿ ಅದನ್ನು ಕುಡಿಯಲು ಯೋಗ್ಯವಾಗಿಸಬೇಕು’ ಎಂದು ಶಿವಪ್ರೇಮಿಗಳು ಮನವಿ ಮಾಡಿದರು. (ಇಂತಹ ಬೇಡಿಕೆಯನ್ನು ಶಿವಪ್ರೇಮಿಗಳಿಗೆ ಏಕೆ ಮಾಡಬೇಕಾಗುತ್ತಿದೆ? – ಸಂಪಾದಕರು) 

1. ಕೋಟೆಯ ಮೇಲೆ ಪುರಾತತ್ವ ಇಲಾಖೆಯ ಕಾವಲುಗಾರರು ವಸತಿ ಇರುತ್ತಾರೆ. ಸಂಜೆ 5 ಗಂಟೆಯ ನಂತರ ಕೋಟೆಯ ಬಾಗಿಲನ್ನು ಮುಚ್ಚಿ ಕಾವಲು ಕಾಯುತ್ತಾರೆ. ಛತ್ರಪತಿ ಶಿವರಾಯರ ಅರಮನೆಯ ಹಿಂಭಾಗದಲ್ಲಿರುವ ‘ರಾಣಿವಸಾ ಕೆರೆ’ಯ ಝರಿಯಿಂದ ಕಾವಲುಗಾರರಿಗೆ ನೀರನ್ನು ತರಬೇಕಾಗುತ್ತಿದೆ. ‘ಕಲುಷಿತ ನೀರಿನಿಂದಾಗಿ ಕೋಟೆಯಲ್ಲಿ ವಾಸಿಸುವುದೇ ಕಠಿಣವಾಗಿದೆ’ ಎಂದು ಕಾವಲುಗಾರರು ಹೇಳುತ್ತಾರೆ. (ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣರಾದ ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಸರಕಾರ ಯಾವಾಗ ಕಠಿಣ ಕ್ರಮ ಕೈಗೊಳ್ಳುವುದು ?- ಸಂಪಾದಕರು) 

2. ಈ ಪ್ರಕರಣದಲ್ಲಿ  ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿಲಾಸ ವಾಹಣೆ ಮಾತನಾಡಿ, ‘ರಾಜಗಡದ ಮೇಲಿನ ಕೆರೆಯಲ್ಲಿ  ಸಾಕಷ್ಟು ನೀರಿದೆ. ಸಧ್ಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ನೀರು ಬೇಗನೆ ಮುಗಿಯುತ್ತದೆ. ಇತರ ಕೆರೆಗಳಲ್ಲಿ ನೀರಿನ ಶುದ್ಧೀಕರಣ ಮಾಡಿ ಅದನ್ನು ಕುಡಿಯಲು ಯೋಗ್ಯಗೊಳಿಸಲಾಗುವುದು. ಅದಕ್ಕಾಗಿ ಸ್ವತಂತ್ರ ರೂಪುರೇಷೆಯನ್ನು ಸಿದ್ಧಪಡಿಸಲಾಗುತ್ತಿದೆ, ಎಂದು ಹೇಳಿದರು. ” (ಕಾವಲುಗಾರರ ಹೇಳಿಕೆಯ ಬಗ್ಗೆ ಸಹಾಯಕ ನಿರ್ದೇಶಕರು ಏನಾದರೂ ಹೇಳುತ್ತಾರೆಯೇ? – ಸಂಪಾದಕರು)

ಸಂಪಾದಕೀಯ ನಿಲುವು

ನಿದ್ರಾವಸ್ಥೆಯಲ್ಲಿರುವ ಪುರಾತತ್ವ ಇಲಾಖೆ ! ಮಹಾರಾಷ್ಟ್ರದಲ್ಲಿರುವ ಕೋಟೆ-ದುರ್ಗಗಳ ದುಃಸ್ಥಿತಿಗೆ ಕಾರಣವಾಗಿರುವ ಪುರಾತತ್ವ ಇಲಾಖೆಯನ್ನು ವಿಸರ್ಜಿಸಿರಿ !