|
ಮುಂಬಯಿ – ಜರಾಂಗೆ ಪಾಟೀಲರು ಮರಾಠಾ ಮೀಸಲಾತಿ ವಿಷಯದಲ್ಲಿ ಮಾಡಿರುವ ಬೇಡಿಕೆಯನ್ನು ಸರಕಾರವು ಒಪ್ಪಿಕೊಂಡಿದೆ. ಮರಾಠಾ ಸಮಾಜಕ್ಕೆ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ. ಬೇರೆ ಯಾವುದೇ ಸಮಾಜದ ಮೇಲೆ ಅನ್ಯಾಯ ಮಾಡಲಾಗಿಲ್ಲ. ಆದರೂ ಜರಾಂಗೆಯವರ ಬೇಡಿಕೆ ಬದಲಾಗುತ್ತಲೇ ಹೋದವು. ಅವರು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ ಮಾತ್ರವಲ್ಲದೇ ನನ್ನ ವಿರುದ್ಧವೂ ಆರೋಪ ಮಾಡಿದರು. ಅವರ ಟೀಕೆಗೆ ರಾಜಕೀಯ ವಾಸನೆ ಬರತೊಡಗಿದೆ. ಮೀಸಲಾತಿಯನ್ನು ನೀಡಿದರೂ ಸರಕಾರದ ಮೇಲೆ ಆರೋಪಿಸುತ್ತಿದ್ದಾರೆ. ಸರಕಾರಕ್ಕೆ ಸಹಿಸಿಕೊಳ್ಳುವ ಒಂದು ಮಿತಿಯಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅವರು ಏಕವಚನದಲ್ಲಿ ಮಾತನಾಡತೊಡಗಿದರು. ಸುಳ್ಳು ಆರೋಪಗಳನ್ನು ಮಾಡ ತೊಡಗಿದ್ದಾರೆ. ಇದರಿಂದ ಜರಾಂಗೆ ಪಾಟೀಲರ ವಿರುದ್ಧದ ಆರೋಪಗಳನ್ನು ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ವಿಚಾರಣೆ ನಡೆಸುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಘೋಷಿಸಿದರು.
ಮುಖ್ಯಮಂತ್ರಿಗಳು, ತಮ್ಮ ಮಾತನ್ನು ಮುಂದುವರಿಸಿ…
1. ನಮ್ಮ ಸರಕಾರ ಮರಾಠಿಗರಿಗೆ ಮೀಸಲಾತಿ ನೀಡಿದೆ. ಈಗ ` ಮೀಸಲಾತಿ ನ್ಯಾಯಾಲಯದಲ್ಲಿ ಉಳಿಯುವುದಿಲ್ಲ’ ಎಂಬ ಚರ್ಚೆ ಪ್ರಾರಂಭವಾಗಿದೆ.ಈ ವಿಷಯದಲ್ಲಿ ಯಾರ ಬಳಿಯಲ್ಲಿಯಾದರೂ ಕಾರಣಗಳಿದ್ದರೆ, ಅವರು ಅದನ್ನು ನಮಗೆ ಹೇಳಬೇಕು.ನಾವು ಆ ವಿಷಯದಲ್ಲಿ ನಮ್ಮ ಹೇಳಿಕೆಗಳನ್ನು ಮಂಡಿಸುತ್ತೇವೆ. ಕೇವಲ ಚರ್ಚೆಯನ್ನು ಮಾಡಿ ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡುವ ಉದ್ದೇಶವಿದೆಯೇ? ನ್ಯಾಯಾಲಯದಲ್ಲಿ ಯಾರಾದರೂ ಆಕ್ಷೇಪಣೆ ಸಲ್ಲಿಸಿದರೆ ನಾವು ಹೋರಾಟ ನಡೆಸುತ್ತೇವೆ. ಕಾನೂನನ್ನು ಮೀರಿ ಯಾರೂ ಬೇಡಿಕೆ ಮಂಡಿಸಲು ಸಾಧ್ಯವಿಲ್ಲ.
2. ಜರಾಂಗೆ ಪಾಟೀಲ ಅವರು ಸಾರಾಸಗಟು ಮೀಸಲಾತಿಗೆ ಬೇಡಿಕೆ ಇಟ್ಟಿದ್ದರು. ಹೀಗೆ ಮಾಡಲು ಸಾಧ್ಯವಿಲ್ಲ. ‘ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ’ ಎಂದು ಅವರಿಗೆ ಹೇಳಲಾಗಿತ್ತು. ಇದಕ್ಕಾಗಿ 3 ನಿವೃತ್ತ ನ್ಯಾಯಾಧೀಶರನ್ನು ಅವರಿಗೆ ತಿಳಿಸಿ ಹೇಳಲು ಕಳುಹಿಸಲಾಗಿತ್ತು. ಅವರು ರಾಜ್ಯದಲ್ಲಿರುವ ಮರಾಠಿಗರಿಗೆ ಕುಣಬಿ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು. ಸರಕಾರವು 1967 ರ ಮೊದಲು ಕುಣಬಿಗರ ನೊಂದಣಿಯನ್ನು ಸಂಶೋಧಿಸುವ ಕೆಲಸವನ್ನು ಮಾಡಿತು. ದಾಖಲೆಗಳು ಇರುವವರಿಗೆ ಪ್ರಮಾಣಪತ್ರಗಳನ್ನು ಒದಗಿಸಲಾಗಿದೆ. ಅರ್ಧದಷ್ಟು ಮರಾಠ ಸಮಾಜಕ್ಕೆ ನೀಡಲಾಗಿದ್ದ ಮೀಸಲಾತಿ ರದ್ದಾಗಿದೆ. ಮರಾಠಾ ಸಮಾಜ ಹಿಂದುಳಿದ ವರ್ಗವಾಗಿದೆಯೆಂದು ಸಿದ್ಧಗೊಳಿಸುವ ವಿಷಯವಾಗಿದೆ. ಅದಕ್ಕಾಗಿ ಎರಡೂವರೆ ಲಕ್ಷ ನೌಕರರು ಸಮೀಕ್ಷೆ ಮಾಡಿ, ಮಾಹಿತಿಯನ್ನು ಸಂಗ್ರಹಿಸಿದ ಬಳಿಕ ಅದು ಸಿದ್ಧವಾಗಿದೆ. ನ್ಯಾಯಾಲಯವು ನೊಂದಾಯಿಸಿರುವ ಕುಂದು ಕೊರತೆಗಳನ್ನು ಸಹಜವಾಗಿ ಸರಿಪಡಿಸಲಾಗಿದೆ.
3. ಮರಾಠಾ ಚಳವಳಿಯ ಸಂದರ್ಭದಲ್ಲಿ ಕಲ್ಲುಗಳನ್ನು ಎಸೆಯಲಾಯಿತು. `ಯಾರು ಕಲ್ಲುಗಳನ್ನು ಎಸೆದರು?’, ಇದರ ಎಲ್ಲಾ ವರದಿಗಳು ಪೊಲೀಸರ ಬಳಿ ಇವೆ.