ಮಾರ್ಚ್ 1 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಂದ ಜಗತ್ತಿನಲ್ಲಿನ ಮೊದಲ ವೈದಿಕ ಗಡಿಯಾರದ ಉದ್ಘಾಟನೆ !

ಉಜ್ಜೈನ್ (ಮಧ್ಯಪ್ರದೇಶ) – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಹಸ್ತದಿಂದ ಮಾರ್ಚ್ 1ರಂದು ಜಗತ್ತಿನ ಮೊದಲ ವೈದಿಕ ಗಡಿಯಾರದ ಉದ್ಘಾಟನೆ ಮಾಡಲಾಗುವುದು. ಈ ಗಡಿಯಾರ ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಗಡಿಯಾರದಲ್ಲಿ ೪೮ ನಿಮಿಷದ ಒಂದು ಗಂಟೆ ಇರುವುದು. ಈ ಗಡಿಯಾರದಲ್ಲಿ ಮುಹೂರ್ತ, ಗ್ರಹಣ ದಿನಾಂಕ, ಹಬ್ಬ, ವ್ರತಗಳು, ಶುಭ ಮುಹೂರ್ತ, ಗ್ರಹ ಭದ್ರ ಸ್ಥಿತಿ, ಸೂರ್ಯ ಚಂದ್ರ ಗ್ರಹಣ ಮತ್ತು ಹಬ್ಬ ಹರಿದಿನ ಇದರ ಸಮಯ ಕೂಡ ಲೆಕ್ಕದ ಪ್ರಕಾರ ತೋರಿಸುವುದು.

(ಸೌಜನ್ಯ News18 MP Chhattisgarh)

೧. ಈ ಗಡಿಯಾರ ಉಜ್ಜೈನಿಯಲ್ಲಿನ ಜಂತರ್ ಮಂತರ್ ಹತ್ತಿರ ೮೫ ಅಡಿಯ ಎತ್ತರದ ಟವರ್ ಮೇಲೆ ಸ್ಥಾಪಿಸಲಾಗುವುದು. ಫೆಬ್ರುವರಿ ೨೫ ರಂದು ಟವರ್ ನ ಐದನೆಯ ಮಹಡಿಯ ಮೇಲೆ ಗಡಿಯಾರ ಕೂಡಿಸಿದ್ದಾರೆ. ಇದು ಸಂಪೂರ್ಣವಾಗಿ ಇಂಟರ್ನೆಟ್ ಜೊತೆಗೆ ಜೋಡಣೆಯಾಗಿದೆ.
೨. ಈ ಗಡಿಯಾರ ದೆಹಲಿ ಐಐಟಿಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಈ ವೈದಿಕ ಗಡಿಯಾರದಲ್ಲಿ ಋಗ್ವೇದದ ಪ್ರಕಾರ ಹಿಂದೂ ಗಣನೆ ಮತ್ತು ಗ್ರೀನ್ವಿಚ್ ಸಮಯ ಪ್ರಣಾಳಿ ಇದರ ಮೂಲಕ ಒಂದೇ ಸಮಯದಲ್ಲಿ ಸಮಯ ನೋಡಬಹುದು. ಇದರಲ್ಲಿ ೩೦ ಗಂಟೆ, ೩೦ ನಿಮಿಷಗಳು ಮತ್ತು ೩೦ ಸೆಕೆಂಡ್ ಗಳ ಸಮಯ ತೋರಿಸಲಿದೆ.

೩. ಈ ಗಡಿಯಾರದಲ್ಲಿ ಸೂರ್ಯೋದಯದ ಸಮಯ, ಶುಭ ಸಮಯ, ವಿಕ್ರಮ ಸಂವತ್ ದಿನದರ್ಶಿಕೆ, ಮೂಹೂರ್ತ ಕಾಲಾವಧಿ, ರಾಹುಕಾಲ ಮತ್ತು ಪಂಚಾಂಗ ಇದರ ಸಹಿತ ಬೇರೆ ಬೇರೆ ಸಮಯದ ಪ್ರಕಾರ ೩ ಬೇರೆ ಬೇರೆ ಸಮಯದ ಗಣನೆ ಮಾಡಬಹುದು.

೪. ‘ರಾಜಾ ವಿಕ್ರಮಾದಿತ್ಯ ಸಂಶೋಧನಾ ಸಂಸ್ಥೆ’ಯ ಸಂಚಾಲಕ ಡಾ. ಶ್ರೀರಾಮ ತಿವಾರಿ ಇವರು, ಉಜ್ಜೈನಿಯ ಪ್ರಾಚೀನ ವೈಭವಶಾಲಿ ಪರಂಪರೆ ಮರಳಿ ತರುವುದೇ ಈ ಉಪಕ್ರಮದ ಉದ್ದೇಶವಾಗಿದೆ. ಉಜ್ಜೈನಿಯ ನಂತರ ದೇಶದ ಇದರ ಭಾಗಗಳಲ್ಲಿ ಕೂಡ ಈ ಗಡಿಯಾರ ಅಳವಡಿಸುವ ಯೋಜನೆ ಇದೆ ಎಂದು ಹೇಳಿದರು.

