ಸಾತಾರಾ (ಜಿಲ್ಲೆ ಸಂಭಾಜಿನಗರ) ಇಲ್ಲಿನ ಮಾಜಿ ಸರಪಂಚ ಫಿರೋಜ ಪಟೇಲ ಇವರು 40 ರಿಂದ 50 ಗೂಂಡಾಗಳೊಂದಿಗೆ ಸೇರಿ ಮಹಿಳೆಯರ ಬಟ್ಟೆ ಹರಿದು ನಿರ್ದಯವಾಗಿ ಹಲ್ಲೆ

ಫಿರೋಜ ಪಟೇಲರೊಂದಿಗೆ 13 ಮತಾಂಧರ 1 ಗಂಟೆ ಕಾಲ ಗದ್ದಲ !

ಛತ್ರಪತಿ ಸಂಭಾಜಿನಗರ – ಇಲ್ಲಿನ ಸತಾರಾ ಪ್ರದೇಶದಲ್ಲಿ ಫೆಬ್ರುವರಿ 24ರ ರಾತ್ರಿ ಎಂ.ಐ.ಟಿ. ವಿಶ್ವವಿದ್ಯಾಲಯದ ಹಿಂದೆ ಸಹೋದರಿ- ಸಹೋದರ ಮನೆಯ ಮುಂದೆ ನಡೆದಾಡುತ್ತಿದ್ದರು. ಆ ಸಮಯದಲ್ಲಿ ರಾತ್ರಿ 8 ಗಂಟೆಗೆ ದ್ವಿಚಕ್ರವಾಹನದಿಂದ ಮಾಜಿ ಸರಪಂಚ ಫಥಜಲ ಪಟೇಲ ಮತ್ತು ಸೊಹೆಲ ಖಾನ ಬಂದರು ಅವರು ಸಹೋದರಿ- ಸಹೋದರನನ್ನು ತಡೆದು ಅವಳ ಕಡೆಗೆ ನೋಡುತ್ತಾ, `ಕ್ಯಾ ಖೂಬ ಲಗತಿ ಹೋ’ ಈ ಹಾಡನ್ನು ಹೇಳುತ್ತಾ ಅವಳ ಮೈಮೇಲಿನ ಓಡಣಿಯನ್ನು ತೆಗೆದು ಎಸೆದರು. ಸಹೋದರನು ಪ್ರಶ್ನಿಸಿದಾಗ ಅವನನ್ನು ಥಳಿಸಿದರು. ಅಲ್ಲಿಯವರೆಗೆ ಫಿರೋಜ ಕಾಣ 40 ರಿಂದ 50 ಜನರನ್ನು ಕರೆದುಕೊಂಡು ಅಲ್ಲಿಗೆ ಬಂದನು. ಅರ್ಧ ಗಂಟೆಯಿಂದ 1 ಗಂಟೆ ಗೂಂಡಾಗಳು ಕುಟುಂಬದ ಮಹಿಳೆಯರ ಬಟ್ಟೆಗಳನ್ನು ಹರಿದು ನಿರ್ದಯತೆಯಿಂದ ಹಲ್ಲೆ ನಡೆಸಿದರು. ಗೂಂಡಾಗಳು ಸಂತ್ರಸ್ಥ ಯುವತಿಯ ಇತರೆ ಕುಟುಂಬದ ಮಹಿಳೆಯ ಬಟ್ಟೆಗಳನ್ನು ಹರಿದು ಅವರಿಗೆ ಥಳಿಸಿದರು. ಈ ಪ್ರಕರಣದಲ್ಲಿ 29 ವರ್ಷದ ಯುವತಿಯು ದೂರನ್ನು ದಾಖಲಿಸಿದ್ದಾಳೆ. ಫಿರೋಜ ಪಟೇಲ ಅವನ ಪುತ್ರ ಫೈಜಲ ಪಟೇಲ, ವಸೀಮ ಪಟೇಲ, ಸೊಹೆಲ ಶೇಖ, ಮೊಹಿನ ಪಠಾಣ, ಆಮಿರ ಪಟೇಲ, ಅರಬಾಜ ಪಟೇಲ, ಇಮ್ರಾನ ಪಟೇಲ, ಫರದೀನ ಪಟೇಲ, ಸಮೀರ ಶೇಖ, ರಯಿಸ ಪಟೇಲ, ಗುಡ್ಡೂ ಪಟೇಲ, ತೌಫಿಕ ಮತ್ತು ಇತರೆ 30 ರಿಂದ 40 ಜನ ಆರೋಪಿಗಳ ಹೆಸರಾಗಿದೆ.

