ಹಲ್ದವಾನಿ (ಉತ್ತರಾಖಂಡ)ದಲ್ಲಿ ಮುಸ್ಲಿಮರಿಂದಾಗಿ ಜೋಶಿ ವಿಹಾರದ 60 ಹಿಂದೂ ಕುಟುಂಬಗಳ ಸ್ಥಳಾಂತರ !

ಜೋಶಿ ವಿಹಾರದಲ್ಲಿ ಈಗ 150 ಮುಸ್ಲಿಂ ಕುಟುಂಬಗಳು ಇವೆ

ಹಲ್ದವಾನಿ (ಉತ್ತರಾಖಂಡ) – ಇಲ್ಲಿನ ಬನಭೂಲಪುರಾ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಅನಧಿಕೃತ ಮದರಸಾ ಕೆಡವಿದ್ದರಿಂದ ಮತಾಂಧ ಮುಸ್ಲಿಮರು ಹಿಂಸಾಚಾರ ನಡೆಸಿದ್ದರು. ಈಗ ಇಲ್ಲಿನ ಜೋಶಿ ವಿಹಾರದಲ್ಲಿ ಉತ್ತರ ಪ್ರದೇಶದ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಕಳೆದ 6 ವರ್ಷಗಳಲ್ಲಿ ಜೋಶಿ ವಿಹಾರದಿಂದ 60 ಹಿಂದೂ ಕುಟುಂಬಗಳು ಸ್ಥಳಾಂತರಗೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಈಗ ಇಲ್ಲಿ ಕೇವಲ 3 ಹಿಂದೂ ಕುಟುಂಬಗಳು ಉಳಿದಿದ್ದು, ಅದೂ ಕೂಡ ಮುಂದಿನ ತಿಂಗಳಿನಲ್ಲಿ ಮನೆಯನ್ನು ಮಾರಿ ಇತರೆಡೆಗೆ ಹೋಗುವವರಿದ್ದಾರೆ. ಈಗ ಜೋಶಿ ವಿಹಾರದಲ್ಲಿ 150 ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಅವರ ಬಳಿ ಆಧಾರ್ ಕಾರ್ಡ್, ಭೂ ದಾಖಲೆ ಸೇರಿದಂತೆ ಎಲ್ಲ ದಾಖಲೆಗಳಿವೆ.

1. ಇಲ್ಲಿಯೇ ವಾಸವಿರುವ ದೇವೇಂದ್ರ ಜೋಶಿ ಅವರು ಮಾತನಾಡಿ, ಅವರ ಅಜ್ಜ ಇಲ್ಲಿ ಭೂಮಿಯನ್ನು ಖರೀದಿಸಿದ್ದರು. ಮುಂದೆ ಹಿಂದೂಕುಟುಂಬಗಳು ಇಲ್ಲೇ ನೆಲೆಸಿದರು. ಅಜ್ಜನವರು ಬಡ ಜನರಿಗೆ ಅತಿ ಕಡಿಮೆ ಬೆಲೆಯಲ್ಲಿ ಭೂಮಿಯನ್ನು ಒದಗಿಸಿದರು. ಜನರು ಈ ಭೂಮಿಯನ್ನು ಹೊರಗಿನ ಜನರಿಗೆ ಮಾರಾಟ ಮಾಡಲು ಪ್ರಾರಂಭಿಸಿದರು. ಮುಸಲ್ಮಾನರು ಕೆಲವು ಹಿಂದೂಗಳಿಗೆ ಭೂಮಿಯನ್ನು ಕವಡೆ ಕಿಮ್ಮತ್ತಿನ ಬೆಲೆಯಲ್ಲಿ ಮಾರಾಟ ಮಾಡುವಂತೆ ಮಾಡಿದರು. ರಾಮಪುರದದಿಂದ ಬಂದಿರುವ ಮಲಿಕ ಹೆಸರಿನ ವ್ಯಕ್ತಿಯು ಮೊದಲು ಮನೆ ಖರೀದಿಸಿದರು. ಮುಂದೆ ಮುಸಲ್ಮಾನರ ವಸತಿಯ ವ್ಯಾಪ್ತಿ ವೃದ್ಧಿಸಿತು.