೫. ಗಡಿಯಾರ ಅಳವಡಿಸುವ ಕಾರ್ಯ ಮಾಡಿರುವ ಸುಶೀಲ ಗುಪ್ತ ಇವರು, ಗಡಿಯಾರದಲ್ಲಿ ಸೂರ್ಯೋದಯದಿಂದ ಸೂರ್ಯೋದಯದವರೆಗಿನ ೩೦ ಗಂಟೆಗಳ ಸಮಯ ಇರುವುದು. ಇದು ನಮ್ಮ ಭಾರತೀಯ ಪ್ರಮಾಣ ಸಮಯವಾಗಿದೆ. ಇದರ ಪ್ರಕಾರ ೪೮ ನಿಮಿಷದ ಒಂದು ಗಂಟೆ ಇರುವುದು. ಭಾರತೀಯ ದಿನದರ್ಶಿಕೆಯ ಗಣನೆಯ ಆಧಾರಿತ ಈ ಗಡಿಯಾರ ಇರುವುದು.
೬. ಉಜ್ಜೈನಿ ನಗರ ಕರ್ಕವೃತ ರೇಖೆಯ ಉಷ್ಣ ವಲಯದಲ್ಲಿ ಇದೆ. ಈ ರೇಖೆ ಒಂದು ಸಮಯದಲ್ಲಿ ನಗರದ ಮಧ್ಯಭಾಗದಲ್ಲಿ ಇತ್ತು. ಈ ಕಾರಣದಿಂದ ಇಲ್ಲಿ ಕರ್ಕರಾಜ ಮಂದಿರ ಇದೆ. ಸಾಮ್ರಾಟ ವಿಕ್ರಮಾದಿತ್ಯ ಇವರ ನವರತ್ನಗಳಲ್ಲಿ ಒಬ್ಬರಾದ ಆಚಾರ್ಯ ವರಾಹಮಿಹಿರ ಇವರು ಕಾಲ ಗಣನೆಯಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ವರಾಹಮಹಿರ ಇವರು ಅವರ ಜ್ಯೋತಿಷ್ಯ ಗಣನೆಯ ಮೂಲಕ ಯಾವುದೇ ವ್ಯಕ್ತಿಯ ಭವಿಷ್ಯದ ಬಗ್ಗೆ ನಿಖರ ಮಾಹಿತಿ ನೀಡುತ್ತಿದ್ದರು. ಮುಂದೆ ರಾಜ ಜಯಸಿಂಹ ಇವರು ದೇಶದಲ್ಲಿನ ೪ ವೇದ ಶಾಲೆಗಳಲ್ಲಿ ಒಂದು ಇಲ್ಲಿ ಸ್ಥಾಪಿಸಿದರು.
೭. ವೈದಿಕ ಗಡಿಯಾರದ ಆ್ಯಪ್ ಕೂಡ ಅಭಿವೃದ್ಧಿಪಡಿಸಿದ್ದಾರೆ. ಬಳಕೆದಾರರು ಹಿಂದೂ ಪಂಚಾಂಗ, ಮುಹೂರ್ತ, ಗ್ರಹಗಳ ಸ್ಥಿತಿ, ಸೂರ್ಯ ಮತ್ತು ಚಂದ್ರ ಸ್ಥಿತಿಯ ಮೂಲಕ ಜ್ಯೋತಿಷ್ಯ ಗಣನೆ ಸಹಿತ ಹಿಂದೂ ದಿನದರ್ಶಿಕೆಯ ಸಂಬಂಧಿತ ಎಲ್ಲಾ ಅಂಶಗಳು ನೋಡಬಹುದು. ಈ ಗಡಿಯಾರದಲ್ಲಿ ತಿಥಿ, ಪಕ್ಷ (ಚಂದ್ರ ಪಾಕ್ಷಿಕ) ಈ ಚಂದ್ರನ ಸ್ಥಿತಿಯಿಂದ ದಿನಗಳ ಗಣನೆ ಆಗುವುದು. ಈ ಗಡಿಯಾರ ಗ್ರೀನ್ ವಿಚ್ ಮೀನ್ ಟೈಮ್ (GMT) ಪ್ರಕಾರ ಸಮಯ ಕೂಡ ತೋರಿಸುವುದು. ಈ ಗಡಿಯಾರ ಭಾರತದಲ್ಲಿನ ಎಲ್ಲಾ ಪ್ರಮುಖ ದೇವಸ್ಥಾನಗಳಿಗೆ ಜೋಡಿಸಲಾಗುವುದು.