ಮತಾಂಧರ ಉದ್ಧಟತನದ ವರ್ತನೆ

ಸಂತ್ರಸ್ತ ಯುವತಿಯು ಮಾತನಾಡಿ, ‘ ಹುಟ್ಟುಹಬ್ಬವಾಗಿದ್ದರಿಂದ ನಾವು ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸುವವರಿದ್ದೆವು. ಅದರ ಚರ್ಚೆ ಮಾಡುತ್ತಿದ್ದಾಗ ದ್ವಿಚಕ್ರವಾಹನದ ಮೇಲೆ ಬಂದಿದ್ದ ಪುಂಡರಗುಂಪು ನನ್ನ ಓಢಣಿಯನ್ನು ಜಗ್ಗಿ ಕಿತ್ತು ಎಸೆದು, ಚುಡಾಯಿಸಿದರು. ಇದನ್ನು ಪ್ರಶ್ನಿಸಿಲು ಹೋಗಿದ್ದ ನನ್ನ ಕುಟುಂಬದವರನ್ನು ಪುಂಡರಗುಂಪು ` ಹಮ್ ಸಾತಾರಾ ಗಾಂವ ಕೆ ಪಟೇಲ ಹೈ, ಹಮ ಐಸೇ ಹಿ ಹೈ’ ತುಮ ಹಮಾರಾ ಕ್ಯಾ ಉಖಾಡೋಗೆ’, ಎಂದು ಹೇಳುತ್ತಾ,. ನಾವು ಸಹೋದರಿ- ಸಹೋದರನಿಗೆ ಬೈಯ್ಯುತ್ತಾ, ಥಳಿಸಿದರು. ನನ್ನ ಕುತ್ತಿಗೆಯನ್ನು ಒತ್ತಿಹಿಡಿದು ನನ್ನ ಬಟ್ಟೆಗಳನ್ನು ಹರಿದರು. ಆ ಸಮಯದಲ್ಲಿ ಬಹಳ ಹೆದರಿಕೆಯೆನಿಸಿತು. ತದನಂತರ ದ್ವಿಚಕ್ರ ವಾಹನದ ಮೇಲೆ ಮತ್ತಷ್ಟು ಜನರು ಬಂದರು. ನಾನು ಮನೆಗೆ ಓಡುತ್ತ ಹೋಗುತ್ತಿರುವಾಗ ಆರೋಪಿಗಳು ನನ್ನನ್ನು ಥಳಿಸಿದರು. ನಾನು ಎರಡನೇಯ ಸಹೋದರನನ್ನು ಮೊಬೈಲ ಕರೆ ಮಾಡಿ ಮನೆಯ ಹತ್ತಿರ ಕರೆಸಿದೆನು. ತಾಯಿ ಸಹಾಯಕ್ಕೆ ಬಂದರು. ಅವಳ ಸೀರೆಯನ್ನು ಕೂಡ ಹರಿದರು. ತಂದೆಯವರು ವಿರೋಧಿಸಿದರ. ಅವರನ್ನು ಕೆಳಗೆ ಬೀಳಿಸಿ ಥಳಿಸಿದರು. ಹೆದರಿಕೆಯಿಂದ ರಾತ್ರಿಯಿಡೀ ಮಲಗಿಲ್ಲ. ಈಗ ಇಲ್ಲಿ ವಾಸಿಸಲು ಹೆದರಿಕೆಯಾಗುತ್ತಿದೆ. ( ಮತಾಂಧರ ಸೊಕ್ಕನ್ನು ಪೊಲೀಸರು ಯಾವಾಗ ಮುರಿಯುವರು?- ಸಂಪಾದಕರು)