2. ಜನರ ಸ್ಥಳಾಂತರದ ಹಿಂದೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಕೆಲವರು ದುರಾಸೆಯಿಂದ ತಮ್ಮ ಭೂಮಿಯನ್ನು ಮಾರಿದರು. ಎರಡನೆಯ ಕಾರಣವೆಂದರೆ ಜನರಿಗೆ ಅವರ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಡ ಹೇರಲಾಯಿತು. ಯಾವ ಜನರು ಇಲ್ಲಿ ಒಂದು ಲಕ್ಷದಲ್ಲಿ ಭೂಮಿಯನ್ನು ಖರೀದಿಸಿದ್ದಾರೆಯೋ, ಅದನ್ನು ನಂತರ 1 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು. ಮುಸಲ್ಮಾನರು ಅಸ್ವಚ್ಛತೆ ಮತ್ತು ಅವರ ಸಂಖ್ಯೆ ಹೆಚ್ಚಾಗಿದ್ದರಿಂದ ಬಹುತೇಕ ಹಿಂದೂಗಳು ಭೂಮಿಯನ್ನು ಮಾರಾಟ ಮಾಡಿ ಹೊರಟು ಹೋದರು. ಭಾಜಪ ಸೇರಿದ ಮಾಜಿ ಗ್ರಾಮದ ಮುಖಂಡ ಮನೋಜ ಮಠಪಾಲ ಮಾತನಾಡುತ್ತಾ, ಇಲ್ಲಿನ ಭೂಮಿಯನ್ನು ಚದರ ಅಡಿಗೆ 4 ಸಾವಿರ 500 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

1. ಒಂದು ವೇಳೆ ಜನಸಂಖ್ಯೆಯಲ್ಲಿ ಬದಲಾವಣೆಯಾದರೆ, ಅದನ್ನು ತೋರಿಸಲಾಗುವುದು. ಜನರು ಇಲ್ಲಿಂದ ಏಕೆ ಹೋದರು ? ಎನ್ನುವ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡುತ್ತಿದ್ದಾರೆ – ಪರಿತೋಷ ವರ್ಮಾ, ಅಪರಜಿಲ್ಲಾಧಿಕಾರಿ

2. ಜನರ ತನಿಖೆ ಮಾಡುವುದು ನಮ್ಮ ಕೆಲಸ. ಇಡೀ ಜಿಲ್ಲೆಯಲ್ಲಿ ಈ ಕಾರ್ಯ ನಡೆಯುತ್ತಿದೆ. ಆಯಾ ಕಾಲಕ್ಕೆ ಪರೀಕ್ಷಿಸಲಾಗುತ್ತಿದೆ. ಜೋಶಿ ವಿಹಾರದಲ್ಲಿ ವಾಸಿಸುವ ಜನರ ತನಿಖೆ ನಡೆಸಲಾಗುವುದು. – ಪ್ರಲ್ಹಾದ ನಾರಾಯಣ ಮೀಣಾ, ವಿಶೇಷ ಪೊಲೀಸ್ ವರಿಷ್ಠಾಧಿಕಾರಿ

ಸಂಪಾದಕೀಯ ನಿಲುವು

ಹಿಂದೂಗಳ ವಸತಿಯಲ್ಲಿ ಒಂದು ಮುಸ್ಲಿಂ ಕುಟುಂಬ ಬಂದರೆ, ಕ್ರಮೇಣ ಅವನ ಸಂಬಂಧಿಕರನ್ನು ವಸತಿಯಲ್ಲಿ ತರುತ್ತಾನೆ. ಈ ರೀತಿ ನಿಧಾನವಾಗಿ ಅವರ ಸಂಖ್ಯೆ ಹೆಚ್ಚಾದಕೂಡಲೇ ಗೋಮಾಂಸ ಭಕ್ಷಣೆ, ಅಶುಚಿತ್ವ, ದುರ್ವಾಸನೆ ಇತ್ಯಾದಿಗಳಿಂದಾಗಿ ಹಿಂದೂಗಳು ಅಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಇದೇ ದೇಶದಾದ್ಯಂತ ಗೋಚರಿಸುತ್ತದೆ !