ಗರ್ಭಿಣಿಯ ಹೊಟ್ಟೆಗೆ ಕಾಲಿನಿಂದ ಒದ್ದರು

ಫಿರೋಜ ಪಟೇಲನೊಂದಿಗೆ ಅವನ ಗೂಂಡಾಗಳು ಯುವತಿಯ ತಾಯಿ, ಇಬ್ಬರೂ ಅತ್ತಿಗೆಯಂದಿರನ್ನು ಮತ್ತು ಸಹೋದರಿಗೂ ಥಳಿಸಿದರು. ಅವರಲ್ಲಿ ಗರ್ಭವತಿಯಾಗಿರುವ ಒಬ್ಬ ಅತ್ತಿಗೆಯ ಮೈಮೇಲಿನ ಬಟ್ಟೆಯನ್ನು ಹರಿದು ಅವಳ ಹೊಟ್ಟೆಗೆ ಕಾಲಿನಿಂದ ಒದ್ದು ಥಳಿಸಿದರು. ಫಿರೋಜ ಪಟೇಲನು ` ಆಜ ಸಬಕೊ ನಂಗಾ ಕರಕೆ ಮಾರನಾ ಹೈ, ಪಕಡೋ ಸಾಲೋಂ ಕೊ ಮಾರ ದೊ’ ಎಂದು ಹೇಳುತ್ತಾ, ಯುವತಿಯ ಭಾವಂದಿರನ್ನು ಮತ್ತು ತಂದೆಯನ್ನು ಬೆಲ್ಟನಿಂದ ಲಾಠೀಯಿಂದ ಥಳಿಸಿದರು.

ಶಾಸಕರ ಮಧ್ಯಸ್ಥಿಕೆಯಿಂದ ಪೊಲೀಸರಲ್ಲಿ ದೂರು ದಾಖಲು

ಮಾಜಿ ಸರಪಂಚ ಫಿರೋಜ ಪಟೇಲ ಮತ್ತು ಅವನ ಸಹೋದ್ಯೋಗಿ ಮಾಡಿರುವ ಹಲ್ಲೆಯ ಮಾಹಿತಿಯನ್ನು ರಾತ್ರಿ ಶಿವಸೇನೆಯು ಶಾಸಕ ಸಂಜಯ ಶಿರಸಾಟ ಇವರಿಗೆ ತಿಳಿಯಿತು. ಅವರು ಸಾತಾರಾ ಪೊಲೀಸ ಠಾಣೆಗೆ ಧಾವಿಸಿ ಬಂದು ಹಲ್ಲೆಗೆ ಒಳಗಾಗಿರುವ ಕುಟುಂಬದವರಿಗೆ ಧೈರ್ಯ ನೀಡಿದರು ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸೂಚಿಸಿದರು. ಅವರು ಪೊಲೀಸ ಠಾಣೆಯಲ್ಲಿ ಬಂದಿದ್ದರಿಂದ ಕೆಲಸಮಯ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿತ್ತು. ದೂರು ದಾಖಲಾದ ಬಳಿಕವೇ ಶಾಸಕ ಶಿರಸಾಟರು ಪೊಲೀಸ ಠಾಣೆಯಿಂದ ನಿರ್ಗಮಿಸಿದರು.

ಸಂಪಾದಕೀಯ ನಿಲುವು

ಕಠಿಣ ಕ್ರಮವನ್ನು ಕೈಗೊಳ್ಳದ ಕಾರಣ ಉದ್ಧಟತನ ಮೆರೆದಿರುವ ಮತಾಂಧರು ! ಕಾಲಕಾಲಕ್ಕೆ ಹಿಂಸಾಚಾರ ನಡೆಸಿರುವ, ಮತಾಂಧರ ಮೇಲೆ ‘ಮೊಕ್ಕಾ’ದಂತಹ ಕಠಿಣ ಕ್ರಮವನ್ನು ಕೈಕೊಂಡಿದ್ದರೆ, ನಗರದ ಮತಾಂಧರ ಹಿಂಸಾತ್ಮಕಕೃತ್ಯಗಳು ಇಲ್ಲಿಯವರೆಗೆ ಮುಗಿದಿರುತ್ತಿದ್ದವು !